ETV Bharat / bharat

ಪ್ಯಾಂಗೋಂಗ್​ ಸರೋವರದ ಬಳಿ ಕಾಮಗಾರಿ ಆರಂಭಿಸಿ ಚೀನಾ ದುಸ್ಸಾಹಸ ಮೆರೆದಿದೆ: ಸುರ್ಜೇವಾಲಾ - ಲೈನ್​ ಆಫ್​ ಆಕ್ಚುವಲ್​ ಕಂಟ್ರೋಲ್

ಉಪಗ್ರಹ ಚಿತ್ರಗಳ ಮೂಲಕ ಚೀನಾ ಎಲ್​ಎಸಿ ಗಡಿಯಲ್ಲಿ ಕಾಮಗಾರಿಯೊಂದನ್ನು ಆರಂಭಿಸುತ್ತಿರುವುದು ದೃಢಪಟ್ಟಿದ್ದು, ಕಾಂಗ್ರೆಸ್ ನಾಯಕ ರಂದೀಪ್​ ಸಿಂಗ್ ಸುರ್ಜೇವಾಲಾ​ ಟ್ವಿಟ್ಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Surjewala
ಕಾಂಗ್ರೆಸ್ ನಾಯಕ ರಂದೀಪ್​ ಸಿಂಗ್ ಸುರ್ಜೇವಾಲಾ
author img

By

Published : Jul 27, 2020, 5:16 PM IST

ನವದೆಹಲಿ: ಚೀನಾ ಎಲ್​ಎಸಿ (ಲೈನ್​ ಆಫ್​ ಆಕ್ಚುವಲ್​ ಕಂಟ್ರೋಲ್​)ನ ಭಾರತದ ಭಾಗದಲ್ಲಿ ಹೊಸದೊಂದು ಕಾಮಗಾರಿ ನಡೆಸುತ್ತಿದೆ. ಇದು ಉಪಗ್ರಹ ಚಿತ್ರಗಳ ಮೂಲಕ ಗೊತ್ತಾಗುತ್ತಿದೆ. ಇದು ಕೇಂದ್ರ ಸರ್ಕಾರದ ಅರಿವಿಗೆ ಬಂದಿದೆಯೇ ಎಂದು ಕಾಂಗ್ರೆಸ್ ನಾಯಕ ರಂದೀಪ್​ ಸಿಂಗ್ ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

Surjewala tweet
ಸುರ್ಜೇವಾಲಾ ಟ್ವೀಟ್​

ಈ ಕುರಿತು ಟ್ವೀಟ್ ಮಾಡಿರುವ ಅವರು, ಚೀನಾದ ದುಸ್ಸಾಹಸ ಒಪ್ಪಿಕೊಳ್ಳಲು ಸಾಧ್ಯವಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಪ್ಯಾಂಗೋಂಗ್​​​​ ಸರೋವರ ಪ್ರದೇಶದಲ್ಲಿ ಚೀನಾ ನಿರ್ಮಿಸುತ್ತಿರುವ ಹೊಸ ಕಾಮಗಾರಿ ಆತಂಕಕ್ಕೀಡು ಮಾಡಿದೆ ಎಂದಿದ್ದಾರೆ.

ಕೆಲವೊಂದು ಬೆಳವಣಿಗೆಗಳಲ್ಲಿ ಭಾರತ ಮತ್ತು ಚೀನಾ ಗಾಲ್ವಾನ್​ ಕಣಿವೆಯ ಪ್ಯಾಟ್ರೋಲಿಂಗ್​ ಪಾಯಿಂಟ್​ 15, ಗೋಗ್ರಾ, ಹಾಟ್​ಸ್ಪ್ರಿಂಗ್​ ಹಾಗೂ ಪೂರ್ವ ಲಡಾಖ್​ನಲ್ಲಿ ಸೇನೆಯನ್ನು ತೆರವುಗೊಳಿಸಿದ್ದವು.

ಈಗ ಉಪಗ್ರಹ ಚಿತ್ರಗಳಿಂದ ಚೀನಾ ಕಾಮಗಾರಿ ನಡೆಯುತ್ತಿರುವುದು ದೃಢಪಟ್ಟಿದ್ದು, ಎರಡು ರಾಷ್ಟ್ರಗಳ ಮಧ್ಯೆ ಮತ್ತಷ್ಟು ಆತಂಕಕಾರಿ ವಾತಾವರಣ ನಿರ್ಮಾಣವಾಗುವ ಸಾಧ್ಯತೆಗಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.