ನವದೆಹಲಿ: ಮಾರ್ಚ್ 22 ರಿಂದ ಒಂದು ವಾರದವರೆಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಭಾರತ ಸರ್ಕಾರ ನಿರ್ಬಂಧ ಹೇರಿದೆ.
ಮಾರ್ಚ್ 22 ರಿಂದ 29ರವರೆಗೆ, ಅಂದರೆ ಒಂದು ವಾರಗಳ ಕಾಲ ಯಾವುದೇ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನಗಳನ್ನು ಭಾರತದಲ್ಲಿ ಲ್ಯಾಂಡಿಂಗ್ ಮಾಡಲು ಅನುಮತಿಸಲಾಗುವುದಿಲ್ಲ ಎಂದು ಭಾರತ ಸರ್ಕಾರ ಸೂಚಿಸಿದೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಇದಲ್ಲದೇ ರೈಲ್ವೆ ಮತ್ತು ನಾಗರಿಕ ವಿಮಾನಯಾನವು ವಿದ್ಯಾರ್ಥಿಗಳು, ರೋಗಿಗಳು ಮತ್ತು ದಿವ್ಯಾಂಗ ವರ್ಗವನ್ನು ಹೊರತುಪಡಿಸಿ ಎಲ್ಲಾ ರಿಯಾಯಿತಿ ಪ್ರಯಾಣವನ್ನು ಸ್ಥಗಿತಗೊಳಿಸುತ್ತಿದೆ ಎಂದು ತಿಳಿಸಲಾಗಿದೆ.