ETV Bharat / bharat

ಹಿಂದುಳಿದ ಜಿಲ್ಲೆಯಲ್ಲಿ ಆನ್​ಲೈನ್ ಶಿಕ್ಷಣದ ಸಾಧಕ - ಬಾಧಕ..! - ಹರಿಯಾಣದಲ್ಲಿ ಶಿಕ್ಷಣ

ಮಕ್ಕಳಿಗೆ ಕೊರೊನಾ ಬರಬಾರದು ಎಂಬ ಕಾರಣಕ್ಕೆ ಲಾಕ್​ಡೌನ್ ಮಾಡಲಾಗಿದೆ. ಅದರ ಜೊತೆಗೆ ಆನ್​ಲೈನ್​ ಬೋಧನೆಗೆ ಸಿದ್ಧತೆ ನಡೆಸಲಾಗುತ್ತಿದೆ. ಆದ್ರೆ ನೂಹ್​ ಜಿಲ್ಲೆಯಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳಲ್ಲಿ ಫೋನ್ ಇದ್ದು, ಆನ್​ಲೈನ್ ಶಿಕ್ಷಣದ ಸೌಲಭ್ಯ ಪಡೆಯುತ್ತಿರುವವರ ಸಂಖ್ಯೆ ಕಡಿಮೆಯಿದೆ.

education in nuh
ನೂಹ್​ ಜಿಲ್ಲೆಯಲ್ಲಿ ಶಿಕ್ಷಣ
author img

By

Published : Jul 21, 2020, 11:52 AM IST

ನೂಹ್ (ಹರಿಯಾಣ): ಕೊರೊನಾದಿಂದಾಗಿ ಶಾಲೆಗಳು ಸ್ತಬ್ಧವಾಗಿವೆ. ದೇಶದ ಶಿಕ್ಷಣ ವ್ಯವಸ್ಥೆಯ ಮೇಲೆ ಈ ಕೊರೊನಾ ಮಹಾಮಾರಿ ದುಷ್ಪರಿಣಾಮ ಬೀರಿದ್ದು, ಹರಿಯಾಣ ರಾಜ್ಯದ ನೂಹ್ ​ ಜಿಲ್ಲೆಯ ಶಿಕ್ಷಣ ಮತ್ತಷ್ಟು ಕುಸಿದಿದೆ.

ಕೊರೊನಾ ವೈರಸ್​ ಇಡೀ ವಿಶ್ವವನ್ನೇ ಬದಲಾಯಿಸಿಬಿಟ್ಟಿದೆ. ಶ್ರೀಮಂತ, ಬಡವ ಅನ್ನೋ ತಾರತಮ್ಯ ಇಲ್ಲದೇ ಎಲ್ಲರಿಗೂ ಸಂಕಷ್ಟ ತಂದೊಡ್ಡಿದ್ದು, ಯಾರನ್ನೂ ಬಿಟ್ಟಿಲ್ಲ. ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲೊಂದಾಗಿರುವ ನೂಹ್​ನಲ್ಲಿ ಶಿಕ್ಷಣ ವ್ಯವಸ್ಥೆ ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ.

ನೂಹ್​ ಜಿಲ್ಲೆಯಲ್ಲಿ ಶಿಕ್ಷಣ

ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳಿಗೆ ಓದಲು ಸಾಧ್ಯವಾಗುತ್ತಿಲ್ಲ. ಈ ಭಾಗದಲ್ಲಿ ಆನ್​ಲೈನ್​ ಶಿಕ್ಷಣ ಶೂನ್ಯವಾಗಿದೆ. ಇಲ್ಲಿರುವ ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಶಾಲೆಗಳು ತೆರೆಯಬೇಕು ಹಾಗೂ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಂಡು ಅಭ್ಯಾಸ ಮಾಡಬೇಕು ಎಂಬುದು ಪೋಷಕರ ಆಗ್ರಹವಾಗಿದೆ.

ಮಕ್ಕಳಿಗೆ ಕೊರೊನಾ ಬರಬಾರದು ಎಂಬ ಕಾರಣಕ್ಕೆ ಲಾಕ್​ಡೌನ್ ಮಾಡಲಾಗಿದೆ. ಅದರ ಜೊತೆಗೆ ಆನ್​ಲೈನ್​ ಬೋಧನೆಗೆ ಸಿದ್ಧತೆ ನಡೆಸಲಾಗುತ್ತಿದೆ. ಆದ್ರೆ ನೂಹ್​ ಜಿಲ್ಲೆಯಲ್ಲಿ ಕೆಲವೇ ಕೆಲವು ವಿದ್ಯಾರ್ಥಿಗಳಲ್ಲಿ ಫೋನ್ ಇದ್ದು, ಆನ್​ಲೈನ್ ಶಿಕ್ಷಣದ ಸೌಲಭ್ಯ ಪಡೆಯುತ್ತಿರುವವರ ಸಂಖ್ಯೆ ಕಡಿಮೆಯಿದೆ.

ಜಿಲ್ಲಾಡಳಿತ ಆನ್​ಲೈನ್​ ಶಿಕ್ಷಣಕ್ಕಾಗಿ ಎಜುಸ್ಯಾಟ್​ ತರಹದ ಸೌಲಭ್ಯಗಳನ್ನು ಒದಗಿಸುತ್ತಿದೆ. ಇದರ ಜೊತೆಗೆ ಕೇಬಲ್​ ನೆಟ್​ವರ್ಕ್​​, ವಾಟ್ಸ್​ಆ್ಯಪ್​​ ಮೂಲಕವೂ ಪಾಠ ಪ್ರವಚನಗಳು ನಡೆಯುತ್ತಿವೆ. ಜಿಲ್ಲಾ ಶಿಕ್ಷಣ ಮಂಡಳಿಯ ಪ್ರಕಾರ ಶೇಕಡಾ 61ರಷ್ಟು ಮಂದಿ ಆನ್​ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ.

ಹಿಂದುಳಿದ ಪ್ರದೇಶಗಳಲ್ಲಿ ಟಿವಿಗಳು ಕಡಿಮೆ ಪ್ರಮಾಣದಲ್ಲಿವೆ. ಟಿವಿಯ ಮೂಲಕ ಶೇಕಡಾ 27ರಷ್ಟು ಮಂದಿ ಪಾಠಗಳನ್ನು ಕೇಳುತ್ತಿದ್ದಾರೆ. ಶೇಕಡಾ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆನ್​ಲೈನ್ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಈಟಿವಿ ಭಾರತ ತಂಡ ಪ್ರತ್ಯಕ್ಷ ವರದಿಗಾಗಿ ತೆರಳಿದ್ದಾಗ ನೂಹ್ ಜಿಲ್ಲೆಯ ಜನರ ಆರ್ಥಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಟಿವಿ ಕೊಳ್ಳೋಕೆ ಕೂಡಾ ಆಗದ ಪರಿಸ್ಥಿತಿ ಅವರಲ್ಲಿದೆ. ಆಂಡ್ರಾಯ್ಡ್​​​ ಫೋನ್​ಗಳಿರಲಿ.. ಮಾಮೂಲಿ ಬೇಸಿಕ್ ಮೊಬೈಲ್​ ಫೋನ್​ಗಳಿಗೂ ಅಲ್ಲಿ ಕೊರತೆಯಿದೆ ಎಂದು ತಿಳಿದು ಬಂದಿದ್ದು, ಶಿಕ್ಷಣ ವಂಚಿತರ ನೆರವಿಗೆ ಸರ್ಕಾರ ಧಾವಿಸಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.