ETV Bharat / bharat

ತಿರುಚ್ಚಿ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರಿಂದ ಕೋಟಿ ರೂ ಮೌಲ್ಯದ ಬಂಗಾರ ವಶ

author img

By

Published : Dec 12, 2020, 4:17 PM IST

ವಿದೇಶದಿಂದ ಆಗಮಿಸಿದ ಮೂವರು ಪ್ರಯಾಣಿಕರಿಂದ ಸುಮಾರು 2.1 ಕೆ.ಜಿ ತೂಕದ, 1.07 ಕೋಟಿ ರೂ ಮೌಲ್ಯದ ಅಕ್ರಮ ಚಿನ್ನವನ್ನು ತಿರುಚ್ಚಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.

Tamil Nadu
ತಿರುಚ್ಚಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ತಮಿಳುನಾಡು: ಸಿಂಗಾಪುರ ಮತ್ತು ದುಬೈನಿಂದ ಆಗಮಿಸಿದ ಪ್ರಯಾಣಿಕರಿಂದ 1.07 ಕೋಟಿ ರೂ ಮೌಲ್ಯದ ಚಿನ್ನವನ್ನು ತಿರುಚ್ಚಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ.

ತಿರುಚ್ಚಿಯ ವಾಯು ಗುಪ್ತಚರ ಘಟಕವು ಮೂವರು ಪ್ರಯಾಣಿಕರಿಂದ ಇಷ್ಟೊಂದು ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದೆ. ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮೂಲಕ ಈ ಪ್ರಯಾಣಿಕರು ದುಬೈ ಮತ್ತು ಸಿಂಗಾಪುರದಿಂದ ಆಗಮಿಸಿದ್ದರು.

ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ಪ್ರಯಾಣಿಕರ ವಸ್ತುಗಳನ್ನು ಪರಿಶೀಲಿಸುವಾಗ, ಓರ್ವನ ಅನುಮಾನಾಸ್ಪದ ರೀತಿಯ ವರ್ತನೆ ಹಾಗೂ ಆತ ಏನನ್ನೋ ಮರೆಮಾಚುತ್ತಿರುವ ರೀತಿ ಕಂಡುಬಂದ ಕಾರಣ ಆತನನ್ನು ತಕ್ಷಣ ಪರಿಶೀಲಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತ ಪ್ರಾಥಮಿಕ ತನಿಖೆಯಲ್ಲಿ ಕಡಲೂರು ಮೂಲದ ಸುರೇಶ್, ನಾಗಪಟ್ಟಿನಂನ ಮೊಹಮ್ಮದ್ ಸಾದಿಕ್ ಹಾಗೂ ತಂಜಾವೂರಿನ ಮುಹಮ್ಮದ್ ಜಿಯಾವುದ್ದೀನ್ ಸಾಕಿಬ್ ಆರೋಪಿಗಳು ಎಂದು ಗುರುತಿಸಲಾಗಿದೆ.

ಓದಿ: ಪ್ರಯಾಣಿಕರ ಜೀನ್ಸ್‌ ಪ್ಯಾಂಟ್‌, ಒಳಉಡುಪುಗಳಲ್ಲಿತ್ತು 56 ಲಕ್ಷ ಮೌಲ್ಯದ ಚಿನ್ನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.