ETV Bharat / bharat

6 ದಿನದಲ್ಲಿ ಒಂದ್​ ಬುಲೆಟ್ ಸಹ ಹಾರಿಲ್ಲ... ಗಾಳಿಸುದ್ದಿಗೆ ಜಮ್ಮು ಪೊಲೀಸರ ಸ್ಪಷ್ಟನೆ - ಜಮ್ಮು ಕಾಶ್ಮೀರದಲ್ಲಿ ಪರಿಸ್ಥಿತಿ ಶಾಂತ

ಶನಿವಾರ ಸಂಜೆ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಯತ್ತ ಬರುತ್ತಿದ್ದು, ಭದ್ರತೆಯನ್ನು ಮತ್ತಷ್ಟು ಸಡಿಲಿಸಲಾಗಿದೆ. ಕಣಿವೆ ರಾಜ್ಯ ಪ್ರಸ್ತುತ ಶಾಂತವಾಗಿದೆ ಎಂದು ಜಮ್ಮು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

ಕಣಿವೆ ರಾಜ್ಯ
author img

By

Published : Aug 11, 2019, 10:41 AM IST

ಶ್ರೀನಗರ: ವಾರದ ಹಿಂದೆ ಕೇಂದ್ರ ಸರ್ಕಾರ ಕಾಶ್ಮೀರಕ್ಕಿದ್ದ ವಿಶೇಷ ಸಂವಿಧಾನವನ್ನು ಹಿಂಪಡೆದ ನಂತರ ಒಂದೇ ಒಂದು ಗಲಾಟೆಯೂ ನಡೆದಿಲ್ಲ ಎಂದು ಜಮ್ಮು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಭಾರತ - ಜಪಾನ್​ ಭಾಯಿ ಭಾಯಿ: ಕಾಶ್ಮೀರದಲ್ಲಿ ಬಂಡವಾಳ ಹೂಡಲು ಸನ್ನದ್ಧ...

ಕಾಶ್ಮೀರದಲ್ಲಿ ಗಲಾಟೆಗಳು ನಡೆಯುತ್ತಿವೆ ಎಂದು ವರದಿಯಾದ ಹಿನ್ನೆಲೆಯಲ್ಲಿ ದಿಲ್ಬಾಗ್ ಸಿಂಗ್ ಈ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಗಾಳಿ ಸುದ್ದಿಗಳನ್ನು ಆಧರಿಸಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

ಕಣಿವೆ ರಾಜ್ಯದಲ್ಲಿ ಈದ್​ ಹಬ್ಬಕ್ಕೆ ಸಿದ್ಧತೆ

ಶನಿವಾರ ಸಂಜೆ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದ್ದು, ಭದ್ರತೆಯನ್ನು ಮತ್ತಷ್ಟು ಸಡಿಲಿಸಲಾಗಿದೆ. ಕಣಿವೆ ರಾಜ್ಯ ಪ್ರಸ್ತುತ ಶಾಂತವಾಗಿದೆ. ಇಲ್ಲಿ ಕಳೆದ ಆರು ದಿನಗಳಲ್ಲಿ ಯಾವುದೇ ಗಲಾಟೆಯಾಗಿಲ್ಲ ಮತ್ತು ಒಂದು ಬುಲೆಟ್ ಸಹ ಹಾರಿಲ್ಲವೆಂದು ಜಮ್ಮು ಕಾಶ್ಮೀರ ಪೊಲೀಸ್​ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದು, ಗಾಳಿಸುದ್ದಿಯನ್ನು ನಂಬಬೇಡಿ ಎಂದಿದ್ದಾರೆ.

ಭಾನುವಾರದ ಬಳಿಕ ಭದ್ರತೆಯಲ್ಲಿ ದೊಡ್ಡ ಮಟ್ಟದ ಸಡಿಲಿಕೆ ಮಾಡಲಾಗುವುದು ಎಂದಿರುವ ದಿಲ್ಬಾಗ್ ಸಿಂಗ್ ಸೋಮವಾರದಂದು ಕಣಿವೆ ರಾಜ್ಯದ ಮಂದಿ ನಿರಾತಂಕವಾಗಿ ಈದ್​-ಉಲ್-ಝುಹಾವನ್ನು ಆಚರಿಸಬಹುದು ಎಂದು ಅಭಯ ನೀಡಿದ್ದಾರೆ.

Intro:Body:

6 ದಿನದಲ್ಲಿ ಒಂದು ಬುಲೆಟ್ ಸಹ ಹಾರಿಲ್ಲ.., ಗಾಳಿಸುದ್ದಿಗೆ ಸ್ಪಷ್ಟನೆ ನೀಡಿದ ಪೊಲೀಸ್ ಇಲಾಖೆ

ಶ್ರೀನಗರ: ವಾರದ ಹಿಂದೆ ಕೇಂದ್ರ ಸರ್ಕಾರ ಕಾಶ್ಮೀರಕ್ಕಿದ್ದ ವಿಶೇಷ ಸಂವಿಧಾನವನ್ನು ಹಿಂಪಡೆದ ನಂತರದಲ್ಲಿ ಒಂದೇ ಒಂದು ಗಲಾಟೆಯೂ ನಡೆದಿಲ್ಲ ಎಂದು ಜಮ್ಮು ಕಾಶ್ಮೀರದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದಾರೆ.

ಕಾಶ್ಮೀರದಲ್ಲಿ ಗಲಾಟೆಗಳು ನಡೆಯುತ್ತಿದೆ ಎಂದು ವರದಿಯಾದ ಹಿನ್ನೆಲೆಯಲ್ಲಿ ದಿಲ್ಬಾಗ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಕಾಂಗ್ರೆಸ್ ನಾಯಕ ರಾಹುಕ್ ಗಾಂಧಿ ಇದೇ ವರದಿಯನ್ನು ಆಧರಿಸಿ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿದ್ದರು.

ಶನಿವಾರ ಸಂಜೆ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಯತ್ತ ಬರುತ್ತಿದ್ದು ಭದ್ರತೆಯನ್ನು ಮತ್ತಷ್ಟು ಸಡಿಲಿಕೆ ಮಾಡಲಾಗಿದೆ. ಕಣಿವೆ ರಾಜ್ಯ ಪ್ರಸ್ತುತ ಶಾಂತವಾಗಿದೆ. ಇಲ್ಲಿ ಕಳೆದ ಆರು ದಿನದಲ್ಲಿ ಯಾವುದೇ ಗಲಾಟೆಯಾಗಿಲ್ಲ ಮತ್ತು ಒಂದು ಬುಲೆಟ್ ಸಹ ಹಾರಿಲ್ಲ ಎಂದು ಜಮ್ಮು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಹೇಳಿದ್ದು, ಗಾಳಿಸುದ್ದಿಯನ್ನು ನಂಬಬೇಡಿ ಎಂದಿದ್ದಾರೆ.

ಭಾನುವಾರದ ಬಳಿಕ ಭದ್ರತೆಯಲ್ಲಿ ದೊಡ್ಡ ಮಟ್ಟದ ಸಡಿಲಿಕೆ ಮಾಡಲಾಗುವುದು ಎಂದಿರುವ ದಿಲ್ಬಾಗ್ ಸಿಂಗ್ ಸೋಮವಾರದಂದು ಕಣಿವೆ ರಾಜ್ಯದ ಮಂದಿ ನಿರಾತಂಕವಾಗಿ ಈದ್​-ಉಲ್-ಝುಹಾವನ್ನು ಆಚರಣೆ ಮಾಡಬಹುದು ಎಂದಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.