ನವದೆಹಲಿ: ನೂತನವಾಗಿ ಜಾರಿಯಾಗಿರುವ ಮೋಟಾರು ವಾಹನ ಕಾಯ್ದೆಯಿಂದ ದಂಡ ಕಟ್ಟಲಾಗೆ ವಾಹನ ಸವಾರರು ಪರದಾಡುತ್ತಿದ್ದಾರೆ.
ಭಾರೀ ಮೊತ್ತದ ದಂಡ ತೆರಲಾಗದೆ ವಾಹನ ಸವಾರರು ಕಂಗಾಲಾಗಿದ್ದಾರೆ. ಈ ನೂತನ ಕಾಯ್ದೆ ಏಕೆ ಇಷ್ಟೊಂದು ಕಠಿಣವಾಗಿದೆ ಎಂಬ ಪ್ರಶ್ನೆಗೆ ಕೇಂದ್ರ ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಉತ್ತರ ನೀಡಿದ್ದಾರೆ.
ಭಾರತದಲ್ಲಿ ಪ್ರತೀ ವರ್ಷ 5 ಪಕ್ಷ ಅಪಘಾತಗಳು ಸಂಭವಿಸುತ್ತಿದ್ದು, ಒಂದು ವರ್ಷಕ್ಕೆ 1.5 ಲಕ್ಷ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಪಘಾತದಿಂದ ಜೀವ ಕಳೆದುಕೊಂಡವರ ಪೈಕಿ ಶೆಕಡಾ 65 ರಷ್ಟು ಜನ 18 ರಿಂದ 35 ವರ್ಷ ವಯಸ್ಸಿನವರು. ನಾವು ಇವರ ಪ್ರಾಣವನ್ನ ಉಳಿಸಬಾರದೇ ಎಂದು ನಿತಿನ್ ಗಡ್ಕರಿ ಪ್ರಶ್ನೆ ಮಾಡಿದ್ದಾರೆ
ಈ ಹಿಂದೆ ವಿಧಿಸುತ್ತಿದ್ದ ದಂಡದ ಮೊತ್ತವನ್ನ 1988ರಲ್ಲಿ ನಿಗದಿಪಡಿಸಿಲಾಗಿತ್ತು. ಜನರು ಕಾನೂನನ್ನು ಗೌರವಿಸದಿದ್ದರೆ ಅಥವಾ ಕಾನೂನಿಗೆ ಭಯಪಡದಿದ್ದರೆ ಅದು ಉತ್ತಮ ಸ್ಥಳವಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.