ETV Bharat / bharat

ಬಂದರುಗಳಲ್ಲಿರುವ ಈರುಳ್ಳಿ ರಫ್ತು ಮಾಡಲು ಅನುಮತಿ ನೀಡಿದ ಭಾರತ - ಈರುಳ್ಳಿ ರಫ್ತು ನಿಷೇಧ

ಈರುಳ್ಳಿ ರಫ್ತು ನಿಷೇಧಿಸುವ ಭಾರತದ ನಿರ್ಧಾರದ ಬಗ್ಗೆ ಬಾಂಗ್ಲಾದೇಶ ತೀವ್ರ ಕಳವಳ ವ್ಯಕ್ತಪಡಿಸಿದ ನಂತರ ಬಂದರುಗಳಲ್ಲಿರುವ ಈರುಳ್ಳಿಯನ್ನು ಬಾಂಗ್ಲಾದೇಶ ಸೇರಿದಂತೆ ಎಲ್ಲಾ ದೇಶಗಳಿಗೆ ರಫ್ತು ಮಾಡಲು ಭಾರತ ಅನುಮತಿ ನೀಡಿದೆ.

Onions lying on ports to be exported to countries including Bangladesh
ಬಂದರುಗಳಲ್ಲಿರುವ ಈರುಳ್ಳಿ ರಫ್ತು ಮಾಡಲು ಅನುಮತಿ
author img

By

Published : Sep 19, 2020, 1:15 PM IST

ನವದೆಹಲಿ: ಬಂದರುಗಳಲ್ಲಿ ಇರುವ ಈರುಳ್ಳಿಗಳನ್ನು ಬಾಂಗ್ಲಾದೇಶ ಸೇರಿದಂತೆ ಎಲ್ಲಾ ದೇಶಗಳಿಗೆ ರಫ್ತು ಮಾಡಲು ಭಾರತ ಅನುಮತಿ ನೀಡಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಕೋಲ್ಕತ್ತಾ ವಲಯದಲ್ಲಿ ಬಂದರಿನಲ್ಲಿ 20,089 ಮೆಟ್ರಿಕ್ ಟನ್ ಈರುಳ್ಳಿ ಇದ್ದು, ಮುಂಬೈ-2 ವಲಯದಲ್ಲಿ 4,576 ಮೆಟ್ರಿಕ್ ಟನ್ ಈರುಳ್ಳಿ ಇಡಲಾಗಿದೆ ಎಂದು ಮೂಲಗಳು ತಿಳಿಸಿವೆ. ತಿರುಚಿ ಮತ್ತು ನಾಗ್ಪುರದ ಇತರ ಸ್ಥಳಗಳಲ್ಲಿ ಕ್ರಮವಾಗಿ 933 ಮತ್ತು 258 ಮೆಟ್ರಿಕ್ ಟನ್ ಈರುಳ್ಳಿ ಇವೆ ಎನ್ನಲಾಗಿದೆ.

ಈರುಳ್ಳಿ ರಫ್ತು ನಿಷೇಧಿಸುವ ಭಾರತದ ನಿರ್ಧಾರದ ಬಗ್ಗೆ ಬಾಂಗ್ಲಾದೇಶ ತೀವ್ರ ಕಳವಳ ವ್ಯಕ್ತಪಡಿಸಿದ ನಂತರ ಈ ಬೆಳವಣಿಗೆ ಕಂಡು ಬಂದಿದೆ ಎಂದು ವರದಿಯಾಗಿದೆ. ದೇಶೀಯ ಪೂರೈಕೆಯನ್ನು ಹೆಚ್ಚಿಸುವ ಮತ್ತು ಬೆಲೆಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ಈರುಳ್ಳಿ ರಫ್ತು ಮಾಡುವುದನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು.

ಈರುಳ್ಳಿ ರಫ್ತು ನಿಷೇಧದಿಂದ ನಮಗೆ ಅನಾನುಕೂಲವಾಗಿದೆ. ನೀವು ನಮಗೆ ನೋಟಿಸ್ ನೀಡಿದ್ದರೆ, ನಾವು ಅದನ್ನು ಬೇರೆಡೆಯಿಂದ ಪಡೆಯಬಹುದಿತ್ತು. ಆಹಾರವನ್ನು ತಯಾರಿಸುವಾಗ ಈರುಳ್ಳಿ ಹಾಕದಂತೆ ನನ್ನ ಅಡುಗೆಯವರಿಗೆ ಸೂಚನೆ ನೀಡಿದ್ದೇನೆ. ನೀವು ಅಂತಹ ಕೆಲಸವನ್ನು ಮಾಡಲು ಬಯಸಿದರೆ, ಬೇಗನೆ ನಮಗೆ ತಿಳಿಸಿ ಎಂದು ಕಳೆದ ಅಕ್ಟೋಬರ್‌ನಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ಭೇಟಿ ನೀಡಿದ್ದಾಗ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.