ETV Bharat / bharat

ಒಡಿಶಾದಲ್ಲಿ ಏ.30ರವರೆಗೆ ಲಾಕ್​ಡೌನ್​ ವಿಸ್ತರಣೆ... ಇಂತಹ ಆದೇಶ ಹೊರಡಿಸಿದ ದೇಶದ ಮೊದಲ ರಾಜ್ಯ! - ಕೊವಿಡ್​ ಲಾಕ್​ಡೌನ್​ ವಿಸ್ತರಣೆ

ದೇಶದಲ್ಲಿ ಲಾಕ್​ಡೌನ್​ ವಿಸ್ತರಣೆ ಮಾಡಬೇಕೋ ಬೇಡ್ವೋ ಎಂಬ ಗೊಂದಲದಲ್ಲಿರುವಾಗಲೇ ಒಡಿಶಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.

Odisha extends COVID-19 lockdown
Odisha extends COVID-19 lockdown
author img

By

Published : Apr 9, 2020, 1:13 PM IST

ಭುವನೇಶ್ವರ: ದೇಶದಲ್ಲಿ ಮಹಾಮಾರಿ ಕೊರೊನಾ ಹಾವಳಿ ಜೋರಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗ್ತಿದ್ದು, ಈಗಾಗಲೇ 6 ಸಾವಿರ ಗಡಿ ದಾಟಿದೆ.

ಲಾಕ್​ಡೌನ್​ ಆದೇಶ ಹೊರಹಾಕಿ 15 ದಿನ ಕಳೆದಿದ್ದರೂ ಸೋಂಕಿತರ ಸಂಖ್ಯೆಯಲ್ಲಿ ಕಡಿಮೆಯಾಗುತ್ತಿಲ್ಲ. ಹೀಗಾಗಿ ಮತ್ತಷ್ಟು ದಿನ ಇದರ ವಿಸ್ತರಣೆ ಮಾಡಬೇಕು ಎಂಬ ಮಾತು ಎಲ್ಲಡೆಯಿಂದ ಗಂಭೀರವಾಗಿ ಕೇಳಿ ಬರುತ್ತಿದ್ದು, ಇದರ ಬೆನ್ನಲ್ಲೇ ಒಂದು ಹೆಜ್ಜೆ ಮುಂದಿಟ್ಟಿರುವ ಒಡಿಶಾ ಸರ್ಕಾರ ಏಪ್ರಿಲ್​ 30ರವರೆಗೆ ಲಾಕ್​ಡೌನ್​ ವಿಸ್ತರಣೆ ಮಾಡಿ ಆದೇಶ ಹೊರಹಾಕಿದೆ.

ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ಈ ಮಾಹಿತಿ ಹೊರಹಾಕಿದ್ದು, ಯಾವುದೇ ಕಾರಣಕ್ಕೂ ಲಾಕ್​ಡೌನ್​ ಓಪನ್​ ಮಾಡಲ್ಲ ಎಂದಿದ್ದಾರೆ. ಇದರ ಜತೆಗೆ ಪ್ರಧಾನಿ ನರೇಂದ್ರ ಬಳಿ ಮನವಿ ಮಾಡಿರುವ ಪಟ್ನಾಯಕ್​, ದೇಶದಲ್ಲಿ ರೈಲು ಹಾಗೂ ವಿಮಾನಯಾನ ಆರಂಭಿಸದಂತೆ ಮನವಿ ಮಾಡಿಕೊಂಡಿದ್ದಾರೆ.

ಘೋಷಣೆ ಹೊರಹಾಕುವುದಕ್ಕೂ ಮುಂಚಿತವಾಗಿ ನವಿನ್ ಪಟ್ನಾಯಕ್​ ಕ್ಯಾಬಿನೆಟ್​ ಸಭೆ ನಡೆಸಿ, ತದನಂತರ ಈ ನಿರ್ಧಾರ ಹೊರಹಾಕಿದ್ದಾರೆ. ಒಡಿಶಾದಲ್ಲಿ 42 ಸೋಂಕಿತ ಪ್ರಕರಣ ಕಂಡು ಬಂದಿದ್ದು, ಓರ್ವ ಸೋಂಕಿತ ಸಾವನ್ನಪ್ಪಿದ್ದಾನೆ. ಇನ್ನು ಪಂಜಾಬ್​ನಲ್ಲಿ ಈ ಆದೇಶವನ್ನ ನಿನ್ನೆ ಘೋಷಣೆ ಮಾಡಿ ತದನಂತರ ಹಿಂಪಡೆದುಕೊಳ್ಳಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.