ಹೌರಾ, ಪಶ್ಚಿಮ ಬಂಗಾಳ: ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಫೆಬ್ರವರಿ 28ರೊಳಗೆ ಯಾರೊಬ್ಬರೂ ಉಳಿಯುವುದಿಲ್ಲ ಎಂದು ಭಾರತೀಯ ಜನತಾ ಪಕ್ಷದ ನಾಯಕ ಸುವೇಂದು ಅಧಿಕಾರಿ ಭಾನುವಾರ ಭವಿಷ್ಯ ನುಡಿದಿದ್ದಾರೆ.
ಹೌರಾ ಬಳಿಯ ದುಮುರ್ಜಲಾ ಸ್ಟೇಡಿಯಂನಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಸುವೇಂದು ಅಧಿಕಾರಿ, ತೃಣಮೂಲ ಕಾಂಗ್ರೆಸ್ ಈಗ ಪಕ್ಷವಾಗಿ ಉಳಿದಿಲ್ಲ. ಅದೊಂದು ಖಾಸಗಿ ಕಂಪನಿಯಾಗಿದೆ. ಫೆಬ್ರವರಿ 28ರೊಳಗೆ ಈ ಖಾಸಗಿ ಕಂಪನಿ ಖಾಲಿಯಾಗಲಿದ್ದು, ಅಲ್ಲಿ ಯಾರೂ ಇರುವುದಿಲ್ಲ ಎಂದಿದ್ದಾರೆ.
ಸುವೇಂದು ಅಧಿಕಾರಿ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆದ್ದು, ಪಶ್ಚಿಮ ಬಂಗಾಳದ ಮಾಜಿ ಸಚಿವರಾಗಿದ್ದು, 2020ರ ಡಿಸೆಂಬರ್ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಇಂದು ಹೌರಾದಲ್ಲಿ ರ‍್ಯಾಲಿ ನಡೆಸಿದ್ದಾರೆ.
ಇದನ್ನೂ ಓದಿ: ಪ್ರಧಾನಿಯವರನ್ನು ಗೌರವಿಸುತ್ತೇವೆ, ಸ್ವಾಭಿಮಾನ ಕಾಪಾಡಿಕೊಳ್ಳಲೂ ಬದ್ಧರಾಗಿರುತ್ತೇವೆ : ಟಿಕಾಯತ್
ಈ ರ್ಯಾಲಿಯಲ್ಲಿ ತೃಣಮೂಲ ಕಾಂಗ್ರೆಸ್ನ ಮಾಜಿ ನಾಯಕರಾದ ರಜೀಬ್ ಬ್ಯಾನರ್ಜಿ, ಬೈಷಾಲಿ ದಾಲ್ಮಿಯಾ, ಪ್ರಬೀರ್ ಘೋಷಾಲ್, ರಥೀನ್ ಚಕ್ರಬೊರ್ತಿ, ರುದ್ರನೀಲ್ ಘೋಷ್ ಹಾಜರಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ, ಪಶ್ಚಿಮ ಬಂಗಾಳ ಬಿಜೆಪಿ ಉಪಾಧ್ಯಕ್ಷ ಮುಕುಲ್ ರಾಯ್ ಮತ್ತು ಪಕ್ಷದ ಜನರಲ್ ಸೆಕ್ರೆಟರಿ ಕೈಲಾಶ್ ವಿಜಯ್ ವರ್ಗೀಯ ಪಾಲ್ಗೊಂಡಿದ್ದರು.
ಬಿಜೆಪಿಗೆ ಸೇರ್ಪಡೆಯಾದ ನಂತರ ಮೊದಲ ಬಾರಿಗೆ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ರಜೀಬ್ ಬ್ಯಾನರ್ಜಿ, ನಮಗೆ ಪಶ್ಚಿಮ ಬಂಗಾಳದಲ್ಲಿ ಡಬಲ್ ಇಂಜಿನ್ ಸರ್ಕಾರ ಬೇಕಾಗಿದೆ. ನಮಗೆ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವುದು ಬೇಕಾಗಿದೆ ಎಂದಿದ್ದಾರೆ.