ನವದೆಹಲಿ: ಸ್ವಚ್ಛ ಭಾರತದ ಪರಿಕಲ್ಪನೆಗೆ ಪೂರಕವಾಗಿ ರೈಲ್ವೆ ನಿಲ್ದಾಣ ಹಾಗೂ ಏರ್ಪೋರ್ಟ್ಗಳಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.
ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿ ಚಹಾ ಹಾಗೂ ಕಾಫಿ ವಿತರಣೆಗೆ ಪ್ಲಾಸ್ಟಿಕ್ ಕಪ್ ಬದಲಾಗಿ ಮಣ್ಣಿನ ಕಪ್ಗಳಲ್ಲಿ ವಿತರಿಸಲು ಕೇಂದ್ರ ಚಿಂತನೆ ನಡೆಸಿದೆ.
ಭ್ರಷ್ಟರ ಪಾಲಿಗೆ ಮೋದಿ ಸರ್ಕಾರ ಸಿಂಹಸ್ವಪ್ನ... 22 ಅಧಿಕಾರಿಗಳಿಗೆ ಗೇಟ್ಪಾಸ್..!
ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಸ ಆಲೋಚನೆಯನ್ನು ರಿವೀಲ್ ಮಾಡಿದ್ದು, ರೈಲು, ವಿಮಾನ ಹಾಗೂ ಬಸ್ ನಿಲ್ದಾಣಗಳಲ್ಲಿ ಮಣ್ಣಿನ ಕಪ್ ಮೂಲಕ ಚಹಾ ಹಾಗೂ ಕಾಫಿ ವಿತರಿಸುವ ಯೋಜನೆಯನ್ನು ಸಂಬಂಧಿಸಿದ ಇಲಾಖೆಗೆ ತಿಳಿಸಲಾಗಿದ್ದು, ಕಡ್ಡಾಯ ಮಾಡುವಂತೆ ಹೇಳಲಾಗಿದೆ ಎಂದಿದ್ದಾರೆ.
ಈಗಾಗಲೇ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ದೇಶದ 100 ರೈಲು ಸ್ಟೇಷನ್ನಲ್ಲಿ ಚಹಾ, ಕಾಫಿ ವಿತರಣೆಗೆ ಮಣ್ಣಿನ ಕಪ್ ಕಡ್ಡಾಯಗೊಳಿಸಿದ್ದಾರೆ, ಇದನ್ನು ದೇಶದೆಲ್ಲೆಡೆ ವಿಸ್ತರಿಸುವಂತೆ ಸಚಿವರಿಗೆ ಹೇಳಿದ್ದಾಗಿ ನಿತಿನ್ ಗಡ್ಕರಿ ಹೇಳಿದ್ದಾರೆ. ಮಾಲ್ಗಳಲ್ಲಿ ಸಹ ಇದನ್ನೇ ಅನುಸರಿಸಿದರೆ ಉತ್ತಮ ಎಂದು ಗಡ್ಕರಿ ಹೇಳಿದ್ದಾರೆ.