ಕಟಕ್: ಮೂರು ವರ್ಷಗಳ ಹಿಂದೆ ಭಾರತದ ಮೊದಲ ಕ್ರಾನಿಯೊಪಾಗಸ್ ಯಶಸ್ವಿ ಸರ್ಜರಿಯಲ್ಲಿ ಬೇರ್ಪಟ್ಟಿದ್ದ ಒಡಿಶಾದ ಸಯಾಮಿ ಅವಳಿ ಮಕ್ಕಳಲ್ಲಿ ಒಂದು ಮಗು ನಿನ್ನೆ ಸಂಜೆ ಸರ್ಕಾರಿ ಒಡೆತನದ ಶ್ರೀರಾಮ ಚಂದ್ರ ಭಂಜ (ಎಸ್‌ಸಿಬಿ) ವೈದ್ಯಕೀಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದೆ.
ಆಸ್ಪತ್ರೆಯ ತುರ್ತು ನಿಗಾ ಅಧಿಕಾರಿ ಡಾ. ಭುವನಾನಂದ ಮಹಾರಾಣ ಈ ಕುರಿತು ಮಾಹಿತಿ ನೀಡಿದ್ದು, ಮಗು ಕಾಲಿಯಾವು ಟ್ರೌಮಾ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ಮೃತಪಟ್ಟಿರುವುದಾಗಿ ತಿಳಿಸಿದರು.
-
Odisha twin separated through India's 'first' craniopagus surgery dies
— ANI Digital (@ani_digital) November 25, 2020 " class="align-text-top noRightClick twitterSection" data="
Read @ANI Story | https://t.co/hnc3Ln0o78 pic.twitter.com/Bzc8iWNwFW
">Odisha twin separated through India's 'first' craniopagus surgery dies
— ANI Digital (@ani_digital) November 25, 2020
Read @ANI Story | https://t.co/hnc3Ln0o78 pic.twitter.com/Bzc8iWNwFWOdisha twin separated through India's 'first' craniopagus surgery dies
— ANI Digital (@ani_digital) November 25, 2020
Read @ANI Story | https://t.co/hnc3Ln0o78 pic.twitter.com/Bzc8iWNwFW
2017 ರ ಅಕ್ಟೋಬರ್ನಲ್ಲಿ ನವದೆಹಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಏಮ್ಸ್) ನಲ್ಲಿ ಅವಳಿ ಮಕ್ಕಳನ್ನು ಬೇರ್ಪಡಿಸಲಾಗಿತ್ತು. 2 ವರ್ಷಗಳ ಅವಲೋಕನ ಮತ್ತು ಕೆಲ ಚಿಕಿತ್ಸೆಯ ನಂತರ ಮಕ್ಕಳನ್ನು 2019ರ ಸೆಪ್ಟೆಂಬರ್‌ನಲ್ಲಿ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿತ್ತು. ಆದರೆ ಬೇರ್ಪಟ್ಟ ಆ ಅವಳಿಗಳಲ್ಲಿ ಒಬ್ಬರಾದ ಕಾಲಿಯಾ ಬುಧವಾರ ಸಂಜೆ ಸೆಪ್ಟಿಸೆಮಿಯಾ ಸಮಸ್ಯೆ ಮತ್ತು ಆಘಾತದಿಂದ ಸಾವನ್ನಪ್ಪಿದೆಯೆಂದು ಮಾಹಿತಿ ನೀಡಿದರು.
ಪ್ರತ್ಯೇಕ ವಿಜಯನಗರ ಜಿಲ್ಲೆಗೆ ವಿರೋಧ: ಬಳ್ಳಾರಿಯಲ್ಲಿ ಪ್ರತಿಭಟನೆ ಕಿಚ್ಚು
ಕಳೆದ ಎಂಟು ದಿನಗಳಿಂದ ಕಾಲಿಯಾ ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, 14 ಸದಸ್ಯರ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಮಗು ಕಾಲಿಯಾ ಸಾವನ್ನಪ್ಪಿದೆ.
ಹಿನ್ನೆಲೆ:
ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಸಾಮಾನ್ಯ ಹೆರಿಗೆಯ ಮೂಲಕ ಬುಡಕಟ್ಟು ಸಮುದಾಯದ ಮಹಿಳೆಯು ಸಯಾಮಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಈ ಅವಳಿ ಮಕ್ಕಳಿಗೆ ಜಗ್ಗಾ ಮತ್ತು ಕಾಲಿಯಾ ಎಂದು ಹೆಸರಿಡಲಾಗಿತ್ತು. 2017ರ ಜುಲೈ 14ರಂದು ಸಯಾಮಿ ಅವಳಿ ಮಕ್ಕಳನ್ನು ಏಮ್ಸ್ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ವ್ಯಾಪಕ ಶಸ್ತ್ರಚಿಕಿತ್ಸಾ ವಿಧಾನಗಳ ಮೂಲಕ ಅಂಟಿಕೊಂಡಿದ್ದ ಮಕ್ಕಳ ತಲೆಗಳನ್ನು ಬೇರ್ಪಡಿಸಲಾಗಿತ್ತು. ಮೊದಲ ಶಸ್ತ್ರಚಿಕಿತ್ಸೆಯನ್ನು ಆಗಸ್ಟ್ 28, 2017 ರಂದು, ಸತತ 25 ಗಂಟೆಗಳ ಕಾಲ ನಡೆಸಲಾಗಿತ್ತು. 2ನೇ ಹಂತದ ಶಸ್ತ್ರಚಿಕಿತ್ಸೆಯನ್ನು 2017ರ ಅಕ್ಟೋಬರ್ 25 ರಂದು ಮಾಡಲಾಗಿತ್ತು. ಈ ಚಿಕಿತ್ಸೆ ಭಾರತದ ಮೊದಲ ಯಶಸ್ವಿ ಚಿಕಿತ್ಸೆ (ಪತ್ಯೇಕತೆ) ಎಂದು ಹೇಳಲಾಗ್ತಿದೆ.