ETV Bharat / bharat

ವಿಶ್ವದಲ್ಲಿ 60 ಲಕ್ಷ​ ನರ್ಸ್​ಗಳ ಕೊರತೆ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ - ಪಿಪಿಇ

ಜಗತ್ತಿನಲ್ಲಿ ಕೇವಲ 28 ಮಿಲಿಯನ್​ ನರ್ಸ್​ಗಳು ಕಾರ್ಯನಿರ್ವಹಿಸುತ್ತಿದ್ದು, 6 ಮಿಲಿಯನ್​ ನರ್ಸ್​ಗಳ ಕೊರತೆ ಕಾಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ತಿಳಿಸಿದೆ. ಜಗತ್ತಿನಲ್ಲಿ ನರ್ಸ್​ಗಳ ಕೊರತೆಯನ್ನು ಎತ್ತಿ ತೋರಿಸಿರುವ ವಿಶ್ವಸಂಸ್ಥೆಯ ವರದಿಯಿಂದ ನಾವು ಎಚ್ಚೆತ್ತುಕೊಳ್ಳಬೇಕಿದೆ ಹಾಗೂ ನರ್ಸ್​ ಸಮುದಾಯಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಡಾ. ಟೆಡ್ರೋಸ್ ಅಧನೋಮ್ ಘೆಬ್ರೆಯುಸುಸ್ ಹೇಳಿದ್ದಾರೆ.

shortage of 5.9 million nurses
shortage of 5.9 million nurses
author img

By

Published : Apr 7, 2020, 4:06 PM IST

ಹೈದರಾಬಾದ್: ವೈಯಕ್ತಿಕ ಸುರಕ್ಷತಾ ಸಾಧನಗಳ (ಪಿಪಿಇ) ಕೊರತೆಯಿಂದಾಗಿ ಜಗತ್ತಿನಲ್ಲಿ ಕೋವಿಡ್​ ವಿರುದ್ಧದ ಹೋರಾಟದಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿಯ ಆರೋಗ್ಯ ಈಗಾಗಲೇ ಅಪಾಯದಲ್ಲಿದೆ. ಇದರ ಹೊರತಾಗಿ ಕೋವಿಡ್​ ವಿರುದ್ಧ ಹೋರಾಡಲು 6 ಮಿಲಿಯನ್​ ನರ್ಸ್​ಗಳ ಕೊರತೆ ಉಂಟಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ನರ್ಸ್​ಗಳ ಪಾತ್ರ ಬಹಳ ಮುಖ್ಯವಾಗಿದೆ. ಆದರೆ ಈಗ ಜಗತ್ತಿನಲ್ಲಿ ಕೇವಲ 28 ಮಿಲಿಯನ್​ ನರ್ಸ್​ಗಳು ಕಾರ್ಯನಿರ್ವಹಿಸುತ್ತಿದ್ದು, ಒಟ್ಟಾರೆ 5.9 ಮಿಲಿಯನ್​ ನರ್ಸ್​ಗಳ ಕೊರತೆ ಕಾಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಯಲ್ಲಿ ತಿಳಿಸಿದೆ.

"ನರ್ಸ್​ಗಳು ಸಮಗ್ರ ಆರೋಗ್ಯ ವ್ಯವಸ್ಥೆಯ ಅಡಿಪಾಯದಂತಿದ್ದಾರೆ. ಜಗತ್ತಿನಲ್ಲಿ ನರ್ಸ್​ಗಳ ಕೊರತೆಯನ್ನು ಎತ್ತಿ ತೋರಿಸಿರುವ ವಿಶ್ವಸಂಸ್ಥೆಯ ವರದಿಯಿಂದ ನಾವು ಎಚ್ಚೆತ್ತುಕೊಳ್ಳಬೇಕಿದೆ ಹಾಗೂ ನರ್ಸ್​ ಸಮುದಾಯಕ್ಕೆ ಬೆಂಬಲವಾಗಿ ನಿಲ್ಲಬೇಕಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡೈರೆಕ್ಟರ್ ಜನರಲ್ ಡಾ. ಟೆಡ್ರೋಸ್ ಅಧನೋಮ್ ಘೆಬ್ರೆಯುಸುಸ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.