ನವದೆಹಲಿ: ನಿರ್ಭಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬನಾದ ವಿನಯ್ ಶರ್ಮಾ ಗಲ್ಲು ಶಿಕ್ಷೆಯನ್ನು ವಿಳಂಬವಾಗಿಸಲು ಮತ್ತೊಂದು ಉಪಾಯ ಹುಡುಕಿಕೊಂಡಿದ್ದಾನೆ.
ಈ ಹಿಂದೆ ತಾನು ಸಲ್ಲಿಸಿದ್ದ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ತಿರಸ್ಕರಿಸಿರುವುದರ ಹಿಂದೆ ಕಾನೂನು ಹಾಗೂ ಸಾಂವಿಧಾನಿಕ ಪ್ರಕ್ರಿಯೆಯ ವೈಫಲ್ಯತೆಯಿದೆ ಎಂದು ಆರೋಪಿಸಿ ದೆಹಲಿ ಹೈಕೋರ್ಟ್ಗೆ ಮತ್ತೆ ವಿನಯ್ ಅರ್ಜಿ ಸಲ್ಲಿಸಿದ್ದಾನೆ.
ಅಪರಾಧಿಗಳ ಪರ ವಕೀಲ ಎ ಪಿ ಸಿಂಗ್ ಮೂಲಕ ಸಲ್ಲಿಸಲಾಗಿರುವ ಅರ್ಜಿಯಲ್ಲಿ, ಕ್ಷಮಾದಾನ ಅರ್ಜಿ ತಿರಸ್ಕರಿಸಲು ರಾಷ್ಟ್ರಪತಿಗೆ ಕಳುಹಿಸಿದ ಶಿಫಾರಸಿನಲ್ಲಿ ದೆಹಲಿ ಗೃಹ ಸಚಿವ ಸತ್ಯೇಂದರ್ ಜೈನ್ ಅವರ ಸಹಿಯೇ ಇಲ್ಲವೆಂದು ಉಲ್ಲೇಖಿಸಲಾಗಿದೆ.
ಈಗಾಗಲೇ ಪ್ರಕರಣದ ನಾಲ್ವರು ಅಪರಾಧಿಗಳಾದ ಮುಖೇಶ್, ಪವನ್, ವಿನಯ್ ಮತ್ತು ಅಕ್ಷಯ್ರನ್ನು ಮಾರ್ಚ್ 20 ರಂದು ಗಲ್ಲಿಗೇರಿಸುವಂತೆ ನ್ಯಾಯಾಲಯ ಹೊಸದಾಗಿ ಡೆತ್ ವಾರೆಂಟ್ ನೀಡಿದೆ.