ನವದೆಹಲಿ: ಸಿಎಎ ವಿರೋಧಿಸಿ ದೆಹಲಿಯ ಶಾಹೀನ್ ಬಾಗ್ನಲ್ಲಿ ತಿಂಗಳಿಗೂ ಹೆಚ್ಚು ಕಾಲದಿಂದ ಪ್ರತಿಭಟನೆ ನಡೆಸಲಾಗುತ್ತಿದ್ದು, ಈ ಪ್ರತಿಭಟನೆ ಹಲವು ಕಾರಣಗಳಿಂದ ದೇಶಾದ್ಯಂತ ಭಾರಿ ಸದ್ದುಮಾಡಿದೆ.
-
Ministry of Home Affairs (MHA) sources on protestors at Shaheen Bagh claiming to meet Union Home Minister Amit Shah tomorrow at 2 pm to discuss issues related to #CitizenshipAmendmentAct: No such meeting is scheduled with the Union Home Minister Amit Shah for tomorrow. https://t.co/9sNTUoHvqj pic.twitter.com/F6Tcmr4imD
— ANI (@ANI) February 15, 2020 " class="align-text-top noRightClick twitterSection" data="
">Ministry of Home Affairs (MHA) sources on protestors at Shaheen Bagh claiming to meet Union Home Minister Amit Shah tomorrow at 2 pm to discuss issues related to #CitizenshipAmendmentAct: No such meeting is scheduled with the Union Home Minister Amit Shah for tomorrow. https://t.co/9sNTUoHvqj pic.twitter.com/F6Tcmr4imD
— ANI (@ANI) February 15, 2020Ministry of Home Affairs (MHA) sources on protestors at Shaheen Bagh claiming to meet Union Home Minister Amit Shah tomorrow at 2 pm to discuss issues related to #CitizenshipAmendmentAct: No such meeting is scheduled with the Union Home Minister Amit Shah for tomorrow. https://t.co/9sNTUoHvqj pic.twitter.com/F6Tcmr4imD
— ANI (@ANI) February 15, 2020
ಇಂದೂ ಕೂಡ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಸಿಎಎ ಹಿಂಪಡೆಯುವಂತೆ ಆಗ್ರಹಿಸಿದ್ರು. ಅಲ್ಲದೇ ಮಾದ್ಯಮಗಳೊಂದಿಗೆ ಮಾತನಾಡಿದ ಕೆಲ ಪ್ರತಿಭಟನಾಕಾರರು 'ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಎ ವಿಚಾರ ಕುರಿತು ಚರ್ಚೆ ಮಾಡಲು ಇಡೀ ದೇಶದ ಜನರನ್ನ ಆಹ್ವಾನ ಮಾಡಿದ್ದಾರೆ. ನಾಳೆ 2 ಗಂಟೆಗೆ ಅವರನ್ನ ಭೇಟಿಯಾಗಲು ತೆರಳುತ್ತಿದ್ದೇವೆ. ಸಿಎಎಯಿಂದ ತೊಂದರೆ ಅನುಭವಿಸುತ್ತಿರುವ ಯಾರಾದರೂ ನಮ್ಮ ಜೊತೆ ಬರಬಹುದು'ಎಂದಿದ್ದರು.
ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಗೃಹ ಇಲಾಖೆ, ಅಮಿತ್ ಶಾ ಅವರೊಂದಿಗೆ ಯಾವುದೇ ಮೀಟಿಂಗ್ ನಿಗದಿಯಾಗಿಲ್ಲ. ಎಲ್ಲ ಸುಳ್ಳು ಸುದ್ದಿ ಎಂದು ತಿಳಿಸಿದೆ.
ಶಾಹೀನ್ ಬಾಗ್ ಪ್ರತಿಭಟನಾಕಾರರು ಸೇರಿದಂತೆ ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ಯಾರಾದರೂ ಅನುಮಾನ ವ್ಯಕ್ತಪಡಿಸಿದರೆ, ಅವರು ತಮ್ಮ ಕಚೇರಿಯಲ್ಲಿ ಭೇಟಿಯಾಗಲು ಸಮಯ ಕೋರಬಹುದು. ಮೂರು ದಿನಗಳಲ್ಲಿ ಅವರನ್ನು ಭೇಟಿ ಮಾಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಹೇಳಿದ್ದರು.