ಭದ್ರಾಕ್(ಒಡಿಶಾ): ಇಂದು ಸಂಜೆ ವೇಳೆಗೆ ಪಶ್ಚಿಮ ಬಂಗಾಕ್ಕೆ ಅಪ್ಪಳಿಸಲಿರುವ ಅಂಫಾನ್ ಚಂಡಮಾರುತ ಮೊದಲ ಬಲಿ ಪಡೆದಿದೆ. ಒಡಿಶಾದಲ್ಲಿ 3 ತಿಂಗಳ ಗಂಡು ಮಗುವೊಂದು ಅಂಫಾನ್ ಅಬ್ಬರದಿಂದ ಮನೆ ಗೋಡೆ ಕುಸಿದ ಪರಿಣಾಮ ಕೊನೆಯುಸಿರೆಳೆದಿದೆ.
ಅಂಫಾನ್ ಚಂಡಮಾರುತದ ಕಾರಣ ಒಡಿಶಾದಲ್ಲಿ ಭಾರಿ ಮಳೆಯಾಗುತ್ತಿದ್ದು, ಮನೆಯ ಗೋಡೆ ಕುಸಿದು ಮೂರು ತಿಂಗಳ ಮಗು ಸಾವನ್ನಪ್ಪಿದೆ. ಜಿಲ್ಲೆಯ ತಿಹಿಡಿ ಬ್ಲಾಕ್ನ ಕಂಪಡಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಾಯಿ ಮತ್ತು ಮಗು ಮಲಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ಮಗುವಿನ ತಾಯಿ ಗಾಯಗೊಂಡಿದ್ದಾಳೆ.
ಒಡಿಶಾದಲ್ಲಿ ಭೀಕರ ಚಂಡಮಾರುತದಿಂದಾಗಿ ಈಗಾಗಲೇ ಲಕ್ಷಾಂತರ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.