ETV Bharat / bharat

ತೀವ್ರ ಉಸಿರಾಟ ಸಮಸ್ಯೆ ಪ್ರಕರಣ; ಶೇ.1.8ರಷ್ಟು ಮಾತ್ರ ಕೋವಿಡ್​ ದೃಢ !! - ಇಂಡಿಯನ್​ ಜರ್ನಲ್ ಆಫ್​ ಮೆಡಿಕಲ್​ ರಿಸರ್ಚ್

ತೀವ್ರ ಉಸಿರಾಟ ಸೋಂಕಿನ ಪ್ರಕರಣಗಳಲ್ಲಿ ಕೋವಿಡ್​-19 ಪಾಸಿಟಿವ್​ ಪ್ರಕರಣಗಳು ಮಾ.14 ಕ್ಕೂ ಮೊದಲು ಸೊನ್ನೆ ಇದ್ದದ್ದು, ಏ.2 ರ ವೇಳೆಗೆ ಶೇ.2.6 ರಷ್ಟು ಹೆಚ್ಚಾಗಿದೆ. ತೀವ್ರ ಉಸಿರಾಟ ಸಮಸ್ಯೆ ಇರುವ ಕೋವಿಡ್​ ಸೋಂಕಿತರಲ್ಲಿ ಮೂರನೇ ಒಂದು ಭಾಗದಷ್ಟು ಜನ ವಿದೇಶ ಪ್ರಯಾಣ ಮಾಡಿಲ್ಲ ಹಾಗೂ ವಿದೇಶದಿಂದ ಬಂದವರ ಸಂಪರ್ಕ ಮಾಡಿಲ್ಲ.

corona positive having severe respiratory infections

author img

By

Published : Apr 10, 2020, 4:51 PM IST

ಹೊಸದಿಲ್ಲಿ: ತೀವ್ರತರದ ಉಸಿರಾಟ ಸಮಸ್ಯೆಯ 5,911 ಜನರನ್ನು ಟೆಸ್ಟಿಂಗ್​ ಮಾಡಿದಾಗ ಅದರಲ್ಲಿ ಕೇವಲ 104 ಪ್ರಕರಣಗಳು (ಶೇ.1.8) ಮಾತ್ರ ಕೋವಿಡ್​-19 ಪಾಸಿಟಿವ್ ಆಗಿದ್ದು ಕಂಡು ಬಂದಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಈ 104 ಸೋಂಕಿತರಲ್ಲಿ 40 ಜನ ವಿದೇಶ ಪ್ರಯಾಣ ಹಿನ್ನೆಲೆ ಅಥವಾ ವಿದೇಶದಿಂದ ಬಂದವರ ಸಂಪರ್ಕ ಹೊಂದಿಲ್ಲ ಎಂದು ಐಸಿಎಂಆರ್ ಹೇಳಿದೆ.

ಮೇಲಿನ ಸಂಶೋಧನೆಯ ಪ್ರಕಾರ ಪುರುಷರಿಗೆ ಹಾಗೂ 50 ವರ್ಷ ಮೇಲ್ಪಟ್ಟವರಿಗೆ ಕೋವಿಡ್​ ಸೋಂಕು ಪ್ರಮಾಣ ಹೆಚ್ಚಾಗಿರುವುದು ಕಂಡುಬಂದಿದೆ. 20 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 52 ಜಿಲ್ಲೆಗಳ ಪ್ರಕರಣಗಳನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಸಂಶೋಧನಾ ವರದಿಯು ಇತ್ತೀಚಿನ ಇಂಡಿಯನ್​ ಜರ್ನಲ್ ಆಫ್​ ಮೆಡಿಕಲ್​ ರಿಸರ್ಚ್​​ನಲ್ಲಿ ಪ್ರಕಟವಾಗಿದೆ.

ತೀವ್ರ ಉಸಿರಾಟ ಸೋಂಕಿನ ಪ್ರಕರಣಗಳಲ್ಲಿ ಕೋವಿಡ್​-19 ಪಾಸಿಟಿವ್​ ಪ್ರಕರಣಗಳು ಮಾ.14 ಕ್ಕೂ ಮೊದಲು ಸೊನ್ನೆ ಇದ್ದದ್ದು, ಏ.2 ರ ವೇಳೆಗೆ ಶೇ.2.6 ರಷ್ಟು ಹೆಚ್ಚಾಗಿದೆ. ದೇಶದ 15 ರಾಜ್ಯಗಳಲ್ಲಿ ತೀವ್ರ ಉಸಿರಾಟ ಸೋಂಕಿನ ಪ್ರಕರಣಗಳಲ್ಲಿ ಶೇ.1 ಕ್ಕಿಂತ ಹೆಚ್ಚು ಜನ ಕೋವಿಡ್ ಪಾಸಿಟಿವ್ ಆಗಿದ್ದಾರೆ. ತೀವ್ರ ಉಸಿರಾಟ ಸಮಸ್ಯೆ ಇರುವ ಕೋವಿಡ್​ ಸೋಂಕಿತರಲ್ಲಿ ಮೂರನೇ ಒಂದು ಭಾಗದಷ್ಟು ಜನ ವಿದೇಶ ಪ್ರಯಾಣ ಮಾಡಿಲ್ಲ ಹಾಗೂ ವಿದೇಶದಿಂದ ಬಂದವರ ಸಂಪರ್ಕ ಮಾಡಿಲ್ಲ ಎಂದು ಐಸಿಎಂಆರ್ ವರದಿಯಲ್ಲಿ ಹೇಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.