ನವದೆಹಲಿ: ರಾಷ್ಟ್ರೀಯ ತನಿಖಾ ದಳ - ಎನ್‌ಐಎ ತಮಿಳುನಾಡಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, 'ಶಹದತ್ ಈಸ್ ಅವರ್ ಗೋಲ್' ಎಂಬ ಉಗ್ರ ಸಂಘಟನೆಯ ಜಿಹಾದಿ ಗ್ಯಾಂಗ್ ವಿರುದ್ಧ ಕ್ರಮ ಕೈಗೊಂಡಿದೆ. 10 ಉಗ್ರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ನಿನ್ನೆ ಚೆನ್ನೈನಲ್ಲಿ ಓರ್ವ ಶಂಕಿತರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿತ್ತು.
ಬಂಧಿತ ಶಂಕಿತನನ್ನು ಕಡಲೂರು ಜಿಲ್ಲೆಯ 25 ವರ್ಷದ ಮೊಹಮ್ಮದ್ ರಷೀದ್ ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 153ಎ ಮತ್ತು 120ಬಿ ಪ್ರಕರಣ ದಾಖಲಿಸಲಾಗಿದೆ. ಮಾತ್ರವಲ್ಲದೆ ಕಾನೂನು ಬಾಹಿರ ಚಟುವಟಿಕೆ (ತಡೆ) ಕಾಯ್ದೆ-1967 ಅಡಿಯ ಸೆಕ್ಷನ್ 15(ಸಿ), 17, 18, 19 ಮತ್ತು 20 ಅಡಿ ಕೇಸ್ ಜಡಿಯಲಾಗಿದೆ.