ಪಾಟ್ನಾ: ಮನುಷ್ಯರು, ಪ್ರಾಣಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಿ, ಅವುಗಳ ಪ್ರಾಣ ಉಳಿಸುವುದು ಸರ್ವೆ ಸಾಮಾನ್ಯ. ಆದರೆ ಹಾವಿಗೆ ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ಬಗ್ಗೆ ನೀವೂ ಇಲ್ಲಿಯವರೆಗೆ ಕೇಳಿಲ್ಲ ಎಂದು ಅನಿಸುತ್ತದೆ. ಆದರೆ ಅಂತಹ ಘಟನೆವೊಂದು ಬಿಹಾರಾದ ಪಾಟ್ನಾದಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಹಾವಿನ ಶಸ್ತ್ರಚಿಕಿತ್ಸೆಯನ್ನ ಬಿಹಾರದ ಪಶುವೈದ್ಯಕೀಯ ಕಾಲೇಜ್ನಲ್ಲಿ ನಡೆಸಲಾಗಿದ್ದು, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಹಾವಿನ ಬಾಲದಲ್ಲಿ ಗಂಭೀರವಾಗಿ ಗಾಯಗಳಾಗಿ ಅದು ನರಳಾಡುತ್ತಿತ್ತು. ಈ ವೇಳೆ ಅದರ ಬಾಯಿಗೆ ಆಮ್ಲಜನಕ ಟ್ಯೂಬ್ ಹಾಕುವ ಮೂಲಕ ಯಶಸ್ವಿ ಚಿಕಿತ್ಸೆ ನಡೆಸಲಾಗಿದೆ.
ಹಾವಿನ ಪರಿಸ್ಥಿತಿ ನೋಡಲಾಗದೇ ವ್ಯಕ್ತಿಯೋರ್ವ ಹಾವನ್ನು ಹತ್ತಿರದ ಪಶುಚಿಕಿತ್ಸಾಲಯಕ್ಕೆ ಕೊಂಡೊಯ್ದರು. ತಕ್ಷಣ ಅದಕ್ಕೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಬೆನ್ನಿಗೆ ಹೊಲಿಗೆ ಹಾಕಿದ್ದಾರೆ.
ಹಾವಿನ ಬಾಲ ಶೇ 2ರಷ್ಟು ಮಾತ್ರ ಅದರ ದೇಹಕ್ಕೆ ಅಂಟಿಕೊಂಡಿತ್ತು. ತಕ್ಷಣ ಶಸ್ತ್ರಚಿಕಿತ್ಸೆ ನಡೆಸಿರುವ ವೈದ್ಯರು ಬರೋಬ್ಬರಿ 2 ಗಂಟೆಗಳ ಕಾಲ ಈ ಕಾರ್ಯಾಚರಣೆ ನಡೆಸಿ ಅದರ ಪ್ರಾಣ ಉಳಿಸಿದ್ದಾರೆ. ಜತೆಗೆ ಅದನ್ನ ಎರಡು ದಿನಗಳ ಕಾಲ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಇರಿಸಲಾಗಿತ್ತು. ತದನಂತರ ಕಾಡಿಗೆ ಬಿಡಲಾಗಿದೆ. ಧೋಡ್ವಾ ಜಾತಿಯ ಇದಾಗಿದ್ದು, ಅಪರೂಪದ ಹಾವುಗಳ ಜಾತಿಯಲ್ಲಿ ಒಂದಾಗಿದೆ.
ವೈದ್ಯರು ಹೇಳಿದ್ದೇನು?
ಪಶುವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗದ ಅರ್ಚನಾ ಕುಮಾರಿ ಮಾತನಾಡಿದ್ದು, ಹಾವು ಗಂಭೀರವಾಗಿ ಗಾಯಗೊಂಡಿತ್ತು. ಸೋಂಕು ದೇಹದ ತುಂಬಾ ಹರಡುತ್ತಿತ್ತು. ಶಸ್ತ್ರಚಿಕಿತ್ಸೆಯಿಂದ ಅವರ ಬಾಲ ತೆಗೆಯಲಾಗಿದೆ. ಶಸ್ತ್ರಚಿಕಿತ್ಸೆ ವೇಳೆ ಬಹಳಷ್ಟು ಜಾಗರೂಕತೆ ವಹಿಸಲಾಗಿತ್ತು ಎಂದು ತಿಳಿಸಿದ್ದಾರೆ. ಈಗಾಗಲೇ ಹಾವು ಸಂಪೂರ್ಣವಾಗಿ ಗುಣಮುಖಗೊಂಡಿದ್ದರಿಂದ ಕಾಡಿಗೆ ಬಿಡಲಾಗಿದೆ ಎಂದು ತಿಳಿಸಿದರು.