ETV Bharat / bharat

ದೆಹಲಿ ಹೈಕೋರ್ಟ್ ತೀರ್ಪಿನ ವಿರುದ್ಧ ಫೆ.11ಕ್ಕೆ ಸುಪ್ರೀಂ ವಿಚಾರಣೆ - ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರ

ನಿರ್ಭಯಾ ಅತ್ಯಾಚಾರಿಗಳ ವಿಚಾರದಲ್ಲಿ ದೆಹಲಿ ಹೈಕೋರ್ಟ್​ ನೀಡಿದ್ದ ತೀರ್ಪಿನ ವಿರುದ್ಧ ಸಾಲಿಟರ್​​ ಜನರಲ್​ ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದು, ಫೆ 11ಕ್ಕೆ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂ ಹೇಳಿದೆ.

Nirbhaya case
ಸುಪ್ರೀಂ ವಿಚಾರಣೆ
author img

By

Published : Feb 7, 2020, 2:19 PM IST

ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳ ಮರಣದಂಡನೆ ವಿರುದ್ಧದ ತಡೆಯಾಜ್ಞೆ ವಜಾಗೊಳಿಸಿರುವ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ಫೆಬ್ರವರಿ 11 ರಂದು ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್​ ಹೇಳಿದೆ.

ಈ ಪ್ರಕರಣ ಸಂಬಂಧ ವಿಳಂಬವಾಗುತ್ತಿದೆ ಎಂದು ಸಾಲಿಟರ್​ ಜನರಲ್​​​ ತುಷಾರ್​​ ಮೆಹ್ತಾ ಕೇಂದ್ರ ಸರ್ಕಾರದ ಪರವಾಗಿ ನಾಲ್ವರಿಗೆ ನೋಟಿಸ್​​​ ನೀಡುವಂತೆ ಅರ್ಜಿ ಸಲ್ಲಿಸಿದ್ದು, ಜಸ್ಟೀಸ್​​ ಭಾನುಮತಿ ನೇತೃತ್ವದ ಪೀಠ ತಿರಸ್ಕರಿಸಿದೆ.

ಫೆಬ್ರವರಿ 11ರಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎ ಎಸ್ ಬೋಪಣ್ಣ ಅವರನ್ನೂ ಒಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಲಿದ್ದು, ಅಪರಾಧಿಗಳಿಗೆ ನೋಟಿಸ್​​​​​ ಜಾರಿ ಮಾಡುವುದರ ಬಗ್ಗೆ ನಂತರ ತೀರ್ಮಾನಿಸಲಿದೆ ಎಂದು ತಿಳಿಸಿದೆ.

ಈ ವಿಚಾರದಲ್ಲಿ ರಾಷ್ಟ್ರದ ತಾಳ್ಮೆ ಪರೀಕ್ಷಿಸಿದಂತಾಗುತ್ತಿದೆ ಎಂದು ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದ್ದು, ಈ ಬಗ್ಗೆ ಕಾನೂನು ರೂಪಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.