ETV Bharat / bharat

ಮೃತರ ಮರಣೋತ್ತರ ಪರೀಕ್ಷೆ ವೇಳೆ ಶವದ ಸರ್ಜರಿ ಬೇಡ: ಐಸಿಎಂಆರ್ ಸೂಚನೆ

author img

By

Published : May 13, 2020, 11:58 AM IST

ಕೊರೊನಾ ವೈರಸ್‌ನಿಂದ ಆಸ್ಪತ್ರೆಯಲ್ಲಿ ಮತ್ತು ವೈದ್ಯಕೀಯ ನಿಗಾವಣೆಯಲ್ಲಿ ಮೃತರಾದರೆ ಅದನ್ನು ವೈದ್ಯಕೀಯ ಕಾನೂನು ಹೊರತಾದ ಪ್ರಕರಣಗಳು ಎಂದು ಪರಿಗಣಿಸಬೇಕು ಎಂದು ‘ಮೆಡಿಕೋ ಲೀಗಲ್ ಅಟಾಪ್ಸಿ ಪ್ರಮಾಣಿತ ಮಾರ್ಗಸೂಚಿಗಳು’ ಎಂಬ 32 ಪುಟದ ದಾಖಲೆಯಲ್ಲಿ ಐಸಿಎಂಆರ್‌ ವಿವರಣೆ ನೀಡಿದೆ. ಇಂತಹ ಪ್ರಕರಣಗಳಲ್ಲಿ ಮರಣೋತ್ತರ ಪರೀಕ್ಷೆ ನಡೆಸುವಾಗ ದೇಹದ ಸರ್ಜರಿ ಮಾಡಬಾರದು ಎಂದು ಹೇಳಿದೆ.

ICMR
ಐಸಿಎಂಆರ್

ನವದೆಹಲಿ: ಕೋವಿಡ್ 19 ಸೋಂಕಿನಿಂದ ಸಾವನ್ನಪ್ಪಿದ ಪ್ರಕರಣಗಳಲ್ಲಿ ಶವದ ಸರ್ಜರಿ ಮಾಡುವುದರಿಂದ ಹೊರಬರುವ ದೇಹದ ದ್ರವಗಳಿಂದ ವೈದ್ಯರು ಮತ್ತು ಶವಾಗಾರದ ಸಿಬ್ಬಂದಿಗೆ ಸೋಂಕು ತಗಲುವ ಅಪಾಯ ಹೆಚ್ಚಿರುತ್ತದೆ. ಹೀಗಾಗಿ ಶವ ಪರೀಕ್ಷೆಯಲ್ಲಿ ದೇಹವನ್ನು ಕೊಯ್ಯಬಾರದು ಎಂದು ಕರಡು ದಾಖಲೆಯಲ್ಲಿ ಉಲ್ಲೇಖಿಸಿದೆ.

ಭಾರತೀಯ ವೈದ್ಯಕೀಯ ಸಂಶೋಧನೆಯ ಕೌನ್ಸಿಲ್ (ಐಸಿಎಂಆರ್) ಬಿಡುಗಡೆ ಮಾಡಿದ ‘ಭಾರತದಲ್ಲಿ ಕೋವಿಡ್ 19 ರೋಗಿಗಳ ಮರಣ ಮೆಡಿಕೋ ಲೀಗಲ್ ಅಟಾಪ್ಸಿಗೆ ಪ್ರಮಾಣಿತ ಮಾರ್ಗಸೂಚಿಗಳು’ ಎಂಬ ಅಂತಿಮ ಕರಡು ವರದಿಯ ಪ್ರಕಾರ, ಕೊರೊನಾ ವೈರಸ್‌ನಿಂದಾಗಿ ಆಸ್ಪತ್ರೆಯಲ್ಲಿ ಮತ್ತು ವೈದ್ಯಕೀಯ ಆರೈಕೆಯಲ್ಲಿ ಸಾವನ್ನಪ್ಪಿದರೆ ಅದನ್ನು ಎಂಎಲ್‌ಸಿ ಹೊರತಾದ ಪ್ರಕರಣವಾಗಿರುತ್ತದೆ ಮತ್ತು ಇದಕ್ಕೆ ಪೋಸ್ಟ್‌ಮಾರ್ಟಮ್ ಮಾಡಬೇಕಿಲ್ಲ ಮತ್ತು ಈ ಪ್ರಕರಣದಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮರಣ ಪ್ರಮಾಣಪತ್ರವನ್ನು ನೀಡಬಹುದಾಗಿದೆ. ಕೋವಿಡ್ 19ರಿಂದಾಗಿ ಸಾವನ್ನಪ್ಪಿರುವ ಶಂಕೆಯಲ್ಲಿ ಆಸ್ಪತ್ರೆಗೆ ಮೃತದೇಹವನ್ನು ತಂದಾಗ ಅದನ್ನು ಎಂಎಲ್‌ಸಿ ಎಂದು ತುರ್ತು ವೈದ್ಯರು ಗುರುತಿಸಬಹುದು ಮತ್ತು ಅದನ್ನು ಶವಾಗಾರಕ್ಕೆ ಕಳುಹಿಸಿ, ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ. ಆಗ ಸಾವಿನ ಕಾರಣವನ್ನು ಸ್ಪಷ್ಟಪಡಿಸಿಕೊಳ್ಳಲು, ಪೋಸ್ಟ್‌ಮಾರ್ಟಮ್‌ ಮಾಡಬಹುದಾಗಿದೆ. “ಇಂತಹ ಪ್ರಕರಣಗಳ ಮರಣೋತ್ತರ ಪರೀಕ್ಷೆಗೆ ವಿನಾಯಿತಿ ನೀಡಬಹುದು” ಎಂದು ಕರಡು ಮಾರ್ಗಸೂಚಿಯಲ್ಲಿ ವಿವರಿಸಲಾಗಿದೆ.

ಆತ್ಮಹತ್ಯೆ, ಕೊಲೆ ಅಥವಾ ಅಪಘಾತ ಪ್ರಕರಣಗಳು ಪಾಸಿಟಿವ್ ಅಥವಾ ಶಂಕಿತ ಕೊರೊನಾವೈರಸ್ ಸೋಂಕಿನ ಪ್ರಕರಣವಾಗಿರಬಹುದು. ಅಗತ್ಯ ಪ್ರಕ್ರಿಯೆ ಮಾಡಿದ ನಂತರ, ಯಾವುದೇ ಅಪರಾಧದ ಶಂಕೆ ಇಲ್ಲದಿದ್ದರೆ ಮೆಡಿಕೋ ಲೀಗಲ್ ಅಟಾಪ್ಸಿಗೆ ರಿಯಾಯಿತಿಯನ್ನು ನೀಡುವ ಅಧಿಕಾರವನ್ನು ಪೊಲೀಸರು ಹೊಂದಿರುತ್ತಾರೆ. ಇದನ್ನು ಮೆಡಿಕೋ ಲೀಗಲ್‌ ಪ್ರಕರಣ ಎಂದು ಪರಿಗಣಿಸಿದರೂ ಮರಣೋತ್ತರ ಪರೀಕ್ಷೆಯಿಂದ ವಿನಾಯಿತಿ ನೀಡಬಹುದು.

ಇಂತಹ ಸಾಂಕ್ರಾಮಿಕ ರೋಗ ಹರಡುತ್ತಿರುವ ಸನ್ನಿವೇಶದಲ್ಲಿ ಅನಗತ್ಯವಾಗಿ ಮರಣೋತ್ತರ ಪರೀಕ್ಷೆ ಮಾಡುವುದಕ್ಕೆ ವಿನಾಯಿತಿ ನೀಡಲು ತನಿಖಾಧಿಕಾರಿಗಳು ಮುಂದಾಗಬೇಕಿದೆ ಎಂದು ಕರಡು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸುವಾಗ ಮೂಳೆಗಳು ಮತ್ತು ಅಂಗಾಂಶಗಳಿಗೆ ವಾಯುದ್ರವವನ್ನು ಬಿಡುಗಡೆ ಮಾಡುತ್ತವೆ. ಇದರಿಂದಾಗಿ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಬಾಹ್ಯ ತಪಾಸಣೆ, ಹಲವು ಫೋಟೋಗಳು ಮತ್ತು ಮೌಖಿಕ ಮರಣೋತ್ತರ ಪರೀಕ್ಷೆಯನ್ನು ಬಳಸಿ (ಡಬ್ಲ್ಯೂಎಚ್‌ಒ ಸೂಚಿಸಿದಂತೆ) ಪೋಸ್ಟ್ ಮಾರ್ಟಮ್‌ ಮಾಡಬಹುದು. ಈ ವೇಳೆ ದೇಹವನ್ನು ಕೊಯ್ಯುವ ಕ್ರಮವನ್ನು ದೂರ ಮಾಡಬಹುದು ಮತ್ತು ಸಿಬ್ಬಂದಿ, ದೇಹವನ್ನು ನಿರ್ವಹಿಸುವವರು ಮತ್ತು ವೈದ್ಯರ ಮೈಗೆ ಮೃತದೇಹದ ದ್ರವಗಳು ಸಿಡಿಯುವುದನ್ನು ತಡೆಯಬಹುದು.

ಐಸಿಎಂಆರ್‌ ಪ್ರಕಟಿಸಿದ ಕರಡು ಮಾರ್ಗಸೂಚಿಯ ಪ್ರಕಾರ ಕೋವಿಡ್ 19 ಪರೀಕ್ಷೆ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದರೆ, ಅಂತಿಮ ವರದಿ ಬರುವವರೆಗೂ ಮೃತದೇಹವನ್ನು ಶವಾಗಾರದಿಂದ ತೆಗೆದುಕೊಂಡು ಹೋಗಬಾರದು ಮತ್ತು ಎಲ್ಲ ಕ್ರಮಗಳನ್ನು ಅನುಸರಿಸಿದ ನಂತರ ಜಿಲ್ಲಾಡಳಿತಕ್ಕೆ ಹಸ್ತಾಂತರಿಸಬೇಕು. ಯಾವುದೇ ಸಮಯದಲ್ಲೂ ಇಬ್ಬರಿಗಿಂತ ಹೆಚ್ಚು ಸಂಬಂಧಿಗಳು ಮೃತದೇಹದ ಬಳಿ ಇರಬಾರದು ಮತ್ತು ಅವರು ದೇಹದಿಂದ ಕನಿಷ್ಠ ಒಂದು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು. ಪ್ಲಾಸ್ಟಿಕ್ ಬ್ಯಾಗ್‌ ಮೂಲಕ, ಬ್ಯಾಗ್‌ ತೆರೆಯದೇ ಸಂಬಂಧಿಗಳು ದೇಹವನ್ನು ಗುರುತಿಸಬೇಕು ಮತ್ತು ಸಂಬಂಧಿತ ತನಿಖಾಧಿಕಾರಿಗಳ ಎದುರು ನಡೆಸಬೇಕು” ಎಂದು ಅದರಲ್ಲಿ ಹೇಳಲಾಗಿದೆ.

“ತನಿಖಾಧಿಕಾರಿಗಳ ಸಮ್ಮುಖದಲ್ಲೇ ಮೃತದೇಹವನ್ನು ಸ್ಮಶಾನ ಅಥವಾ ಸಮಾಧಿ ಸ್ಥಳಕ್ಕೆ ತೆಗೆದುಕೊಂಡ ಹೋಗಬೇಕು. ಈ ವೇಳೆ ಐದಕ್ಕಿಂತ ಹೆಚ್ಚು ಸಂಬಂಧಿಗಳು ಇರಬಾರದು. ಭಾರಿ ಸಂಖ್ಯೆಯಲ್ಲಿ ಜನರು ಸ್ಮಶಾನ ಸ್ಥಳದಲ್ಲಿ ಸೇರಿದರೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಕುಟುಂಬದ ಸಮೀಪ ಸದಸ್ಯರು ಗುಣಲಕ್ಷಣಗಳನ್ನು ಹೊಂದಿರಬಹುದು ಮತ್ತು ವೈರಸ್ ಹರಡುತ್ತಿರಬಹುದು” ಎಂದು ಇದರಲ್ಲಿ ವರದಿ ಮಾಡಲಾಗಿದೆ.

ಡಯಾಗ್ನೋಸ್ಟಿಕ್​​ ಟೆಸ್ಟ್‌ಗಳು, ಅಂತಾರಾಷ್ಟ್ರೀಯ ಮರಣೋತ್ತರ ಪರೀಕ್ಷೆಗಳು ಮತ್ತು ಮೂಲಸೌಕರ್ಯ ಮತ್ತು ಸಾಗಣೆ ಸಾಮರ್ಥ್ಯವನ್ನು ವಿಶ್ಲೇಷಿಸಿದ ನಂತರ ಈ ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ. ಶವವನ್ನು ಸಿಬ್ಬಂದಿಯು ನೇರವಾಗಿ ಮುಟ್ಟಬೇಕಾದರೆ ಮತ್ತು ಶವಾಗಾರದಲ್ಲಿ ಶವವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವಾಗ ಸಂಪೂರ್ಣ ಪಿಪಿಇ ಧರಿಸಬೇಕು. ಸೋರಿಕೆಯಾಗದ ಜಿಪ್ ಹೊಂದಿರುವ ಪ್ಲಾಸ್ಟಿಕ್ ಪಾರದರ್ಶಕ ಬ್ಯಾಗ್‌ನಲ್ಲಿ ಡಬಲ್ ಪ್ಯಾಕಿಂಗ್‌ನಲ್ಲಿ ದೇಹವನ್ನು ಪ್ಯಾಕ್ ಮಾಡಬೇಕು ಮತ್ತು ದೇಹದಿಂದ ದ್ರವ ಸೋರದಂತೆ ಸರಿಯಾಗಿ ಮುಚ್ಚಿರಬೇಕು.

ಈಗಿರುವ ಶವಾಗಾರವನ್ನು ಕೋವಿಡ್ 19 ಶವಗಳಿಗೆ ಮತ್ತು ಕೋವಿಡ್ 19 ಅಲ್ಲದ ಶವಗಳಿಗೆ ಪ್ರತ್ಯೇಕವಾಗಿಸಬೇಕು. ಸಮಾಧಿ ಮಾಡುವುದಾದರೆ, ಸಮಾಧಿಯ ಮೇಲ್ಭಾಗವನ್ನು ಸಿಮೆಂಟ್‌ನಿಂದ ಮುಚ್ಚಿ ಪ್ರತ್ಯೇಕಿಸಬೇಕು. ಎಲೆಕ್ಟ್ರಿಕ್‌ ಕ್ರೆಮಟೋರಿಯಂನಲ್ಲೇ ಶವವನ್ನು ಸುಡಬೇಕು. ಇದರಿಂದಾಗಿ ಶವವನ್ನು ಸಾಗಿಸುವುದು ಮತ್ತು ನಿರ್ವಹಿಸುವುದು ಕಡಿಮೆಯಾಗುತ್ತದೆ ಎಂದು ಕರಡು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶವಕ್ಕೆ ಸ್ನಾನ ಮಾಡಿಸುವುದು, ಮುತ್ತು ಕೊಡುವುದು ಮತ್ತು ಅಪ್ಪಿಕೊಳ್ಳುವುದು ಇತ್ಯಾದಿ ಧಾರ್ಮಿಕ ಆಚರಣೆಗಳನ್ನು ಮಾಡಬಾರದು. ಆದರೆ, ಬೂದಿಯಿಂದ ಯಾವುದೇ ರಿಸ್ಕ್ ಇರುವುದಿಲ್ಲ ಮತ್ತು ಇದನ್ನು ಅಂತ್ಯಸಂಸ್ಕಾರ ನಡೆಸಿದ ನಂತರ ಸಂಗ್ರಹಿಸಬಹುದು ಎಂದು ಉಲ್ಲೇಖಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.