ETV Bharat / bharat

16 ಸಾವಿರ ಮಂದಿಯ ಕೊರೊನಾ ಟೆಸ್ಟ್‌ನಲ್ಲಿ ಸೋಂಕಿತರ ಪ್ರಮಾಣ ಶೇ 0.2: ಕೇಂದ್ರ ಆರೋಗ್ಯ ಇಲಾಖೆ

author img

By

Published : Apr 10, 2020, 5:07 PM IST

ದೇಶದಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದ್ದು, ಜನರು ಈ ಬಗ್ಗೆ ಆತಂಕಗೊಳ್ಳುವ ಅಗತ್ಯವಿಲ್ಲ ಎಂದೂ ತಿಳಿಸಿದೆ.

Health Ministry
Health Ministry

ನವದೆಹಲಿ: ದೇಶವನ್ನು ಹೆಮ್ಮಾರಿಯಾಗಿ ಕಾಡುತ್ತಿರುವ ಕೊರೊನಾ ಲಗ್ಗೆ ಹಾಕಿ ಇಂದಿಗೆ 100 ದಿನ ಮುಕ್ತಾಯವಾಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚುತ್ತಿದೆ. ಇಂದು ಕೂಡ 678 ಹೊಸ ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ 24 ಗಂಟೆಯಲ್ಲಿ 33 ಸಾವು ಸಂಭವಿಸಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದೆ.

ದೇಶದಲ್ಲಿ ಇಂದಿಗೆ ಒಟ್ಟು ಸೋಂಕಿತರ ಸಂಖ್ಯೆ 6,412 ತಲುಪಿದೆ. 503 ಜನರು ಸೋಂಕುಮುಕ್ತರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಉಳಿದಂತೆ 199 ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ನಿನ್ನೆ ದೇಶದಲ್ಲಿ 16,002 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿತ್ತು. ಅದರಲ್ಲಿ ಶೇ 0.2ರಷ್ಟು ಮಂದಿಗೆ ಮಾತ್ರ ಸೋಂಕು ಕಾಣಿಸಿದ್ದು ತಿಳಿದುಬಂದಿದೆ. ಕೊರೊನಾ ಸಮುದಾಯಕ್ಕೆ ಹರಡಿಲ್ಲ ನಿಜ, ಆದರೆ ಎಚ್ಚರಿಕೆಯಿಂದ ಇರುವುದು ಅನಿವಾರ್ಯವಾಗಿದೆ ಎಂದು ಆರೋಗ್ಯ ಇಲಾಖೆ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ವೈಯಕ್ತಿಕ ಸುರಕ್ಷತಾ ಸಾಮಾಗ್ರಿಗಳು (ಪಿಪಿಇ) ಹಾಗೂ ವೆಂಟಿಲೇಟರ್​ಗಳ ಮೇಲೆ ಸೀಮಾ ಸುಂಕ ಇರಲ್ಲ. ದೇಶದಲ್ಲಿ ಪಿಪಿಇ ಉತ್ಪಾದನೆ ಮಾಡುವ 39 ಉದ್ಯಮಗಳಿವೆ. ನಿನ್ನೆಯವರೆಗೆ 20,473 ವಿದೇಶಿಗರನ್ನು ಸ್ಥಳಾಂತರ ಮಾಡಲಾಗಿದೆ. ಇವರಲ್ಲಿ ಎಲ್ಲ ರೀತಿಯ ಸಹಕಾರ ದೊರತಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.