ನವದೆಹಲಿ : ಭಾರತೀಯ ನಾಗರಿಕರು ತಮ್ಮ ಧರ್ಮ ಯಾವುದೆಂದು ಬ್ಯಾಂಕ್ ಖಾತೆ ತೆರೆಯುವ ವೇಳೆ ಅಥವಾ ಸದ್ಯ ಇರುವ ಖಾತೆಗೆ ಹಾಗು ಕೆವೈಸಿ(ಖಾತೆದಾರರ ವಿವರ)ಗೆ ತಿಳಿಸುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರದ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
-
There is no requirement for #Indian citizens to declare their religion for opening/ existing #Bank account or for #KYC. Do not fall for baseless rumours about any such move by Banks @PIB_India @DDNewsLive @PTI_News @FinMinIndia @PMOIndia
— Rajeev kumar (@rajeevkumr) December 21, 2019 " class="align-text-top noRightClick twitterSection" data="
">There is no requirement for #Indian citizens to declare their religion for opening/ existing #Bank account or for #KYC. Do not fall for baseless rumours about any such move by Banks @PIB_India @DDNewsLive @PTI_News @FinMinIndia @PMOIndia
— Rajeev kumar (@rajeevkumr) December 21, 2019There is no requirement for #Indian citizens to declare their religion for opening/ existing #Bank account or for #KYC. Do not fall for baseless rumours about any such move by Banks @PIB_India @DDNewsLive @PTI_News @FinMinIndia @PMOIndia
— Rajeev kumar (@rajeevkumr) December 21, 2019
ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ಸಿ) ಕುರಿತು ದೇಶಾದ್ಯಂತ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ನಾಗರಿಕರು ತಮ್ಮ ಬ್ಯಾಂಕ್ ಖಾತೆಗೂ ಧರ್ಮದ ಪ್ರಮಾಣ ಪತ್ರ ಅಗತ್ಯವಿದೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿತ್ತು.
ಈ ಕುರಿತು ಸ್ಪಷ್ಟನೆ ನೀಡಿ ಟ್ವೀಟ್ ಮಾಡಿರುವ ಕೇಂದ್ರ ಸರ್ಕಾರದ ಹಣಕಾಸು ಕಾರ್ಯದರ್ಶಿ ರಾಜೀವ್ ಕುಮಾರ್, ಭಾರತೀಯ ನಾಗರಿಕರು ತಮ್ಮ ಧರ್ಮ ಯಾವುದೆಂದು ತಿಳಿಸುವ ಅಗತ್ಯವಿಲ್ಲ. ಬ್ಯಾಂಕುಗಳ ಕುರಿತು ಆಧಾರರಹಿತ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಎಚ್ಚರಿಸಿದ್ದಾರೆ.