ETV Bharat / bharat

ಪುಲ್ವಾಮಾ ದಾಳಿಯಲ್ಲಿ ಸ್ಫೋಟಕ ಸಾಗಣೆಗೆ ನೆರವು... ರಾಷ್ಟ್ರೀಯ ತನಿಖಾ ತಂಡದಿಂದ ಮೊದಲ ಬಂಧನ!

author img

By

Published : Feb 28, 2020, 10:12 PM IST

ಪುಲ್ವಾಮಾ ದಾಳಿ ನಡೆದ ವರ್ಷಗಳ ಬಳಿಕ ಇದೀಗ ಮೊದಲ ಬಾರಿಗೆ ಆರೋಪಿ ಬಂಧನ ಮಾಡುವಲ್ಲಿ ರಾಷ್ಟ್ರೀಯ ತನಿಖಾ ತಂಡ ಯಶಸ್ವಿಯಾಗಿದ್ದು, ಮಹತ್ವದ ಮಾಹಿತಿ ಪಡೆದುಕೊಂಡಿದೆ.

NIA arrests Pak-based terror group JeM's operative
ಶಕೀರ್​ ಬಶೀರ್​ ಮ್ಯಾಗ್ರೇ ಬಂಧನ

ನವದೆಹಲಿ: ಕಳೆದ ವರ್ಷ 2019ರ ಫೆಬ್ರವರಿ 14ರಂದು ಭದ್ರತಾ ಸಿಬ್ಬಂದಿ ಹೊತ್ತೊಯ್ಯುತ್ತಿದ್ದ ವಾಹನಕ್ಕೆ ಉಗ್ರರು ನಡೆಸಿದ್ದ ಆತ್ಮಹತ್ಯಾ ಬಾಂಬ್​ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಈ ಘಟನೆ ಸಂಭವಿಸಿ ವರ್ಷಗಳಾಗಿದ್ದು, ಇದೀಗ ರಾಷ್ಟ್ರೀಯ ತನಿಖಾ ತಂಡದಿಂದ ಮೊದಲ ಬಂಧನವಾಗಿದೆ.

ಪುಲ್ವಾಮಾ ದಾಳಿ ನಡೆಯಲು ಸಹಾಯ ಮಾಡಿದ್ದ ಕಾಕ್​ಪೋರ್​ದ 22 ವರ್ಷದ ಶಕೀರ್​ ಬಶೀರ್​ ಮ್ಯಾಗ್ರೇ ಎಂಬಾತನ ಬಂಧನ ಮಾಡಲಾಗಿದ್ದು, ಈ ವ್ಯಕ್ತಿ ದಾಳಿಗೆ ಸಂಬಂಧಿಸಿದಂತೆ ಸ್ಫೋಟಕ ಸಾಗಣೆಗೆ ನೆರವು ನೀಡಿದ್ದಾನೆ ಎಂಬ ಆರೋಪದ ಮೇಲೆ ಅರೆಸ್ಟ್​ ಮಾಡಲಾಗಿದೆ.

  • NIA: He has revealed that he had harboured Adil Ahmad Dar & Pakistani terrorist Mohd Umar Farooq in his house from late 2018 till the attack in Feb 2019, and assisted them in the preparation of the IED. He has been remanded to 15 days of NIA custody for detailed interrogation. https://t.co/zO4sKpBMpQ

    — ANI (@ANI) February 28, 2020 " class="align-text-top noRightClick twitterSection" data=" ">

ಕಟ್ಟಿಗೆ ಮಳಿಗೆಯ ಮಾಲಿಕನಾಗಿರುವ ಬಶೀರ್​​ ಪುಲ್ವಾಮಾ ದಾಳಿಕೋರ್​ ಅದಿಲ್​ ಅಹಮ್ಮದ್​ಗೆ ಆಶ್ರಯ ನೀಡಿರುವ ಜತೆಗೆ ಸ್ಫೋಟಕ ವಸ್ತುಗಳ ಸಾಗಣೆಗೆ ಸಹಾಯ ಮಾಡಿದ್ದನು. 2018ರಲ್ಲಿ ಅದಿಲ್​ಗೆ ಪರಿಚಯವಾಗಿದ್ದ ವ್ಯಕ್ತಿ ತದನಂತರ ಜೈಶ್​​ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ಈತನ ಮನೆಯಲ್ಲೇ ಐಇಡಿ ಸ್ಫೋಟಕ ತಯಾರು ಮಾಡಲು ಆತನ ಸಹಾಯ ಮಾಡಿದ್ದು, ಈ ಪ್ರದೇಶದಲ್ಲಿ ಸಿಆರ್​ಪಿಎಫ್​ ಯೋಧರ ಚಲನವಲನಗಳ ಕುರಿತು ಮೇಲಿಂದ ಮೇಲೆ ಮಾಹಿತಿ ನೀಡುತ್ತಿದ್ದ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.

ದಾಳಿಗೆ ಬಳಕೆ ಮಾಡಲಾಗಿರುವ ಸ್ಫೋಟಕಗಳನ್ನ ಆನ್​ಲೈನ್​ನಲ್ಲಿ ಆರ್ಡರ್​ ಮಾಡಲಾಗಿತ್ತು ಎಂಬ ಮಾಹಿತಿ ಸಹ ವಿಚಾರಣೆ ವೇಳೆ ಹೊರಬಿದ್ದಿದೆ. ಅಮೋನಿಯಂ ನೈಟ್ರೇಟ್, ನೈಟ್ರೋ-ಗ್ಲಿಸರಿನ್ ಮತ್ತು ಆರ್​​ಡಿಎಕ್ಸ್​​ ಸಹ ಇಲ್ಲಿಂದಲೇ ತರಿಸಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.

2019ರಲ್ಲಿ ಇಬ್ಬರು ಜೈಶ್​ ಸಂಘಟನೆಗೆ ಸೇರಿದ್ದ ಉಗ್ರರ ಹತ್ಯೆ ಮಾಡಿದ ನಂತರ ಅವರ ಬಳಿ ಸಿಕ್ಕ ಮೊಬೈಲ್​ನಿಂದ ಪುಲ್ವಾಮಾ ದಾಳಿಯ ಮಹತ್ವದ ಅಂಶ ಗೊತ್ತಾಗಿದ್ದು, ಇದರಲ್ಲಿ ಬಶೀರ್​​ ಮೊಬೈಲ್​ ನಂಬರ್​ ಲಭ್ಯವಾಗಿದ್ದರ ಬಗ್ಗೆ ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.