ಡೆಹ್ರಾಡೂನ್ (ಉತ್ತರಾಖಂಡ): ಕೊರೊನಾ ವೈರಸ್ ಹರಡುವುದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್ ಹೇರಿದ ನಂತರ, ಉತ್ತರಾಖಂಡದಲ್ಲಿ 1309 ಕೌಟುಂಬಿಕ ಹಿಂಸಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಜ್ಯ ಪೊಲೀಸ್ ನಿಯಂತ್ರಣ ಕೊಠಡಿಯ ದಾಖಲೆಗಳ ಪ್ರಕಾರ, ಉಧಮ್ ಸಿಂಗ್ ನಗರ ಜಿಲ್ಲೆಯಿಂದಲೇ 438 ಕೌಟುಂಬಿಕ ಹಿಂಸಾಚಾರದ ದೂರುಗಳು ದಾಖಲಾಗಿದ್ದು, ಡೆಹ್ರಾಡೂನ್‌ನಲ್ಲಿ 312, ಹರಿದ್ವಾರದಲ್ಲಿ 281 ಮತ್ತು ನೈನಿತಾಲ್‌ನಲ್ಲಿ 116 ದೂರುಗಳು ದಾಖಲಾಗಿವೆ.
ಈ ಪ್ರದೇಶಗಳಲ್ಲದೆ ರಾಜ್ಯದ ಇತರ ಒಂಬತ್ತು ಜಿಲ್ಲೆಗಳಿಂದಲೂ ದೂರು ದಾಖಲಾಗಿದೆ.