ಗುವಾಹಟಿ (ಅಸ್ಸೋಂ): ದೇಶದೊಳಗೆ ಅಕ್ರಮವಾಗಿ ನುಸುಳಲು ಯತ್ನಿಸುತ್ತಿದ್ದ ರೋಹಿಂಗ್ಯಾ ಸಮುದಾಯದ 13 ಜನರ ತಂಡವನ್ನು ಅಸ್ಸೋಂನ ಸುರೈಬಾರಿ ಪೊಲೀಸರು ಕರೀಂಗಂಜ್ ಎಂಬಲ್ಲಿ ವಶಕ್ಕೆ ಪಡೆದಿದ್ದಾರೆ.
ಇವರು ಜಮ್ಮು ಕಾಶ್ಮೀರ, ಹೈದರಾಬಾದ್ ಮತ್ತು ದೆಹಲಿಗೆ ಪ್ರಯಾಣ ಬೆಳಸಲು ಅಣಿಯಾಗಿದ್ದರು ಎಂಬ ಮಾಹಿತಿ ದೊರೆತಿದೆ. ಈ ತಂಡದಲ್ಲಿ 3 ಮಂದಿ ಪುರುಷರು, 4 ಮಂದಿ ಮಹಿಳೆಯರು ಮತ್ತು 6 ಮಂದಿ ಮಕ್ಕಳು ಇದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಈ ತಂಡದ ಸದಸ್ಯರು ತ್ರಿಪುರಾದ ರಾಜಧಾನಿ ಅಗರ್ತಲಾದಿಂದ, ಗುಹಾಹಟಿಗೆ ಆಗಮಿಸುತ್ತಿದ್ದರಂತೆ. ಸದ್ಯ ಇವರೆಲ್ಲಾ ಪೊಲೀಸರ ವಶದಲ್ಲಿದ್ದು ವಿಚಾರಣೆ ನಡೆಯುತ್ತಿದೆ.
ಓದಿ: ಇಫ್ಕೋ ರಸಗೊಬ್ಬರ ಕಾರ್ಖಾನೆಯಲ್ಲಿ ಅನಿಲ ಸೋರಿಕೆ : ಇಬ್ಬರು ನೌಕರರು ಸಾವು, 15 ಮಂದಿ ಅಸ್ವಸ್ಥ
ಈ ತಂಡದ ಯಾರೊಬ್ಬರಲ್ಲಿಯೂ ಪ್ರಯಾಣಕ್ಕೆ ಪೂರಕವಾದ ಯಾವುದೇ ರೀತಿಯ ಅಧಿಕೃತ ದಾಖಲೆ ಪತ್ರಗಳಿಲ್ಲ. ನಾಲ್ಕು ಸಾವಿರ ರೂ ಮೌಲ್ಯದ ಭಾರತ ಮತ್ತು ಬಾಂಗ್ಲಾದೇಶಿ ಕರೆನ್ಸಿ, ನಕಲಿ ಆಧಾರ್ ಕಾರ್ಡ್ ಹಾಗೂ ಇನ್ನಿತರ ನಕಲಿ ದಾಖಲೆ ಪತ್ರಗಳು ಪೊಲೀಸರಿಗೆ ದೊರೆತಿವೆ.