ಪಥನಮತ್ತಿಟ್ಟ(ಕೇರಳ): ಮಕರ ಮಹೋತ್ಸವಕ್ಕೆ ಇನ್ನು ಒಂದು ದಿನವಷ್ಟೇ ಬಾಕಿ ಉಳಿದಿದೆ. ಮಹೋತ್ಸವ ಬಗ್ಗೆ ಕ್ಷೇತ್ರದಲ್ಲಿ ಸಂಪೂರ್ಣ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಮಧ್ಯಾಹ್ನ 1 ಗಂಟೆಯಿಂದ ಪಂದಳಂ ವಲಿಯಕೋಯಿಕಲ್ ಕ್ಷೇತ್ರದಿಂದ ಅಯ್ಯಪ್ಪನ ಆಭರಣ ಶೋಭಾಯಾತ್ರೆ ಆರಂಭಗೊಂಡಿದ್ದು, ಬುಧವಾರ ಸಂಜೆ ಸನ್ನಿಧಾನ ತಲುಪಲಿದೆ.
ಮಕರ ಮಹೋತ್ಸವದ ನಿಮಿತ್ತ ಬುಧವಾರ ಸಂಜೆ ಮಕರ ಜ್ಯೋತಿ ದರ್ಶನವಾಗಲಿದ್ದು, ಬಳಿಕ ಗರ್ಭಗುಡಿಯಲ್ಲಿ ಸಂಜೆ ಮಕರ ಸಂಕ್ರಮಣ ಪೂಜೆ ನಡೆಯುವುದು. ಸಂಕ್ರಮಣ ಪೂಜಾ ಸಂದರ್ಭದಲ್ಲಿ ತೆಂಗಿನಕಾಯಿ ಅಭಿಷೇಕ ನಡೆಯುವುದು. ಪಂದಳ ಅರಮನೆಯಿಂದ ತಲುಪುವ ಆಭರಣಗಳನ್ನು ಅಯ್ಯಪ್ಪನಿಗೆ ತೊಡಿಸಿ ದೀಪಾರಾಧನೆ ನಡೆಯಲಿದೆ. ದೇವಸ್ಥಾನ ಹಾಗೂ ಪರಿಸರ ಪ್ರದೇಶಗಳಲ್ಲಿ ಶುದ್ದಿಕ್ರಿಯೆಗಳು ನಡೆಯಿತು. ಮಕರ ಜ್ಯೋತಿಯ ಬಳಿಕದ ದಿನಗಳಲ್ಲಿ ಸನ್ನಿಧಾನದಲ್ಲಿ ಪಡಿ ಪೂಜೆ ಹಾಗೂ ಉದಯಾಸ್ತಮ ಪೂಜೆ ನಡೆಯುವುದು.
ಪಿ.ಪ್ರದೀಪ್ ಕುಮಾರ್ ವರ್ಮಾ ರ್ಯಾಲಿಯ ನೇತೃತ್ವ ವಹಿಸಲಿದ್ದು, ಪಲಾಲಂ ವಲಿಯಾ ತಂಬುರಂ ಪಿ.ರಾಮ ವರ್ಮ ಪ್ರತಿ ನಿಧಿಸಲಿದ್ದಾರೆ. ಅರಮನೆಯ ಪ್ರತಿನಿಧಿ ಬೆಳಗ್ಗೆ 12.55ಕ್ಕೆ ಪಲ್ಲಕ್ಕದಲ್ಲಿ ದೇವಾಲಯದಿಂದ ಹೊರಡುತ್ತದೆ.