ಗಂಜಾಂ(ಒಡಿಶಾ): ಇಲ್ಲಿನ ಗಂಜಾಮ್ನಲ್ಲಿ ಮಹಿಳೆಯೊಬ್ಬರು 19 ಕಾಲುಬೆರಳು ಮತ್ತು 12 ಕೈ ಬೆರಳುಗಳನ್ನು ಹೊಂದುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಾಣ ಮಾಡಿದ್ದಾರೆ.
ಸಾಮಾನ್ಯವಾಗಿ ಎಲ್ಲರಿಗೂ 10 ಕೈಬೆರಳು, 10 ಕಾಲ್ಬೆರಳು ಇರುತ್ತವೆ. ಆದರೆ ಒಡಿಶಾದ ಗಂಜಾಂ ಜಿಲ್ಲೆಯ 63 ವರ್ಷದ ಕುಮಾರ್ ನಾಯಕ್ ಎಂಬ ಮಹಿಳೆ ಪಾದಗಳಲ್ಲಿ 19 ಬೆರಳು, ಕೈಯಲ್ಲಿ 12 ಬೆರಳುಗಳಿವೆ. ಕುಮಾರ್ ನಾಯಕ್ ಎಂಬ ಮಹಿಳೆ ಹುಟ್ಟಿನಿಂದಲೇ ಪಾಲಿಡಾಕ್ಟೈಲಿ ಎಂಬ ಕಾಯಿಲೆಯಿಂದ ಬಳಲುತ್ತಿದ್ದಾರೆ. ಪರಿಣಾಮವಾಗಿ ಕೈ ಮತ್ತು ಕಾಲ್ಬೆರಳುಗಳ ಸಂಖ್ಯೆ ಸಾಮಾನ್ಯ ಮನುಷ್ಯರಿಗಿಂತ ಹೆಚ್ಚಾಗಿವೆ.
ಈ ಹಿಂದೆ ಗುಜರಾತ್‍ನ ದೇವೇಂದ್ರ ಸುತಾರ್ ಕೂಡ ಕೈಗಳಲ್ಲಿ 14 ಮತ್ತು ಕಾಲುಗಳಲ್ಲಿ 14 ಬೆರಳುಗಳನ್ನು ಹೊಂದಿದ್ದರು. ಇವರು ಕೂಡ ಪಾಲಿಡಾಕ್ಟೈಲಿ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಮಹಿಳೆ ಇಷ್ಟೊಂದು ಬೆರಳು ಹೊಂದಿರುವ ಕಾರಣ, ಆಕೆಯ ಮನೆಗೆ ತೆರಳಲು ಕೆಲವರು ಹಿಂದೇಟು ಸಹ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.