ETV Bharat / bharat

ಐಸಿಸ್ ಜೊತೆ ನಂಟು ಆರೋಪ: ಎನ್​ಐಎಯಿಂದ 10 ಶಂಕಿತರ ವಿಚಾರಣೆ - ಶಂಕಿತ ಉಗ್ರರ ವಿಚಾರಣೆ

ಐಸಿಸ್ ಉಗ್ರರ ಸಂಬಂಧ 10 ಜನ ಶಂಕಿತರನ್ನು ಎನ್​ಐಎ ತೀವ್ರ ವಿಚಾರಣಗೆ ಒಳಪಡಿಸಿದೆ. ಶಂಕಿತರು ಐಸಿಸ್ ಜೊತೆ ನಂಟು ಹೊಂದಿದ್ದರು ಎಂದು ತಿಳಿದುಬಂದಿದೆ.

NIA interrogates
ಎನ್​ಐಎಯಿಂದ 10 ಶಂಕಿತರ ವಿಚಾರಣೆ
author img

By

Published : Mar 5, 2020, 6:31 AM IST

ನವದೆಹಲಿ: ಐಸಿಸ್ ಉಗ್ರರಿಗೆ ಸಂಬಂಧಿಸಿದ ಪ್ರಕರಣ ಸಂಬಂಧ 10 ಜನ ಆರೋಪಿಗಳನ್ನು ಬುಧವಾರ ಎನ್​ಐಎ ವಿಚಾರಣೆಗೊಳಪಡಿಸಿದೆ.

ಐಸಿಸ್ ಹಾಗೂ ಖಾಜಾ ಮೊಹಿದ್ದೀನ್ ಜೊತೆ ಸೇರಿಕೊಂಡು ಭಾರತದಲ್ಲಿ ಕೃತ್ಯ ಎಸಗಲು ನಕಲಿ ದಾಖಲೆಗಳನ್ನು ನೀಡಿ ಆರೋಪಿಗಳು ಸಿಮ್ ಕಾರ್ಡ್ ಪಡೆದಿದ್ದರು ಎಂದು ಎನ್​ಐಎ ಮಾಹಿತಿ ನೀಡಿದೆ.

ಸುದೀರ್ಘ ವಿಚಾರಣೆಗಾಗಿ ಫೆ.27ರಿಂದ ಮಾ.3ರವರೆಗೆ ಆರು ದಿನಗಳ ಕಾಲ ಆರೋಪಿಗಳನ್ನು ಎನ್​ಐಎ ವಶಕ್ಕೆ ಪಡೆದಿದೆ. ಆರಂಭದಲ್ಲಿ ಈ ಪ್ರಕರಣವನ್ನು ತಮಿಳುನಾಡು ಕ್ಯೂ ಬ್ರ್ಯಾಂಚ್ ಪೊಲೀಸರು ದಾಖಲಿಸಿದ್ದರು. ವಿಚಾರಣೆಯಲ್ಲಿ ಕೃತ್ಯಗಳ ಎಸಗಲು ಆರೋಪಿಗಳು ನಡೆಸಿದ ಸಂಚಿನ ಕುರಿತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ಚೆನ್ನೈನ ಎನ್​ಐಎ ಕೋರ್ಟ್​ಗೆ ರಾಷ್ಟ್ರೀಯ ತನಿಖಾ ಟೀಂ ಸಲ್ಲಿಸಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.