ETV Bharat / bharat

ದೇಶದಲ್ಲಿ ಹೈಡ್ರೋಕ್ಸಿಕ್ಲೋರೋಕ್ವಿನ್​ ಕೊರತೆ ಇಲ್ಲ: ಕೇಂದ್ರ ಸಚಿವ ಸದಾನಂದಗೌಡ ಸ್ಪಷ್ಟನೆ - ದೇಶದಲ್ಲಿ ಹೈಡ್ರೋಕ್ಸಿ ಕ್ಲೋರೋಕ್ವಿನ್​ ಕೊರತೆ

ದೇಶದಲ್ಲಿ ಹೈಡ್ರೋಕ್ಸಿಕ್ಲೋರೋಕ್ವಿನ್​ ಅಥವಾ ಪ್ಯಾರಾಸಿಟಮಲ್‌ ಔಷಧಿಯ ಕೊರತೆ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.

Minister DV Sadananda clarifies
ಸದಾನಂದ ಗೌಡ
author img

By

Published : Apr 17, 2020, 5:42 PM IST

ನವದೆಹಲಿ: ದೇಶದಲ್ಲಿ ಹೈಡ್ರೋಕ್ಸಿಕ್ಲೋರೋಕ್ವಿನ್​ ಅಥವಾ ಪ್ಯಾರಾಸಿಟಮಲ್‌ ಔಷಧಿಯ ಕೊರತೆ ಇಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

ದೆಹಲಿಯಲ್ಲಿಂದು ಮಾತನಾಡಿರುವ ಅವರು, ಪ್ರತಿನಿತ್ಯ ನಮ್ಮಲ್ಲಿರುವ ಔಷಧಿಗಳ ಲಭ್ಯತೆಯನ್ನು ಲೆಕ್ಕ ಹಾಕಲಾಗುತ್ತದೆ. ಅವಶ್ಯಕತೆಗಿಂತ ಹೆಚ್ಚಿರುವ ಔಷಧಗಳನ್ನು ಬೇರೆ ದೇಶಗಳಿಗೆ ರಪ್ತು ಮಾಡುತ್ತಿದ್ದೇವೆ. ಪ್ರಸ್ತುತ 10 ದಿನಗಳಿಗಾಗುವಷ್ಟು ದಾಸ್ತಾನು ಇದ್ದು, ಮುಂದೆಯೂ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ಎಲ್ಲಾ ರಾಜ್ಯಗಳಿಗೆ ಬೇಕಾಗಿರುವ ಹೈಡ್ರೋಕ್ಸಿಕ್ಲೋರೋಕ್ವಿನ್‌ ಸೇರಿದಂತೆ ಇತರೆ ಔಷಧಿಗಳಿವೆ. ಈ ವಿಚಾರದಲ್ಲಿ ಯಾರೂ ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದ ಅವರು, ರೈತರು ದೇಶದ ಬೆನ್ನೆಲುಬು. ಮುಂದಿನ ಮುಂಗಾರಿಗೆ ಬೇಕಾಗುವಂತೆ ಎಲ್ಲಾ ರೀತಿಯ ರಸಗೊಬ್ಬರಗಳನ್ನು ರಾಜ್ಯಗಳಿಗೆ ತಲುಪಿಸುವ ಕೆಲಸವನ್ನು ಸರ್ಕಾರ ಮಾಡಿದೆ. ಎರಡರಿಂದ ಮೂರು ಪಟ್ಟು ರಸಗೊಬ್ಬರ ರಾಜ್ಯಗಳಲ್ಲಿ ದಾಸ್ತಾನು ಇದೆ ಎಂದು ಹೇಳಿದ್ದಾರೆ.

ಎಲ್ಲಾ ಕಾರ್ಖಾನೆಗಳಲ್ಲಿ ಉತ್ಪಾದನೆ ಹಾಗೂ ಆಮದು ಮಾಡಿಕೊಂಡಿರುವ ರಸಗೊಬ್ಬರದ ನಿರ್ವಹಣೆಗೂ ಅಗತ್ಯ ಸಿಬ್ಬಂದಿ ಇದ್ದಾರೆ. ಎಲ್ಲಾ ರೈತರು ಸಹಕಾರ ನೀಡಬೇಕು. ಹೊಲ ಗದ್ದೆಗಳಲ್ಲಿ ಕೆಲಸ ಮಾಡುವಾಗ ಕೂಡ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಸಚಿವ ಸದಾನಂದಗೌಡ ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.