ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ಮಧ್ಯೆ ದಶಕಗಳಿಂದ ಬಿಕ್ಕಟ್ಟು ಸೃಷ್ಟಿಸಿರುವ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ಮೋದಿ ತಮ್ಮ ಬಳಿ ಮನವಿ ಮಾಡಿದ್ದರು ಎನ್ನುವ ಟ್ರಂಪ್ ಹೇಳಿಕೆಗೆ ಭಾರತೀಯ ವಿದೇಶಾಂಗ ಸಚಿವ ಸುಬ್ರಹ್ಮಣ್ಯಂ ಜೈಶಂಕರ್ ಸ್ಪಷ್ಟನೆ ನೀಡಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ಜೈಶಂಕರ್, ಪ್ರಧಾನಿ ಮೋದಿ ಅಂತಹ ಯಾವುದೇ ಮನವಿ ಮಾಡಿಲ್ಲ ಎಂದು ಸ್ಪಷ್ಟ ಶಬ್ದಗಳಲ್ಲಿ ಮೇಲ್ಮನೆಯಲ್ಲಿ ಹೇಳಿದ್ದಾರೆ. ಪಾಕಿಸ್ತಾನದ ಜೊತೆಗಿನ ಎಲ್ಲ ವಿಚಾರಗಳನ್ನು ಭಾರತ ದ್ವಿಪಕ್ಷೀಯ ಮಾತುಕತೆಯಲ್ಲೇ ಬಗೆಹರಿಸಲಿದ್ದು ಅದಕ್ಕೆ ಮತ್ತೊಂದು ದೇಶ ಸಹಾಯ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
-
#WATCH: EAM S Jaishankar speaks in Rajya Sabha over the statement of US President Donald Trump that Prime Minister Narendra Modi had asked him to mediate in Kashmir issue. He says, "I would like to categorically assure the House that no such request has been made by PM Modi..." pic.twitter.com/gWjAa32bMO
— ANI (@ANI) July 23, 2019 " class="align-text-top noRightClick twitterSection" data="
">#WATCH: EAM S Jaishankar speaks in Rajya Sabha over the statement of US President Donald Trump that Prime Minister Narendra Modi had asked him to mediate in Kashmir issue. He says, "I would like to categorically assure the House that no such request has been made by PM Modi..." pic.twitter.com/gWjAa32bMO
— ANI (@ANI) July 23, 2019#WATCH: EAM S Jaishankar speaks in Rajya Sabha over the statement of US President Donald Trump that Prime Minister Narendra Modi had asked him to mediate in Kashmir issue. He says, "I would like to categorically assure the House that no such request has been made by PM Modi..." pic.twitter.com/gWjAa32bMO
— ANI (@ANI) July 23, 2019
ಸದ್ಯ ಅಮೆರಿಕ ಪ್ರವಾಸದಲ್ಲಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಜೊತೆಗಿನ ಮಾತುಕತೆಯಲ್ಲಿ ಟ್ರಂಪ್ ಕಾಶ್ಮೀರ ಸಮಸ್ಯೆಯನ್ನು ಚರ್ಚಿಸಿದ್ದಾರೆ. ಕೆಲ ದಿನಗಳ ಮೋದಿ ಜೊತೆಗೆ ಕಾಶ್ಮೀರ ಸಮಸ್ಯೆ ಬಗ್ಗೆ ಮಾತನಾಡಿದಾಗ ಈ ವಿಚಾರದಲ್ಲಿ ನೀವು ಮಧ್ಯಸ್ಥಿಕೆ ವಹಿಸಿ ಎಂದು ನನ್ನ ಬಳಿ ಕೇಳಿಕೊಂಡಿದ್ದರು ಎಂದು ಡೊನಾಲ್ಡ್ ಟ್ರಂಪ್ ಪಾಕ್ ಪ್ರಧಾನಿಗೆ ಹೇಳಿದ್ದರು.
ನೀವಿಬ್ಬರು(ಪಾಕಿಸ್ತಾನ-ಭಾರತ) ಕಾಶ್ಮೀರ ಸಮಸ್ಯೆಗೆ ಕೊನೆ ಹಾಡಲು ಇಚ್ಛಿಸಿದಲ್ಲಿ ನಾನು ಸಹಾಯ ಮಾಡಲು ಖಂಡಿತಾ ಸಿದ್ಧನಿದ್ದೇನೆ ಎಂದು ಪಾಕ್ ಪ್ರಧಾನಿಗೆ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.