ನವದೆಹಲಿ: ಕಳೆದ 24 ಗಂಟೆಯಲ್ಲಿ 13 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಯಾವುದೇ ಕೋವಿಡ್ ಪ್ರಕರಣಗಳು ಪತ್ತೆಯಾಗಿಲ್ಲ. ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಕೇರಳ, ಒಡಿಶಾ, ಜಮ್ಮುಕಾಶ್ಮೀರ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಕಳೆದೊಂದು ದಿನದಲ್ಲಿ ದೇಶದಲ್ಲಿ 3,561 ಹೊಸ ಪ್ರಕರಣಗಳು ಕಾಣಿಸಿಕೊಂಡಿದ್ದು, 1,084 ಜನರು ಗುಣಮುಖರಾಗಿದ್ದಾರೆ. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ನಾವು ಸೇಫ್ ಆಗಿದ್ದೇವೆ. ದೇಶದಲ್ಲಿ ಚೇತರಿಕೆ ಪ್ರಮಾಣ ಶೇ.28.83ರಷ್ಟಿದೆ ಎಂದರು.
ಹೊಸದಾಗಿ ಕೊರೊನಾ ಪತ್ತೆಯಾಗದ ರಾಜ್ಯಗಳು:
ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಕೇರಳ, ಮಿಜೋರಾಂ, ಮಣಿಪುರ, ಗೋವಾ, ಮೇಘಾಲಯ, ಲಡಾಕ್, ಅರುಣಾಚಲ ಪ್ರದೇಶ, ಒಡಿಶಾ ಹಾಗೂ ಅಂಡಮಾನ್ & ನಿಕೋಬಾರ್ ಸೇರಿದಂತೆ ಡಿಯೊ ದಮನ್, ಸಿಕ್ಕಿಂ, ನಾಗಾಲ್ಯಾಂಡ್ ಹಾಗೂ ಲಕ್ಷದ್ವೀಪದಲ್ಲೂ ಯಾವುದೇ ಹೊಸ ಸೋಂಕಿತ ಪ್ರಕರಣಗಳು ವರದಿಯಾಗಿಲ್ಲ ಎಂದು ಸಚಿವರು ಮಾಹಿತಿ ನೀಡಿದರು.
ಪ್ರತಿದಿನ ದೇಶದಲ್ಲಿ 95 ಸಾವಿರ ಕೊರೋನಾ ಪರೀಕ್ಷೆ ನಡೆಸಲಾಗುತ್ತಿದ್ದು, 327 ಸರ್ಕಾರಿ ಹಾಗೂ 118 ಖಾಸಗಿ ಲ್ಯಾಬೊರೇಟರಿ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಇಲ್ಲಿಯವರೆಗೆ 13,57,442 ಪರೀಕ್ಷೆ ನಡೆದಿದೆ.