ನವದೆಹಲಿ: ದೇಶದ ಒಟ್ಟಾರೆ ಸಂಶೋಧನಾ ಪರಿಸರ ವ್ಯವಸ್ಥೆಗೆ ಪುಷ್ಠಿ ನೀಡಲು, ದೇಶದಲ್ಲಿ ಆವಿಷ್ಕಾರ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲು, ಆರ್ಥಿಕ ವರ್ಷ 2021-22ರ ಕೇಂದ್ರ ಬಜೆಟ್ ಹೊಸ ಉಪಕ್ರಮಗಳನ್ನು ಘೋಷಿಸಿದೆ.
ಇಂದು ಸಂಸತ್ತಿನಲ್ಲಿ ಬಜೆಟ್ ಮಂಡಿಸುವಾಗ, ಡಿಜಿಟಲ್ ಪಾವತಿ, ಬಾಹ್ಯಾಕಾಶ ವಲಯ ಮತ್ತು ಸಾಗರದಾಳದ ಪರಿಶೋಧನೆಗಳನ್ನು ಒಳಗೊಂಡಿರುವ ಪ್ರಸ್ತಾವಿತ ಉಪಕ್ರಮಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ರಾಷ್ಟ್ರೀಯ ಸಂಶೋಧನಾ ಸಂಸ್ಥೆ: ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಾಗಿ ಮುಂಬರುವ 5 ವರ್ಷಗಳಲ್ಲಿ 50 ಸಾವಿರ ಕೋಟಿ ಅನುದಾನ ನೀಡಿದ್ದು, ರಾಷ್ಟ್ರೀಯ-ಆದ್ಯತೆಗಾಗಿ ಒತ್ತು ನೀಡಬೇಕೆಂದು ಗುರುತಿಸಲಾದ ಪ್ರದೇಶಗಳ ಮೇಲೆ ಗಮನಹರಿಸಲಾಗಿದೆ ಮತ್ತು ದೇಶದ ಒಟ್ಟಾರೆ ಸಂಶೋಧನಾ ಪರಿಸರ ವ್ಯವಸ್ಥೆಗೆ ಪುಷ್ಠಿ ನೀಡಲಾಗಿದೆ ಎಂದಿದ್ದಾರೆ.
ಡಿಜಿಟಲ್ ಪಾವತಿಗಳಿಗೆ ಉತ್ತೇಜನ : ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಪಾವತಿಗಳಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಮತ್ತು ಈ ಚಲನಗತಿಯನ್ನು ಮುಂದುವರಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ. ಡಿಜಿಟಲ್ ಪಾವತಿ ಪದ್ಧತಿಗಳಿಗೆ ಪ್ರೋತ್ಸಾಹ ನೀಡಲು ಮತ್ತು ಡಿಜಿಟಲ್ ವಹಿವಾಟುಗಳಿಗೆ ಮತ್ತಷ್ಟು ಉತ್ತೇಜನ ನೀಡಲು ಆರ್ಥಿಕ ಪ್ರೋತ್ಸಾಹ ನೀಡುವ 1,500 ಕೋಟಿ ರೂ. ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.
ರಾಷ್ಟ್ರೀಯ ಭಾಷಾ ಅನುವಾದ ಮಿಷನ್ (ಎನ್ಟಿಎಲ್ಎಂ) : ರಾಷ್ಟ್ರೀಯ ಭಾಷಾ ಅನುವಾದ ಮಿಷನ್ (ಎನ್ಟಿಎಲ್ಎಂ) ಎಂಬ ಹೊಸ ಉಪಕ್ರಮವನ್ನು ಪ್ರಸ್ತಾಪಿಸಲಾಗಿದ್ದು, ಇದು ಇಂಟರ್ನೆಟ್ನಲ್ಲಿ ಆಡಳಿತ ಮತ್ತು ನೀತಿಗಳಿಗೆ ಸಂಬಂಧಿಸಿದಂತೆ ಡಿಜಿಟಲೀಕರಣ ಹಾಗೂ ಪ್ರಮುಖ ಭಾರತೀಯ ಭಾಷೆಗಳಲ್ಲಿ ಲಭ್ಯವಾಗಲಿದೆ ಎಂದಿದ್ದಾರೆ.
ಭಾರತದ ಬಾಹ್ಯಾಕಾಶ ವಲಯ: ಬಾಹ್ಯಾಕಾಶ ಇಲಾಖೆಯ ಅಡಿಯಲ್ಲಿರುವ ಪಿಎಸ್‌ಯು ನ್ಯೂ ಸ್ಪೇಸ್ ಇಂಡಿಯಾ ನಿಯಮಿತ (ಎನ್ಎಸ್ಐಎಲ್) ಪಿಎಸ್ಎಲ್ವಿ-ಸಿ ಎಸ್ 51 ಉಡಾವಣೆಯನ್ನು ಕಾರ್ಯಗತಗೊಳಿಸಲಿದ್ದು, ಕೆಲವು ಚಿಕ್ಕ ಭಾರತೀಯ ಉಪಗ್ರಹಗಳ ಜೊತೆಗೆ ಬ್ರೆಜಿಲ್‌ನಿಂದ ಅಮೆಜೋನಿಯಾ ಉಪಗ್ರಹವನ್ನು ಹೊತ್ತೊಯ್ಯುತ್ತದೆ ಎಂದು ಸಚಿವೆ ಸಂಸತ್ತಿಗೆ ತಿಳಿಸಿದರು.
ಡಿಸೆಂಬರ್ 2021ರಲ್ಲಿ ಪ್ರಾರಂಭವಾಗಲಿರುವ ಗಗನಯಾನ ಮಿಷನ್ಗಾಗಿ ಭಾರತದ ನಾಲ್ಕು ಗಗನಯಾತ್ರಿಗಳಿಗೆ ರಷ್ಯಾದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.
ಸಾಗರದಾಳದ ಯೋಜನೆ : ಸಾಗರಗಳ ಅಧ್ಯಯನ ಹಾಗೂ ಸಾಗರದಾಳದ ಯೋಜನೆಯನ್ನು ಪ್ರಾರಂಭಿಸಲು 5 ವರ್ಷಗಳಲ್ಲಿ ಸುಮಾರು 4 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿ: ನಿರ್ಮಲಾ ಬಜೆಟ್ನಲ್ಲಿ ಯಾವ ವಲಯಕ್ಕೆ ಎಷ್ಟು ಪಾಲು, ಬಂದದೆಷ್ಟು- ಖರ್ಚಾಗಿದೆಷ್ಟು? ಇಲ್ಲಿದೆ ಡಿಟೆಲ್ಸ್