ನವದೆಹಲಿ: 1,500 ಪಿಪಿಇ ಕಿಟ್ಗಳನ್ನು ಭಾನುವಾರ ಒಂದೇ ದಿನದಲ್ಲಿ ಉತ್ಪಾದಿಸುವ ಮೂಲಕ, ಈವರೆಗೆ ಒಟ್ಟು 10,000 ಕಿಟ್ಗಳನ್ನು ತಯಾರಿಸಲಾಗಿದೆ ಎಂದು ಉತ್ತರ ರೈಲ್ವೇ ಕಾರ್ಯಾಗಾರದ ಅಧಿಕಾರಿಗಳು ತಿಳಿಸಿದ್ದಾರೆ.
ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ವೈದ್ಯರು ಮತ್ತು ಅರೆವೈದ್ಯರಿಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ) ತಯಾರಿಸಾಗುತ್ತಿದೆ.
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಅವರ ನೇರ ಸಂಪರ್ಕವನ್ನು ತಪ್ಪಿಸುವ ಕ್ರಮವಾಗಿ ವೈದ್ಯಕೀಯ ಸಿಬ್ಬಂದಿ ಪಿಪಿಇ ಸೂಟ್‌ಗಳನ್ನು ಬಯಸುತ್ತಾರೆ.
ರೈಲ್ವೆ ಕಾರ್ಯಾಗಾರದಿಂದ ತಯಾರಿಸಲ್ಪಟ್ಟ ವೈಯಕ್ತಿಕ ರಕ್ಷಣಾ ಸಾಧನಗಳು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಡೆಸಿದ ಗುಣಮಟ್ಟದ ಪರೀಕ್ಷೆಯಲ್ಲೂ ಉತ್ತೀರ್ಣಗೊಂಡಿದೆ.
ಪಿಪಿಇ ಕಿಟ್ಗಳ ಜೊತೆಗೆ, ಉತ್ತರ ರೈಲ್ವೆ ಲಾಕ್‌ಡೌನ್ ಅವಧಿಯಲ್ಲಿ 5,917 ಲೀಟರ್ ಸ್ಯಾನಿಟೈಸರ್, 46,373 ಮಾಸ್ಕ್ ಉತ್ಪಾದಿಸಿವದೆ. 540 ಬೋಗಿಗಳನ್ನು ಐಸೊಲೇಷನ್ ವಾರ್ಡ್‌ಗಳಾಗಿ ಪರಿವರ್ತಿಸಿದೆ.