ETV Bharat / bharat

ಗಡಿಯಲ್ಲಿ ಕಾನೂನುಬಾಹಿರವಾಗಿ ರಸ್ತೆ ನಿರ್ಮಿಸಲು ಮುಂದಾದ ನೇಪಾಳ: ಉದ್ಧಟತನಕ್ಕೆ ಬ್ರೇಕ್​ ಹಾಕಿದ ಅಧಿಕಾರಿಗಳು

author img

By

Published : Jul 6, 2020, 11:22 AM IST

ಇಂಡೋ-ನೇಪಾಳ ಗಡಿಯಲ್ಲಿರುವ ನೋ ಮ್ಯಾನ್ಸ್ ಲ್ಯಾಂಡ್ ಜಮೀನಿನಲ್ಲಿ ನೇಪಾಳ ಕಾನೂನುಬಾಹಿರವಾಗಿ ರಸ್ತೆ ನಿರ್ಮಾಣ ಪ್ರಾರಂಭಿಸಿತ್ತು. ಆದರೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು ಸ್ಥಳಕ್ಕೆ ತೆರಳಿ ರಸ್ತೆಯ ನಿರ್ಮಾಣ ಕಾಮಗಾರಿಯನ್ನು ನಿಲ್ಲಿಸಿದರು.

officers
officers

ಪಿಲಿಭಿತ್​(ಉತ್ತರಪ್ರದೇಶ): ಪಿಲಿಭಿತ್ ಜಿಲ್ಲೆಯ ಪಕ್ಕದಲ್ಲಿರುವ ಇಂಡೋ-ನೇಪಾಳ ಗಡಿಯಲ್ಲಿರುವ ನೋ ಮ್ಯಾನ್ಸ್ ಲ್ಯಾಂಡ್ ಪ್ರದೇಶದಲ್ಲಿ ನೇಪಾಳವು ಕಾನೂನುಬಾಹಿರವಾಗಿ ರಸ್ತೆ ನಿರ್ಮಾಣವನ್ನು ಪ್ರಾರಂಭಿಸಿತ್ತು. ಇದಕ್ಕೆ ಅಧಿಕಾರಿಗಳು ಬ್ರೇಕ್​ ಹಾಕಿದ್ದಾರೆ.

ಪಿಲಿಭಿತ್ ಜಿಲ್ಲಾಧಿಕಾರಿ ವೈಭವ್ ಶ್ರೀವಾಸ್ತವ್​ ಸೇರಿದಂತೆ ಜಿಲ್ಲೆಯ ಉನ್ನತ ಅಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಭಾರತ ನೇಪಾಳ ಗಡಿಯನ್ನು ತಲುಪಿ ನೇಪಾಳ ನಿರ್ಮಿಸುತ್ತಿರುವ ರಸ್ತೆಯ ನಿರ್ಮಾಣವನ್ನು ನಿಲ್ಲಿಸಿದ್ದಾರೆ.

ನೇಪಾಳ ಭಾರತದ ಗಡಿಯನ್ನು ಅಕ್ರಮವಾಗಿ ಅತಿಕ್ರಮಿಸಲು ಪ್ರಯತ್ನಿಸುತ್ತಿದ್ದು, ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯ ಒಂದು ಭಾಗವೂ ನೇಪಾಳದೊಂದಿಗೆ ಸಂಪರ್ಕ ಹೊಂದಿದೆ.

ಪಿಲಿಭಿತ್ ನೇಪಾಳ ಗಡಿಯ ನಡುವೆ ನೋ ಮ್ಯಾನ್ಸ್ ಲ್ಯಾಂಡ್ ಜಮೀನಿನಲ್ಲಿ ಇದೀಗ ಅಕ್ರಮವಾಗಿ ರಸ್ತೆ ನಿರ್ಮಾಣ ಪ್ರಾರಂಭಿಸಿದ್ದು, ಭಾರತೀಯ ಅಧಿಕಾರಿಗಳು ಇದನ್ನು ತಡೆದ ಕಾರಣ ಯಾವುದೇ ನಿರ್ಮಾಣ ಕಾರ್ಯ ಸ್ಥಗಿತಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.