ETV Bharat / bharat

ನಾಲ್ವರು 'ಹತ್ಯಾ'ಚಾರಿಗಳಿಗೆ ಗಲ್ಲು ಜಾರಿ: ನಿರಂತರ ಕಾನೂನು ಹೋರಾಟಕ್ಕೆ ಕೊನೆಗೂ ಸಿಕ್ತು 'ನಿರ್ಭಯ' ಜಯ - ತಿಹಾರ್​ ಜೈಲು

ನಿರ್ಭಯಾ ಎಂಬ ಯುವತಿಯ ಮೇಲಿನ ಅತ್ಯಂತ ಅಮಾನವೀಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಇಂದು ಬೆಳಗ್ಗೆ ಗಲ್ಲು ಶಿಕ್ಷೆ ಜಾರಿಯಾಗಿದೆ. ಈ ಮೂಲಕ ಕಳೆದ ಏಳು ವರ್ಷಗಳಿಂದ ಸುದೀರ್ಘವಾಗಿ ನಡೆಯುತ್ತಿದ್ದ ಪ್ರಕರಣದ ವಿಚಾರಣೆ ಕೊನೆಗೂ ತಾರ್ಕಿಕ ಅಂತ್ಯ ಕಂಡಿದೆ. ನ್ಯಾಯ ತಡವಾಯ್ತು ನಿಜ ಆದ್ರೆ, ನ್ಯಾಯ ದೊರಕದೆ ಹೋಗಲಿಲ್ಲ ಎಂದು ನಿರ್ಭಯಾ ಪೋಷಕರು ನಿಟ್ಟುಸಿರು ಬಿಟ್ಟರು.

Nirbhaya Convicts Executed At 5:30 am
Nirbhaya Convicts Executed At 5:30 am
author img

By

Published : Mar 20, 2020, 5:36 AM IST

Updated : Mar 20, 2020, 11:36 AM IST

ದೆಹಲಿ: ದೇಶದ ಅಂತ:ಸತ್ವವನ್ನೇ ಕೆದಕಿದ 2012 ರ ಅತ್ಯಂತ ಅಮಾನವೀಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಇಂದು ಬೆಳಗ್ಗೆ 5.30 ಕ್ಕೆ ಗಲ್ಲು ಶಿಕ್ಷೆ ಜಾರಿಯಾಗಿದೆ. ಏಳು ವರ್ಷಗಳ ಹಿಂದೆ ದೆಹಲಿಯಲ್ಲಿ ರಾತ್ರಿ ವೇಳೆ ಅಟ್ಟಹಾಸ ಮೆರೆದಿದ್ದ ಆರು ಮಂದಿಯ ಪೈಕಿ ನಾಲ್ವರಿಗೆ ಇಂದು ಬೆಳಿಗ್ಗೆ ಕಠಿಣ ಶಿಕ್ಷೆ ಜಾರಿಯಾಗಿದೆ.

ಗಲ್ಲು ಶಿಕ್ಷೆ ತಡೆ ಕೋರಿ ಅಪರಾಧಿಗಳು ಸಲ್ಲಿಸಿದ್ದ ಅಂತಿಮ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ. ಇದಾದ ಎರಡು ಗಂಟೆಯ ಅವಧಿಯಲ್ಲಿ ಅಪರಾಧಿಗಳಾದ ಮುಕೇಶ್‌ ಸಿಂಗ್‌, ಪವನ್‌ ಗುಪ್ತಾ, ವಿನಯ್‌ ಶರ್ಮಾ, ಅಕ್ಷಯ್‌ಕುಮಾರ್‌ ಸಿಂಗ್‌ ನನ್ನು ನೇಣು ಗಂಬಕ್ಕೆ ಏರಿಸಲಾಗಿದೆ.

ಪ್ರಕರಣದ ಮತ್ತೋರ್ವ ಅಪರಾಧಿ ರಾಮ್‌ಸಿಂಗ್‌ 2013ರಲ್ಲಿ ಜೈಲಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡರೆ, ಬಾಲಾಪರಾಧಿಯನ್ನು ಎರಡು ವರ್ಷಗಳ ಶಿಕ್ಷೆಯ ಬಳಿಕ 2015ರಲ್ಲಿ ಬಿಡುಗಡೆ ಮಾಡಲಾಗಿತ್ತು.

ಪ್ರಕರಣ ನಡೆದು ಬಂದ ಹಾದಿ:

Nirbhaya Convicts
ನಿರ್ಭಯಾ ಅತ್ಯಾಚಾರ ಪ್ರಕರಣದ ಕುರಿತು ಮಾಹಿತಿ

Last Updated : Mar 20, 2020, 11:36 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.