ETV Bharat / bharat

ಸಮಾಜದಲ್ಲಿ ದ್ವೇಷ ಹರಡಿ, ಗೋಡ್ಸೆ ಹೊಗಳುವವರೇ 'ತುಕ್ಡೆ ತುಕ್ಡೆ ಗ್ಯಾಂಗ್' : ಕಾನೂನು ಮಂತ್ರಿಗೆ ಸಿಬಲ್ ಟ್ವಿಟೇಟು

author img

By

Published : Dec 14, 2020, 1:12 PM IST

ಮಾನ್ಯ ಮಂತ್ರಿಗಳೇ, ಪ್ರತಿಯೊಬ್ಬ ನಾಗರಿಕನನ್ನು ಎರಡು ದೃಷ್ಟಿಕೋನಗಳಿಂದ ನೋಡುವವನು, ಸಮಾಜದಲ್ಲಿ ದ್ವೇಷವನ್ನು ಹರಡುವವನು, ಗೋಡ್ಸೆಯನ್ನು ಹೊಗಳುವವನು ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್ ಹೊರತು ನಮ್ಮ ರೈತರಲ್ಲ..

Kapil Sibal
ಕಪಿಲ್ ಸಿಬಲ್

ನವದೆಹಲಿ : ನೀತಿಗಳ ಮೂಲಕ ಸಮಾಜದಲ್ಲಿ ಭೀತಿ ಉಂಟು ಮಾಡುವವರು ನಿಜವಾದ 'ತುಕ್ಡೆ ತುಕ್ಡೆ ಗ್ಯಾಂಗ್' ಹೊರತು ರೈತರಲ್ಲ ಎಂದು ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಹೇಳಿದ್ದಾರೆ.

ರೈತರ ಪ್ರತಿಭಟನೆಯನ್ನು ದುರಪಯೋಗಪಡಿಸಿಕೊಂಡು ದೇಶವನ್ನು ಒಡೆಯುವ ತುಕ್ಡೆ ತುಕ್ಡೆ ಗ್ಯಾಂಗ್ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ನಿನ್ನೆಯಷ್ಟೇ ಕೇಂದ್ರ ಕಾನೂನು ಸಚಿವ ರವಿಶಂಕರ್​ ಪ್ರಸಾದ್​ ಹೇಳಿಕೆ ನೀಡಿದ್ದರು.

  • Mr Minister

    असली टुकड़े टुकड़े गैंग कौन हैं :

    जो हर नागरिक को दो नज़रों से देखते हैं
    जो समाज में नफ़रत फैलाते हैं
    जो नीतियों से समाज में दहशत फैलाते हैं
    जो गोडसे की प्रशंसा करते हैं

    हमारे किसान नहीं !

    — Kapil Sibal (@KapilSibal) December 14, 2020 " class="align-text-top noRightClick twitterSection" data=" ">

ಇದಕ್ಕೆ ತಿರುಗೇಟು ನೀಡಿರುವ ಸಿಬಲ್​​, "ಮಾನ್ಯ ಮಂತ್ರಿಗಳೇ, ಪ್ರತಿಯೊಬ್ಬ ನಾಗರಿಕನನ್ನು ಎರಡು ದೃಷ್ಟಿಕೋನಗಳಿಂದ ನೋಡುವವನು, ಸಮಾಜದಲ್ಲಿ ದ್ವೇಷವನ್ನು ಹರಡುವವನು, ನೀತಿಗಳ ಮೂಲಕ ಸಮಾಜದಲ್ಲಿ ಭೀತಿ ಉಂಟು ಮಾಡುವವನು, ಗೋಡ್ಸೆಯನ್ನು ಹೊಗಳುವವನು ನಿಜವಾದ ತುಕ್ಡೆ ತುಕ್ಡೆ ಗ್ಯಾಂಗ್, ನಮ್ಮ ರೈತರಲ್ಲ" ಎಂದು ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ದೆಹಲಿ ಗಡಿಗಳಿಂದ ಪ್ರತಿಭಟನಾನಿರತ ರೈತರ ತೆರವುಗೊಳಿಸುವಂತೆ ಸುಪ್ರೀಂಗೆ ಅರ್ಜಿ.. ಡಿ.16ಕ್ಕೆ ವಿಚಾರಣೆ

ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಸಿಂಘು, ಟಿಕ್ರಿ ಸೇರಿದಂತೆ ದೆಹಲಿಯ ಗಡಿಗಳಲ್ಲಿ ಪಂಜಾಬ್​ ಹಾಗೂ ಹರಿಯಾಣ ರೈತರು ಕಳೆದ 18 ದಿನಗಳಿಂದ 'ದೆಹಲಿ ಚಲೋ' ಪ್ರತಿಭಟನೆ ನಡೆಸುತ್ತಿದ್ದಾರೆ.

ಗಡಿಭಾಗಗಳಲ್ಲೇ ರೈತರನ್ನು ದೆಹಲಿ ಪ್ರವೇಶಿಸದಂತೆ ತಡೆಯಲಾಗುತ್ತಿದೆ. ರೈತ ಸಂಘಟನೆಗಳೊಂದಿಗೆ ಕೇಂದ್ರ ಸರ್ಕಾರ ಆರು ಸುತ್ತು ಮಾತುಕತೆ ನಡೆಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಪಟ್ಟುಬಿಡದ ರೈತರು ಹಗಲು-ರಾತ್ರಿ ಧರಣಿ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.