ETV Bharat / bharat

ವಿಶೇಷ ಅಂಕಣ: ಕೊರೊನಾ ಭೀತಿಯನ್ನು ಮನದೊಳಗೆ ಅನುಭವಿಸುವ ಸಮಯ - ರೋಲರ್ ಕೋಸ್ಟರ್‌

ಜಪಾನ್‌ನ ಫ್ಯೂಜಿ-ಕ್ಯೂ ಹೈಲ್ಯಾಂಡ್ ಥೀಮ್ ಪಾರ್ಕ್ ಸಹ ಒಂದು ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇದು ಉದ್ಯಾನದ ಇಬ್ಬರು ಅಧಿಕಾರಿಗಳು ಒಮ್ಮೆಯೂ ಕಿರುಚಾಡದೆ ಉದ್ಯಾನದ ಫ್ಯೂಜಿಯಾಮಾ ರೋಲರ್ ಕೋಸ್ಟರ್‌ನಲ್ಲಿ ತಮ್ಮೊಳಗೆ ನೋವು ಅನ್ನು ನುಂಗಿಕೊಂಡಂತೆ ಭಾಸವಾಗುತ್ತದೆ. "ದಯವಿಟ್ಟು ನಿಮ್ಮ ಹೃದಯದೊಳಗೆ ಕಿರುಚಿಕೊಳ್ಳಿ" ಎಂಬ ಸಂದೇಶದೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ.

ವಿಶೇಷ ಅಂಕಣ
ವಿಶೇಷ ಅಂಕಣ
author img

By

Published : Aug 4, 2020, 5:02 PM IST

ಲಾಕ್‌ಡೌನ್ ಕ್ರಮಗಳನ್ನು ಸರಳೀಕರಣಗೊಳಿಸುವ ಮತ್ತು ಆರ್ಥಿಕ ಚಟುವಟಿಕೆಗಳನ್ನು ಪುನರಾರಂಭಿಸಲು ಜಗತ್ತು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ, ‘ಹೊಸ ಪರಿಸ್ಥಿತಿ’ ವಿಚಾರದಲ್ಲಿ ವಿಷಯಗಳು ಎಂದಿಗೂ ಒಂದೇ ಆಗಿರುವುದಿಲ್ಲ. ಒಂದೆಡೆ ಸಾರಿಗೆ, ಶಾಲೆಗಳು, ವ್ಯವಹಾರ ಮತ್ತು ಮನರಂಜನೆ ಸೇರಿದಂತೆ ಸುರಕ್ಷಿತ ಚಟುವಟಿಕೆಗಳಿಗೆ ವಿಶ್ವದ ವಿವಿಧ ಭಾಗಗಳಲ್ಲಿನ ಆಡಳಿತವರ್ಗ ಸೂಕ್ತವಾದ ವಾತಾವರಣವನ್ನು ಕಲ್ಪಿಸಿಕೊಡಬೇಕಾಗುತ್ತದೆ. ಮತ್ತೊಂದೆಡೆ, ಸಾಮಾನ್ಯ ಜನರು ಸಹ ಅಧಿಕಾರಿ ವರ್ಗದ ಸೂಚನೆಗಳನ್ನು ಪಾಲಿಸಬೇಕು ಮತ್ತು ಸೂಕ್ಷ್ಮವಾಗಿ ಪ್ರತಿಕ್ರಿಯಿಸಬೇಕು. ಆದರೆ ಜಪಾನ್‌ನಲ್ಲಿ ಥೀಮ್ ಪಾರ್ಕ್‌ಗಳನ್ನು ಜುಲೈನಲ್ಲಿ ಮತ್ತೆ ತೆರೆದು ಒಂದು ವಿಶಿಷ್ಟ ಉದಾಹರಣೆ ಮುನ್ನುಡಿಯಾಗುತ್ತದೆ. ಥೀಮ್ ಪಾರ್ಕ್‌ಗಳನ್ನು ಕೋವಿಡ್ -19 ಸಾಂಕ್ರಾಮಿಕ ಸೋಂಕು ಎದುರಿಸುವ ನಿಟ್ಟಿನಲ್ಲಿ ಫೆಬ್ರವರಿ ಆರಂಭದಲ್ಲೇ ಮುಚ್ಚಲಾಗಿತ್ತು.

ಜಪಾನ್‌ನ ಪ್ರಮುಖ ಥೀಮ್ ಪಾರ್ಕ್ ನಿರ್ವಾಹಕರ ತಂಡ ಪ್ರವಾಸಿಗಳು ಮತ್ತು ಸಿಬ್ಬಂದಿಗಳ ಸುರಕ್ಷತೆಯನ್ನು ಯಾವ ರೀತಿ ಖಚಿತಪಡಿಸಿಕೊಳ್ಳುವುದು ಎಂಬುದರ ಕುರಿತು ಒಂದು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಸಾಮಾನ್ಯ ನಡವಳಿಗಳನ್ನೊಳಗೊಂಡಿರುವ ಮಾರ್ಗಸೂಚಿಗಳಲ್ಲಿ ಸಾಮಾಜಿಕ ಅಂತರ ಮತ್ತು ಹೆಚ್ಚಿದ ಶುಚಿತ್ವ ಕಾಯ್ದುಕೊಳ್ಳುವುದು, ಥರ್ಮಲ್ ಸ್ಕ್ರೀನಿಂಗ್ ಮತ್ತು ಮುಖಗವಸು ಧರಿಸುವುದು ಒಳಗೊಂಡಿವೆ. ಪೂರ್ವ ಮತ್ತು ಪಶ್ಚಿಮ ಜಪಾನ್ ಥೀಮ್ ಪಾರ್ಕ್ ಸಂಸ್ಥೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಈ ಸಂಸ್ಥೆ ಜಪಾನ್‌ನ 30ಕ್ಕೂ ಹೆಚ್ಚು ಪ್ರಮುಖ ಮನೋರಂಜನಾ ಉದ್ಯಾನವನವನ್ನು ನಿರ್ವಹಿಸುತ್ತಿದೆ. “ಹೊಸ ಶೈಲಿಯ ಗ್ರಾಹಕ ಸೇವೆಯಂತೆ, ನೀವು ಮುಖಗವಸು ಧರಿಸಿದ ಸಂದರ್ಭದಲ್ಲಿಯೂ ಕೂಡ, ನೀವು ಗ್ರಾಹಕರ ಜತೆ ಸಂವಹನ ನಡೆಸಲು ಕಣ್ಣುಗಳು ಮಿಟಕಿಸುವುದು, ಕೈ ಸನ್ನೆಗಳು ಇತ್ಯಾದಿಗಳ ಸನ್ನೆಯನ್ನು ಬಳಸಬಹುದು”. ಸಂಭಾಷಣೆಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದರಿಂದ ಗ್ರಾಹಕ ಸೇವೆಯ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ, ‘ಹೊಸ ಸಾಮಾನ್ಯ’ಚಿತ್ರಣ ಖಂಡಿತವಾಗಿಯೂ ಸನ್ನೆಗಳ ಬಗ್ಗೆ ಹೆಚ್ಚು ಮಹತ್ವ ನೀಡಿ ಮತ್ತು ಪದಗಳನ್ನು ಉಚ್ಚರಿಸುವ ಕುರಿತು ಕಡಿಮೆ ತಿಳಿಸುತ್ತದೆ.

ಥೀಮ್ ಪಾರ್ಕ್​ನ ಇನ್ನೊಂದು ಮನವಿಯನ್ನು ಸಂದರ್ಶಕರಿಗೆ ಪಾಲಿಸುವುದು ಕೂಡ ಕಷ್ಟಸಾಧ್ಯವಾಗಬಹುದು. ರೋಲರ್ ಕೋಸ್ಟರ್ ಸವಾರಿ ಮಾಡುವಾಗ ಮಾಸ್ಕ್​ ಧರಿಸಿರಬೇಕು ಎಂದು ವಿನಂತಿಸಲಾಗಿದೆ. ಇದು ಮುಖ್ಯವಾಗಿ ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಪ್ರಯತ್ನವಾಗಿದೆ. ಮಾತನಾಡುವ ಸಂದರ್ಭದಲ್ಲಿ ಗಂಟೆಗೆ 120 ಕಿ.ಮೀ ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಬಾಯಿಯಿಂದ ಬೀಳುವ ಡ್ರಾಪ್​ಲೆಟ್​ಗಳನ್ನು ನಿರ್ಬಂಧಿಸುವ ಸಲುವಾಗಿ ಮಾಡಿರುವ ಪ್ರಯತ್ನ ಇದಾಗಿದೆ.

ವಾಸ್ತವವಾಗಿ, ವಿಶ್ವದ ವಿವಿಧ ಭಾಗಗಳಲ್ಲಿರುವ ಕೆಲವು ಪ್ರಸಿದ್ಧ ರೋಲರ್ ಕೋಸ್ಟರ್‌ಗಳ ಹೆಸರುಗಳು ಸಹ ಮಾತಿನ ಪದಕ್ಕೆ ಪೂರಕವಾಗಿದೆ: ಉದಾಹರಣೆಗೆ, ಜರ್ಮನಿಯ ರೈನ್‌ಲ್ಯಾಂಡ್-ಪ್ಯಾಲಟಿನೇಟ್‌ನ ಹ್ಯಾಸ್‌ಲೋಚ್‌ನ ಹಾಲಿಡೇ ಪಾರ್ಕ್‌ನಲ್ಲಿರುವ ಸ್ಟೀಲ್ ರೋಲರ್ ಕೋಸ್ಟರ್ ‘ಸ್ಕೈ ಸ್ಕ್ರೀಮ್’ ಮತ್ತು ಅಮೆರಿಕದ ಕ್ಯಾಲಿಫೋರ್ನಿಯಾದ ವೇಲೆನ್ಶಿಯಾದ ಸಿಕ್ಸ್ ಫ್ಲ್ಯಾಗ್ಸ್ ಮ್ಯಾಜಿಕ್ ಮೌಂಟೇನ್‌ನಲ್ಲಿರುವ ಸ್ಕ್ರೀಮ್ ರೋಲರ್ ಕೋಸ್ಟರ್ ಆಗಿದೆ. ಇದು ನಿಸ್ಸಂಶಯವಾಗಿ, ನೂರಾರು ಅಡಿಗಳ ಮೇಲಿಂದ ಧಮುಕುವ ಸಂದರ್ಭದಲ್ಲಿ ಮಾತನಾಡಬಾರದು ಮತ್ತು ಕಿರುಚಾಡಬಾರದು ಎನ್ನುವ ನಿಬಂಧನೆಯನ್ನು ಹೊಂದಿದ್ದು, ಅವುಗಳನ್ನು ಪಾಲಿಸುವುದು ಅಷ್ಟು ಸುಲಭವಲ್ಲ. ಜಪಾನ್‌ನ ಫ್ಯೂಜಿ-ಕ್ಯೂ ಹೈಲ್ಯಾಂಡ್ ಥೀಮ್ ಪಾರ್ಕ್ ಸಹ ಒಂದು ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ಇದು ಉದ್ಯಾನದ ಇಬ್ಬರು ಅಧಿಕಾರಿಗಳು ಒಮ್ಮೆಯೂ ಕಿರುಚಾಡದೆ ಉದ್ಯಾನದ ಫ್ಯೂಜಿಯಾಮಾ ರೋಲರ್ ಕೋಸ್ಟರ್‌ನಲ್ಲಿ ತಮ್ಮೊಳಗೆ ನೋವು ಅನ್ನು ನುಂಗಿಕೊಂಡಂತೆ ಭಾಸವಾಗುತ್ತದೆ. "ದಯವಿಟ್ಟು ನಿಮ್ಮ ಹೃದಯದೊಳಗೆ ಕಿರುಚಿಕೊಳ್ಳಿ" ಎಂಬ ಸಂದೇಶದೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ. ರೋಲರ್ ಕೋಸ್ಟರ್ ಸವಾರಿಯ ಸಮಯದಲ್ಲಿ ಜನರು “ ಇದನ್ನು ಮುಖ್ಯ ಸವಾಲಾಗಿ “ತೆಗೆದುಕೊಳ್ಳುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದೆ.

ನಿಸ್ಸಂಶಯವಾಗಿ, ನನಗೆ ಗೊತ್ತಿರುವ ಮಾಹಿತಿಯ ಪ್ರಕಾರ ವಿಶ್ವದ ಇತರ ಥೀಮ್ ಪಾರ್ಕ್‌ಗಳು ಇನ್ನೂ ಇಂತಹ ನಿಬಂಧನೆಯನ್ನು ಜಾರಿಗೆ ತಂದಿಲ್ಲ. ಉದಾಹರಣೆಗೆ, ಒರ್ಲ್ಯಾಂಡೊದ ಡಿಸ್ನಿ ವರ್ಲ್ಡ್ ಪಾರ್ಕ್ ಜುಲೈನಲ್ಲಿ ತೆರೆಯಲ್ಪಟ್ಟಿದೆ. ಆದರೆ ಅಲ್ಲಿ ಯಾವುದೇ ಕಿರುಚಾಟದ ನಿಷೇಧವನ್ನು ಜಾರಿಗೆ ತಂದಿಲ್ಲ. ವಿನೋದ ಮತ್ತು ಮನೋರಂಜನಾ ಪಾರ್ಕ್​ಗಳಲ್ಲಿ ಇಂತಹ ನಿಬಂಧನೆಗಳ ಪಾಲನೆ ಅಷ್ಟು ಸುಲಭ ಸಾಧ್ಯವಲ್ಲ. ಕಿರುಚಾಟ ತಡೆ ಮಾರ್ಗಸೂಚಿ ಉಲ್ಲಂಘನೆಗೆ ಶಿಕ್ಷೆ ಅಥವಾ ದಂಡ ವಿಧಿಸಿದರೆ ಅಂತಹ ಸ್ಥಳಗಳಿಂದ ಪ್ರವಾಸಿಗಳು ದೂರ ಇರುತ್ತಾರೆ. ಕುತೂಹಲಕಾರಿ ಅಂಶ ಎಂದರೆ, ಜಪಾನೀಸ್ ಥೀಮ್ ಪಾರ್ಕ್‌ಗಳಲ್ಲಿ ಯಾವುದೇ ಕಿರುಚಾಟ ನಿಬಂಧನೆ ಮಾರ್ಗಸೂಚಿಯನ್ನು ಉಲ್ಲಂಘಿಸಿದರೆ ಯಾವುದೇ ಶಿಕ್ಷೆಯಿಲ್ಲ. ಆದರೂ ಜನರು ನಿಯಮಗಳನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ವಾಸ್ತವವಾಗಿ, ಇದು ಅಲ್ಲಿನ ಶಿಸ್ತು ಮತ್ತು ಸಂಸ್ಕೃತಿಯ ವಿಚಾರವಾಗಿದೆ.

ಜಪಾನ್ ಸಾಮಾಜಿಕ ಸೌಜನ್ಯದ ಗೀಳು, ಕೆಮ್ಮು ಮತ್ತು ಶೀತ ಪೀಡಿತರು ತಮ್ಮ ರೋಗಾಣುಗಳನ್ನು ಇತರರಿಗೆ ಹರಡುವುದನ್ನು ತಪ್ಪಿಸಲು ಪ್ರಯತ್ನಿಸುವುದರಿಂದ ಮುಖಗವಸುಗಳು ಅವರ ಆಧುನಿಕ ದೈನಂದಿನ ಜೀವನ ಶೈಲಿಯ ಅನಿವಾರ್ಯ ಪರಿಕರಗಳಾಗಿವೆ. ದೇಶದ ಜನರು ದಶಕಗಳಿಂದ ಮುಖಗವಸುಗಳನ್ನು ಬಳಸುತ್ತಿದ್ದಾರೆ. ತಮ್ಮನ್ನು ರಕ್ಷಿಸಿಕೊಳ್ಳಲು ಮಾತ್ರವಲ್ಲ, ಇತರರನ್ನು ರಕ್ಷಿಸಲು. ಸಾಂಕ್ರಾಮಿಕ ಸೋಂಕಿನ ಈ ಅವಧಿಯಲ್ಲಿ ಸಾಮಾಜಿಕ ಸೌಜನ್ಯದಂತಹ ಈ ಗೀಳನ್ನು ವಿಸ್ತರಿಸುವ ಸಾಧ್ಯತೆಯಿದೆ ಮತ್ತು ಅಪಾಯಕಾರಿ ರೋಲರ್ ಕೋಸ್ಟರ್ ಸವಾರಿಯ ಸಮಯದಲ್ಲೂ ಕೂಡ ಯಾವುದೇ ಕಿರುಚಾಟ ಮಾಡದೆ ಆ ದೇಶದ ಜನರು ಯಶಸ್ವಿಯಾಗಿ ಅನುಸರಿಸುತ್ತಾರೆ. ಪೂರ್ವ ಏಷ್ಯಾದ ಕೆಲವು ಭಾಗಗಳನ್ನು ಒಳಗೊಂಡಂತೆ ಇತರ ಕೆಲವು ಸ್ಥಳಗಳಲ್ಲಿಯೂ ಈ ಪ್ರಯೋಗ ಸ್ವಲ್ಪ ಯಶಸ್ವಿಯಾಗಬಹುದು. ಆದಾಗ್ಯೂ, ಇಂತಹ ಸನ್ನಿವೇಶವನ್ನು ಖಚಿತವಾಗಿ, ವಿಶ್ವದ ಹೆಚ್ಚಿನ ಸ್ಥಳಗಳಲ್ಲಿ ಪುನರಾವರ್ತಿಸುವುದು ಕಷ್ಟ ಸಾಧ್ಯ.

ಖ್ಯಾತ ಆಸ್ಟ್ರಿಯಾದ ನರವಿಜ್ಞಾನಿ ಮತ್ತು ಮನೋವೈದ್ಯ ವಿಕ್ಟರ್ ಎಮಿಲ್ ಫ್ರಾಂಕ್ಲ್ ಹೀಗೆ ವ್ಯಾಖ್ಯಾನಿಸುತ್ತಾರೆ: “ಪ್ರಚೋದನೆ ಮತ್ತು ಪ್ರತಿಕ್ರಿಯೆಯ ನಡುವೆ ಒಂದು ಅಂತರವಿದೆ. ಆ ಸಂದರ್ಭದಲ್ಲಿ ನಮ್ಮ ಪ್ರತಿಕ್ರಿಯೆಯನ್ನು ಆರಿಸುವ ಶಕ್ತಿ ನಮ್ಮದಾಗುತ್ತದೆ. ನಮ್ಮ ಪ್ರತಿಕ್ರಿಯೆಯಲ್ಲಿ ನಮ್ಮ ಬೆಳವಣಿಗೆ ಮತ್ತು ನಮ್ಮ ಸ್ವಾತಂತ್ರ್ಯವಿದೆ.”

‘ಹೊಸ ಸಾಮಾನ್ಯ’ಜಗತ್ತು ತುಂಬಾ ವಿಭಿನ್ನವಾಗಿದೆ. ನಮ್ಮ ಹೃದಯದೊಳಗೆ ಕಿರುಚಾಡುವ ಸಮಯ ಇದಾಗಿದೆ.

- ಅಟನು ಬಿಸ್ವಾಸ್ (ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ, ಭಾರತೀಯ ಸಂಖ್ಯಾಶಾಸ್ತ್ರ ಸಂಸ್ಥೆ, ಕೋಲ್ಕತ್ತ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.