ಪಶ್ಚಿಮ ಮಿಡ್ನಾಪೋರ್ (ಪಶ್ಚಿಮ ಬಂಗಾಳ): ಮುಂಜಾನೆ ವೇಳೆ ಜಿಲ್ಲೆಯ ದಾಸ್‌ಪುರ ಬ್ಲಾಕ್‌ನ ನಿಸ್ಚಿಂತಾಪುರ ಪ್ರದೇಶದಲ್ಲಿ ಕಾಲುವೆಯೊಂದರ ಪಕ್ಕದಲ್ಲಿ ಕಟ್ಟಲಾಗಿದ್ದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದಿರುವ ಘಟನೆ ನಡೆದಿದೆ.
ಬೆಳಗ್ಗೆ ಸುಮಾರು 8 ಗಂಟೆ ಹೊತ್ತಿಗೆ ಕಟ್ಟಡ ಅಲುಗಾಡಲಾರಂಭಿಸಿತು. ಕೆಲವೇ ಸೆಕೆಂಡುಗಳಲ್ಲಿ ಕುಸಿದಿದೆ. ಸದ್ಯ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ. ಈ ಕಟ್ಟಡವು ಸ್ಥಳೀಯ ಉದ್ಯಮಿ ನಿಮೈ ಸಮಂತಾ ಎಂಬುವರಿಗೆ ಸೇರಿದ್ದಾಗಿತ್ತು. ಕಟ್ಟಡವು ಅಮೃತಶಿಲೆ ಅಂಗಡಿ ಮತ್ತು ನೆಲಮಹಡಿಯಲ್ಲಿ ಗೃಹೋಪಯೋಗಿ ಸಾಮಗ್ರಿಗಳ ಅಂಗಡಿ ಹೊಂದಿತ್ತು.
ಎಂಜಿಎನ್‌ಆರ್‌ಇಜಿಎ ಅಡಿಯಲ್ಲಿ ಕಳೆದ ಕೆಲವು ವಾರಗಳಿಂದ ಹತ್ತಿರದ ಗೊಮ್ರಾಯ್ ಕಾಲುವೆಯ ಸ್ವಚ್ಛಗೊಳಿಸುವ ಮತ್ತು ಹೂಳೆತ್ತುವ ಕಾರ್ಯಾಚರಣೆ ನಡೆಯುತ್ತಿತ್ತು. ಹೂಳೆತ್ತುವ ವೇಳೆ ಕಾಲುವೆಯಿಂದ ಮಣ್ಣನ್ನು ಹೊರತೆಗೆದಾಗ ಅದರ ಅಡಿಪಾಯ ಹಾನಿಗೊಳಗಾಗಿದೆ ಎನ್ನುತ್ತಾರೆ ಸ್ಥಳೀಯರು. ಇನ್ನೂ ಈ ಕಾಮಗಾರಿಯಲ್ಲಿ ಹೆಚ್ಚಾಗಿ ಕೌಶಲ್ಯರಹಿತ ಕಾರ್ಮಿಕರನ್ನು ನೇಮಿಸಿಕೊಳ್ಳಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.