ತಿರುವನಂತಪುರಂ: ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ಇಂದು ಮತ್ತೆ ನಾಲ್ವರು ಆರೋಪಿಗಳನ್ನು ಬಂಧಿಸಿದೆ.
ಎನ್‌ಐಎ ಬಂಧಿಸಿದ ನಾಲ್ವರು ಆರೋಪಿಗಳು ಕೋಯಿಕೊಡ್ ಜಿಲ್ಲೆಯ ಮಹಮ್ಮದ್ ಅಬ್ದುಲ್ ಅಮೀದ್ ಮತ್ತು ಸಿವಿ ಜಿಸ್ಫಾಲ್, ಮಲಪ್ಪುರಂ ಜಿಲ್ಲೆಯ ಪಿ ಅಬೂಬ್ಯಾಕರ್ ಮತ್ತು ಪಿ ಅಬ್ದುಲ್ ಹಮೀದ್ ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳು ತಿರುವನಂತಪುರಂನ ಯುಎಇ ಕಾನ್ಸುಲೇಟ್ಗೆ ಆಮದು ಸರಕುಗಳ ಮೂಲಕ ಚಿನ್ನದ ಕಳ್ಳಸಾಗಣೆಗೆ ಹಣಕಾಸಿನ ನೆರವು ಒದಗಿಸಿದ್ದರು ಎಂಬ ಆರೋಪವಿದೆ. ಬಂಧಿತರ ಮನೆ ಹಾಗೂ ಸಂಬಂಧಿತ ಸ್ಥಳಗಳಲ್ಲಿ ಅಧಿಕಾರಿಗಳು ದಾಖಲೆಗಳ ಶೋಧ ಕಾರ್ಯ ನಡೆಸಿದ್ದಾರೆ.
ಚಿನ್ನ ಸ್ಮಗ್ಲಿಂಗ್ ಸಂಬಂಧಿಸಿದಂತೆ ಇದುವರೆಗೂ ರಾಷ್ಟ್ರೀಯ ತನಿಖಾ ಸಂಸ್ಥೆಯು 25 ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.