ಜೈಪುರ : ಕೇರಳದ ಕೊಚ್ಚಿನ್ ಶಿಫ್ಯಾರ್ಡ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ವಿಮಾನ ವಾಹಕ ನೌಕೆ ಐಎನ್ಎಸ್ ವಿಕ್ರಾಂತ್ನಿಂದ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಕಳವು ಮಾಡಿದ ಇಬ್ಬರು ಆರೋಪಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯ ಪೊಲೀಸರು ಬಂಧಿಸಿದ್ದಾರೆ.
ಬಿಹಾರದ ಮುಂಗರ್ ಜಿಲ್ಲೆಯ ಸುಮಿತ್ ಕುಮಾರ್ ಸಿಂಗ್ ( 23) ಮತ್ತು ರಾಜಸ್ಥಾನದ ಹನುಮಘರ್ ನಿವಾಸಿ ದಯಾರಾಮ್ (22) ಬಂಧಿತ ಆರೋಪಿಗಳು. ಇವರು 2019 ಸೆಪ್ಪೆಂಬರ್ ತಿಂಗಳಲ್ಲಿ ಕೊಚ್ಚಿನ್ ಶಿಪ್ಯಾರ್ಡ್ನಲ್ಲಿ ನಿರ್ಮಾಣ ಹಂತದಲ್ಲಿದ್ದ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ನಿಂದ ಕಂಪ್ಯೂಟರ್ ಹಾರ್ಡ್ ಡಿಸ್ಕ್ ಮತ್ತು ಇತರ ಎಲೆಕ್ಟ್ರಾನಿಕ್ ಸಾಧನಗಳನ್ನು ಕಳವು ಮಾಡಿದ್ದರು. ಈ ಕುರಿತು ಎರ್ನಾಕುಲಂನಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದರಿಂದ ತನಿಖೆಯ ಉಸ್ತುವಾರಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಹಿಸಿಕೊಂಡಿತ್ತು. ತನಿಖೆ ವೇಳೆ ನೌಕೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಸುಮಾರು 5 ಸಾವಿರ ಸಿಬ್ಬಂದಿಯನ್ನ ಎನ್‌ಐಎ ವಿಚಾರಣೆ ನಡೆಸಿತ್ತು ಮತ್ತು ಅವರ ಬೆರಳಚ್ಚು ಪಡೆದಿತ್ತು. ಇದೀಗ ಎಂಟು ತಿಂಗಳ ಬಳಿಕ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಎನ್‌ಐಎ ಯಶಸ್ವಿಯಾಗಿದೆ.
-
NIA Cracks IAC Theft Case pic.twitter.com/ENBJ0CaRdQ
— NIA India (@NIA_India) June 10, 2020 " class="align-text-top noRightClick twitterSection" data="
">NIA Cracks IAC Theft Case pic.twitter.com/ENBJ0CaRdQ
— NIA India (@NIA_India) June 10, 2020NIA Cracks IAC Theft Case pic.twitter.com/ENBJ0CaRdQ
— NIA India (@NIA_India) June 10, 2020
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಎನ್‌ಐಎ ಕಳವು ಮಾಡಿದ್ದ ಆರೋಪಿಗಳ ಬಗ್ಗೆ ಮಾಹಿತಿ ನೀಡುವವರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು. ತನಿಖೆ ವೇಳೆ ಪ್ರಮುಖ ಸಾಕ್ಷಿಗಳನ್ನು ಕಲೆ ಹಾಕಿದ ತನಿಖಾ ತಂಡ ಜೂನ್ 10 ರಂದು ರಾಜಸ್ಥಾನ, ಗುಜರಾತ್ ಮತ್ತು ಬಿಹಾರದಲ್ಲಿ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ, ರಾಜಸ್ಥಾನದ ಹನುಮಗರ್ ಮತ್ತು ಬಿಹಾರದ ಮುಂಗರ್ನಲ್ಲಿ ಆರೋಪಿಗಳನ್ನು ಬಂಧಿಸಿದೆ.
ಬಂಧಿತ ಆರೋಪಿಗಳಿಂದ ಐದು ಮೈಕ್ರೊ - ಪ್ರೊಸೆಸರ್, 10 ರ‍್ಯಾಮ್, ಐದು ಸಾಲಿಡ್ ಸ್ಟೇಟ್ ಡ್ರೈವ್ (ಎಸ್‌ಎಸ್‌ಡಿ) ಮತ್ತು ಹಡಗಿನಲ್ಲಿದ್ದ ಮಲ್ಟಿ- ಫಂಕ್ಷನಲ್ ಕನ್ಸೋಲ್ (ಎಂಎಫ್‌ಸಿ) ವಶಪಡಿಸಿಕೊಳ್ಳಲಾಗಿದೆ.
ಐಎನ್ಎಸ್ ವಿಕ್ರಾಂತ್ ಭಾರತೀಯ ನೌಕಾಪಡೆಯ ಮೊದಲ ಸ್ಥಳೀಯ ವಿಮಾನವಾಹಕ ನೌಕೆ. ಹಡಗಿನ ವಿನ್ಯಾಸದ ಕೆಲಸವು 1999 ರಲ್ಲಿ ಪ್ರಾರಂಭಿಸಿ ಫೆಬ್ರವರಿ 2009 ರಲ್ಲಿ ಕೀಲ್ ಹಾಕಲಾಗಿತ್ತು. ಫೆಬ್ರವರಿ 2021ರಲ್ಲಿ ನೌಕೆ ಸಮುದ್ರ ಪ್ರಯೋಗಗಳನ್ನು ಪ್ರಾರಂಭಿಸಿದೆ, 2023 ರ ಹೊತ್ತಿಗೆ ಸೇವೆಗೆ ಇಳಿಯುವ ಸಾಧ್ಯತೆಯಿದೆ.