ಕಟಕ್: ಒಡಿಶಾ ಹೈಕೋರ್ಟ್ ಸಲಿಂಗ ದಂಪತಿಗಳಿಗೆ ಲಿವ್ ಇನ್ ರಿಲೇಶನ್ ಮುಂದುವರಿಸಲು ಅವಕಾಶ ನೀಡಿದ್ದು, ಲಿಂಗ ಗುರುತನ್ನು ಲೆಕ್ಕಿಸದೆ ಮಾನವರು ತಮ್ಮ ಹಕ್ಕುಗಳನ್ನು ಸಂಪೂರ್ಣವಾಗಿ ಬಳಸಲು ಅರ್ಹರಾಗಿದ್ದಾರೆ ಎಂದು ಹೇಳಿದೆ.
ನ್ಯಾಯಮೂರ್ತಿ ಎಸ್.ಕೆ. ಮಿಶ್ರಾ ಮತ್ತು ನ್ಯಾಯಮೂರ್ತಿ ಸಾವಿತ್ರಿ ರಾಥೋ ಅವರ ವಿಭಾಗೀಯ ನ್ಯಾಯಪೀಠ ಈ ತೀರ್ಪು ನೀಡಿದೆ.
"ವಾರದ ಆರಂಭದಲ್ಲಿ 24 ವರ್ಷದ ಟ್ರಾನ್ಸ್‌ಮ್ಯಾನ್‌ನ ಹೇಬಿಯಸ್ ಕಾರ್ಪಸ್ ಮನವಿಯನ್ನು ಆಲಿಸಿದಾಗ, "ರಾಜ್ಯವು ಅವರಿಗೆ ಜೀವನ ಹಕ್ಕು, ಸಮಾನತೆಯ ಹಕ್ಕು ಸೇರಿದಂತೆ ರಕ್ಷಣೆ ಒದಗಿಸುತ್ತದೆ" ಎಂದು ಹೇಳಿದೆ.
ಈ ಹಿಂದೆ ಅರ್ಜಿದಾರರೊಬ್ಬರು ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ವಿಚಾರಣೆ ನಡೆಸಿ, ತಮ್ಮ ಲೈಂಗಿಕ ಆದ್ಯತೆಯನ್ನು ನಿರ್ಧರಿಸುವ ಹಕ್ಕು ಇಬ್ಬರಿಗೂ ಇದೆ. ಅಷ್ಟೇ ಅಲ್ಲದೆ, ಒಟ್ಟಿಗೆ ವಾಸಿಸಲು ನಿರ್ಧರಿಸಿದ ಇಬ್ಬರಿಗೆ ಆಯ್ಕೆಯ ಸ್ವಾತಂತ್ರ್ಯ ಲಭ್ಯವಿದೆ ಎಂದು ನ್ಯಾಯಮೂರ್ತಿ ಸಾವಿತ್ರಿ ರಾಥೋ ಹೇಳಿದರು.
"ಸಮಾಜವು ಅವರ ನಿರ್ಧಾರವನ್ನು ಬೆಂಬಲಿಸಬೇಕು. ಇವರಿಬ್ಬರು ಸಂತೋಷದಾಯಕ ಮತ್ತು ಸಾಮರಸ್ಯದ ಜೀವನವನ್ನು ನಡೆಸುತ್ತಾರೆ ಎಂದು ನಾವು ಭಾವಿಸುತ್ತೇವೆ ಮತ್ತು ನಂಬುತ್ತೇವೆ" ಎಂದು ನ್ಯಾಯಮೂರ್ತಿ ರಾಥೋ ಹೇಳಿದರು.