ETV Bharat / bharat

ಅಸ್ಸೋಂ: ಮಹಿಳೆಯರಿಗೆ-ಹಿರಿಯ ನಾಗರಿಕರಿಗೆ ಉಚಿತ ಸೇವೆ ಒದಗಿಸಲಿವೆ ಪಿಂಕ್​​ ಬಸ್​​ಗಳು - ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್

ಭ್ರಮನ್ ಸರತಿ ಯೋಜನೆಯಡಿಯಲ್ಲಿ ಗುವಾಹಟಿಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಉಚಿತ ಸಾರಿಗೆ ಸೇವೆಯು ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಸೇವೆ ಒದಗಿಸಲಿದೆ.

Newly-launched 'Pink Buses' to ensure safety of women, senior citizens in Guwahati
ಅಸ್ಸೋಂ: ಮಹಿಳೆಯರಿಗೆ-ಹಿರಿಯ ನಾಗರಿಕರಿಗೆ ಉಚಿತ ಸೇವೆ ಒದಗಿಸಲಿದೆ ಈ 25 ಬಸ್​​ಗಳು
author img

By

Published : Jan 10, 2021, 12:00 PM IST

ಅಸ್ಸೋಂ: ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಉಚಿತ ಸೇವೆ ಒದಗಿಸುವ 25 ಗುಲಾಬಿ ಬಣ್ಣದ ಬಸ್​​ಗಳಿಗೆ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಹಸಿರು ನಿಶಾನೆ ತೋರಿದರು.

ಮಹಿಳೆಯರಿಗೆ-ಹಿರಿಯ ನಾಗರಿಕರಿಗೆ ಉಚಿತ ಸೇವೆ ಒದಗಿಸಲಿದೆ ಈ 25 ಬಸ್​​ಗಳು

ಭ್ರಮನ್ ಸರತಿ ಯೋಜನೆಯಡಿಯಲ್ಲಿ ಗುವಾಹಟಿಯಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಈ ಉಚಿತ ಸಾರಿಗೆ ಸೇವೆಯು ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಅಪಾರ ಸೇವೆ ಒದಗಿಸಲಿದೆ. ಹಾಗಾಗಿ ಪ್ರಯಾಣಿಕರು ಈ ಬಸ್ಸುಗಳ ಬಗ್ಗೆ ಸಾಕಷ್ಟು ಕಾಳಜಿ ವಹಿಸಬೇಕೆಂದು, ಖಾನಪುರದ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಸಿಎಂ ಮನವಿ ಮಾಡಿದರು.

ಬಸ್ಸುಗಳು ಐದು ಮಾರ್ಗಗಳಲ್ಲಿ ಸಂಚಾರ ನಡೆಸಲಿವೆ. ಕೋವಿಡ್​ ಸಂದರ್ಭದಲ್ಲಿ ಕೂಡ ಅಗತ್ಯ ವಸ್ತುಗಳು ಮತ್ತು ಜನರನ್ನು ಸಾಗಿಸುವಲ್ಲಿ ಅಸ್ಸೋಂ ರಾಜ್ಯ ಸಾರಿಗೆ ನಿಗಮ ಮಹತ್ವದ ಪಾತ್ರ ವಹಿಸಿತ್ತು ಎಂದ ಸಿಎಂ, ರಾಜ್ಯ ಸಾರಿಗೆ ನಿಗಮ (ಎಎಸ್‌ಟಿಸಿ) ಸಾಮಾಜಿಕ ಸೇವೆಯಲ್ಲಿ ವಹಿಸಿರುವ ಮುಖ್ಯ ಪಾತ್ರವನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದರು.

ಈ ಸುದ್ದಿಯನ್ನೂ ಓದಿ: ರೈಲಿನಡಿ ಸಿಲುಕುತ್ತಿದ್ದ ಮಹಿಳೆಯ ಜೀವ ಉಳಿಸಿದ ಆರ್‌ಪಿಎಫ್ ಸಿಬ್ಬಂದಿ

ಸಾರಿಗೆ ಸಚಿವ ಚಂದ್ರ ಮೋಹನ್ ಪಟೋವರಿ ಮತ್ತು ಎಎಸ್‌ಟಿಸಿ ಅಧಿಕಾರಿಗಳು, ಚಾಲಕರು-ನಿರ್ವಾಹಕರು ಸೇರಿದಂತೆ ಇತರೆ ಸಿಬ್ಬಂದಿಯ ಸೇವೆಯನ್ನು ವಿಶೇಷವಾಗಿ ಶ್ಲಾಘಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.