ಶ್ರೀನಗರ: ಹವಾಲಾ ಭಯೋತ್ಪಾದಕ ನಿಧಿ ಬಗ್ಗೆ ತನಿಖೆ ನಡೆಸಲು ಮುಂದಾದ ರಾಷ್ಟ್ರೀಯ ತನಿಖಾ ಸಂಸ್ಥೆ ಇಂದು ಶ್ರೀನಗರದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿದೆ.
ಶ್ರೀನಗರದ ಪ್ರೆಸ್ ಎನ್‌ಕ್ಲೇವ್‌ನಲ್ಲಿರುವ ಗ್ರೇಟರ್ ಕಾಶ್ಮೀರ ಪತ್ರಿಕೆ, ಸೋನ್‌ವಾರ್‌ನಲ್ಲಿರುವ ಮಾನವ ಹಕ್ಕುಗಳ ಕಾರ್ಯಕರ್ತ ಖುರ್ರಾಮ್ ಪರ್ವೇಜ್ ಅವರ ನಿವಾಸ, ಅಥ್ರೌಟ್ ಎಂಬ ಎನ್‌ಜಿಒ ಮತ್ತು ದಾಲ್ ಸರೋವರದ ಎಚ್‌ಬಿ ಹಿಲ್ಟನ್ ಹೌಸ್‌ಬೋಟ್ ಕಚೇರಿಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ದಾಲ್ ಸರೋವರದ ಹಿಲ್ಟನ್ ಹೌಸ್ ಬೋಟ್ ಸೇರಿದಂತೆ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಹೌಸ್‌ಬೋಟ್ ಮಹಮ್ಮದ್ ಅಮೀನ್ ದಂಗೋಲಾ ಅವರಿಗೆ ಸೇರಿದ್ದು, ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳು ಇನ್ನಷ್ಟು ಕಡೆಗಳಲ್ಲಿ ದಾಳಿ ನಡೆಸಿ ತನಿಖೆ ನಡೆಸುವ ಸಾಧ್ಯತೆಗಳಿವೆ.