ETV Bharat / bharat

ಸ್ಕರ್ಟ್​ನಂಥ ತುಂಡುಡುಗೆ ಧರಿಸಿ ಗುಮ್ಮಟಕ್ಕೆ ಹೋಗಂಗಿಲ್ಲ.. ಲಖನೌ ಆಡಳಿತ ಕಟ್ಟಾಜ್ಞೆ - undefined

ಶತಮಾನದ ಚಿಕ್ಕ ಹಾಗೂ ದೊಡ್ಡ ಇಮಾಂಬರಾ (ಗುಮ್ಮಟ)ಗಳಿಗೆ ಭೇಟಿ ನೀಡುವಾಗ ಮೈತುಂಬ ಬಟ್ಟೆ ಧರಿಸಬೇಕು. ಪೋಟೋಗ್ರಫಿ ಹಾಗೂ ವಿಡಿಯೋ ಮಾಡುವುದನ್ನೂ ನಿಷೇಧಿಸಲಾಗಿದೆ ಎಂದು ಲಖನೌ ಜಿಲ್ಲಾಡಳಿತ ಹೇಳಿದೆ.

ಲಖನೌ
author img

By

Published : Jun 30, 2019, 7:54 PM IST

ಲಖನೌ: ಉತ್ತಪ್ರದೇಶದ ಚಿಕ್ಕ ಹಾಗೂ ದೊಡ್ಡ ಇಮಾಂಬರಾ (ಗುಮ್ಮಟ)ಗಳಿಗೆ ಭೇಟಿ ನೀಡುವ ಹೆಣ್ಮಕ್ಕಳು ಇನ್ಮುಂದೆ ತುಂಡುಡುಗೆ ಧರಿಸುವಂತಿಲ್ಲ ಎಂದು ಲಖನೌ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಶತಮಾನದ ಈ ಎರಡೂ ಸ್ಮಾರಕಗಳಿಗೆ ಭೇಟಿ ನೀಡುವಾಗ ಮೈತುಂಬ ಬಟ್ಟೆ ಧರಿಸಬೇಕು. ಪೋಟೋಗ್ರಫಿ ಹಾಗೂ ವಿಡಿಯೋ ಮಾಡುವುದನ್ನೂ ನಿಷೇಧಿಸಲಾಗಿದೆ ಎಂದು ಲಖನೌ ಜಿಲ್ಲಾಡಳಿತ ಹೇಳಿದೆ. ಶಿಯಾ ಸಮುದಾಯದ ಬಹುಕಾಲದ ಈ ಬೇಡಿಕೆಯನ್ನು ನಿನ್ನೆ ನಡೆದ ಜಿಲ್ಲಾಡಳಿತದ ಸಭೆಯಲ್ಲಿ ಪುರಸ್ಕರಿಸಲಾಯಿತು.

ಹುಸೈನಾಬಾದ್​ ಅಲೈಟ್​ ಟ್ರಸ್ಟ್​ ಹಾಗೂ ಪುರಾತತ್ವ ಸರ್ವೆ ಇಲಾಖೆ ಜತೆಗಿನ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು ಎಂದು ಲಖನೌ ಜಿಲ್ಲಾಧಿಕಾರಿ ಕೌಶಾಲ್ ರಾಜ್​ ಶರ್ಮಾ ಹೇಳಿದ್ದಾರೆ. ಸ್ಮಾರಕಗಳ ಬಳಿಯ ಗಾರ್ಡ್ಸ್​ ಮತ್ತು ಗೈಡ್ಸ್​ ಈ ಬಗ್ಗೆ ಜನರಿಗೆ ಸೂಚನೆ ನೀಡಲಿದ್ದಾರೆ ಹಾಗೂ ನಿಗಾ ವಹಿಸಲಿದ್ದಾರೆ. ಅಸಭ್ಯತೆ ಧಾರ್ಮಿಕ ಭಾವನೆಗಳಗೆ ಧಕ್ಕೆ ಉಂಟು ಮಾಡುತ್ತದೆ ಎಂದರು. ಫೋಟೋ ಹಾಗೂ ವಿಡಿಯೋ ಮಾಡುವುದನ್ನೂ ಇಲ್ಲಿ ನಿಷೇಧಿಸಲಾಗಿದೆ ಎಂದರು.

ಈಗಾಗಲೇ ಶಿಯಾ ಸಮುದಾಯದವರು, ಇತಿಹಾಸ ತಜ್ಞರು ಹಾಗೂ ನಾಗರಿಕ ಸಂಘಟನೆಗಳು ಸೇರಿ ಪ್ರಧಾನಿ, ಸಿಎಂ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.

Intro:Body:

LUCKNOW

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.