ETV Bharat / bharat

ಮುಂದುವರಿದ ಕಚ್ಚಾ ತೈಲ ಬೆಲೆ ಇಳಿಕೆ ಸಮರ: ಮತ್ತೆ ಕಡಿಮೆಯಾದ ದರ

ಏಷ್ಯಾ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಮತ್ತೆ ಶೇ 6 ರಷ್ಟು ಕಡಿತವಾಗಿದೆ. ಮಾರುಕಟ್ಟೆಯಲ್ಲಿ ಭಾರಿ ನಷ್ಟ ಉಂಟಾಗಿದ್ದು, ಸೌದಿ ಅರೇಬಿಯಾ ಹಾಗೂ ರಷ್ಯಾ ನಡುವೆ ದರ ಸಮರ ಮುಂದುವರೆದಿದೆ.

Oil prices claw back ground after crash
ಮುಂದುವರಿದ ಕಚ್ಚಾ ತೈಲ ಬೆಲೆ ಇಳಿಕೆ ಸಮರ
author img

By

Published : Mar 10, 2020, 9:39 AM IST

ಸಿಂಗಪೂರ: ಏಷ್ಯಾ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಮತ್ತೆ ಶೇ 6 ರಷ್ಟು ಕಡಿತವಾಗಿದೆ. ಮಾರುಕಟ್ಟೆಯಲ್ಲಿ ಭಾರಿ ನಷ್ಟ ಉಂಟಾಗಿದ್ದು, ಸೌದಿ ಅರೇಬಿಯಾ ಹಾಗೂ ರಷ್ಯಾ ನಡುವೆ ದರ ಸಮರ ಮುಂದುವರೆದಿದೆ.

ಇಂದು ಕಚ್ಚಾತೈಲ ಬೆಲೆ ಬ್ಯಾರಲ್​ ವೊಂದಕ್ಕೆ 33 ಡಾಲರ್​ಗೆ ಕುಸಿದಿದೆ. ನಿನ್ನೆ 36 ಡಾಲರ್​​ ಇದ್ದ ಬೆಲೆ 33ಕ್ಕೆ ಇಳಿಕೆ ಕಂಡಿದೆ. 1991 ರ ಗಲ್ಫ್​ ವಾರ್​ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿದೆ. ಒಪೆಕ್​ ಗ್ರೂಪ್​ ಕರೆದ ಸಭೆಯಲ್ಲಿ ಭಾಗವಹಿಸಲು ರಷ್ಯಾ ನಿರಾಕರಿಸಿದೆ.

ಓದಿ : ಸೌದಿ - ರಷ್ಯಾ ನಡುವಿನ ಕಚ್ಚಾತೈಲ ಸಮರ : ಪೆಟ್ರೋಲ್,​ ಡೀಸೆಲ್ ಬೆಲೆಯಲ್ಲಿ ಭಾರಿ ಇಳಿಕೆ

ಕೊರೊನಾ ವೈರಸ್​ ಹಾವಳಿಯಿಂದ ಕಚ್ಚಾ ತೈಲ ಬೆಲೆಯಲ್ಲಿ ಈ ಇಳಿಕೆ ಕಂಡು ಬಂದಿದೆ. ಇನ್ನೊಂದೆಡೆ, ರಪ್ತು ಪ್ರಮಾಣದಲ್ಲಿ ಸಮತೋಲನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸೌದಿ ಅರೆಬಿಯಾ ಉತ್ಪಾದನೆಯನ್ನ ಹೆಚ್ಚಿಸಿದೆ. ಹೀಗಾಗಿ ಬೆಲೆ ಇಳಿಕೆ ಸಮರ ಆರಂಭವಾಗಿದೆ.

ಇದೇ ಕಾರಣದಿಂದ ವಿಶ್ವದ ಷೇರುಮಾರುಕಟ್ಟೆಗಳು ನಡುಗುತ್ತಿವೆ. ಅಮೆರಿಕದ ಡಾ ಜೋನ್ಸ್​​ ಹಾಗೂ ಭಾರತದ ಮುಂಬೈ ಷೇರುಪೇಟೆಗಳು ನಿನ್ನೆ 2000 ಅಂಕಗಳ ನಷ್ಟ ಅನುಭವಿಸಿದ್ದವು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.