ಫಲಕ ಹಾಕಿ ಗಡಿ ಆಕ್ರಮಿಸಲು ಮುಂದಾದ ನೇಪಾಳ: ಎಸ್‌ಎಸ್‌ಬಿ ಮಧ್ಯಸ್ಥಿಕೆಯಿಂದ ಬಗೆಹರಿದ ವಿವಾದ - No Mans Land
ರಕ್ಸೌಲ್ ಮತ್ತು ಬಿರ್ಗುಂಜ್ ಪ್ರದೇಶವನ್ನು ಸಂಪರ್ಕಿಸುವ ಸೇತುವೆಯ ಮೇಲೆ ಒಂದು ಫಲಕವೊಂದನ್ನು ನೇತು ಹಾಕಿ, ಇಂದಿನಿಂದ ಇದು 'ತನ್ನ ದೇಶದ ಭೂಮಿ' ಎಂದು ನೇಪಾಳ ಹೇಳಿಕೊಂಡಿದೆ. ಆದರೆ, ಎಸ್‌ಎಸ್‌ಬಿ ಸಿಬ್ಬಂದಿ ಮಧ್ಯಪ್ರವೇಶಿಸಿದ ನಂತರ ಫಲಕ ತೆಗೆದುಹಾಕಲಾಯಿತು.
ರಕ್ಸೌಲ್ (ಬಿಹಾರ): ಬಿಹಾರದ ಬಿರ್ಗುಂಜ್-ರಕ್ಸೌಲ್ ಅನ್ನು ಸಂಪರ್ಕಿಸುವ ಸೇತುವೆಯ ಮೇಲೆ ಏಕಾಏಕಿ ಫಲಕವೊಂದನ್ನಿಟ್ಟು, ಇದು ತಮಗೆ ಸೇರಿದ ಜಾಗ ಎಂದು ನೇಪಾಳ ಮೂಲಕ ಮತ್ತೊಮ್ಮೆ ಗಡಿ ವಿವಾದವನ್ನು ಹುಟ್ಟು ಹಾಕಲು ಪ್ರಯತ್ನಿಸಿತು. ಆದರೆ, ನೇಪಾಳ- ಭೂತನ್ ಅಂತಾರಾಷ್ಟ್ರೀಯ ಗಡಿಯಲ್ಲಿ ಭದ್ರತೆಯ ಹೊಣೆ ಹೊತ್ತಿರುವ ಎಸ್‌ಎಸ್‌ಬಿ (ಸಶಸ್ತ್ರ ಸೀಮಾ ದಳ) ಸಿಬ್ಬಂದಿ ಮಧ್ಯಸ್ಥಿಕೆ ವಹಿಸಿದ ನಂತರ ಫಲಕವನ್ನು ತೆಗೆದು ಹಾಕಿದೆ.
ನೇಪಾಳ ಪೊಲೀಸರು ನಿನ್ನೆ ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಬಿರ್ಗುಂಜ್ ಅನ್ನು ರಕ್ಸೌಲ್ ಎಂಬ ಪ್ರದೇಶಕ್ಕೆ ಸಂಪರ್ಕಿಸುವ ಸ್ನೇಹ ಸೇತುವೆಯ ಮೇಲೆ ಫಲಕವೊಂದನ್ನು ಹಾಕಿದರು. ಇಂದಿನಿಂದ ಈ ಭೂಮಿ ನಮ್ಮದು ಎಂದು ಆ ಫಲಕದಲ್ಲಿ ಬರೆಯಲಾಗಿತ್ತು. ಸ್ಥಳೀಯ ನೇಪಾಳ ಅಧಿಕಾರಿಗಳ ದೂರವಾಣಿ ಸಂಖ್ಯೆಯನ್ನೂ ಸಹ ಅದರಲ್ಲಿ ನಮೂದಿಸಲಾಗಿತ್ತು ಎಂದು ವರದಿಗಳು ಹೇಳುತ್ತಿವೆ.
ನೇಪಾಳದ ಪಾರ್ಸಾ ಜಿಲ್ಲೆಯ ಬಿರ್ಗುಂಜ್ ಪಟ್ಟಣದ ಮಿತಿ ಈ ಹಂತದಿಂದ ಪ್ರಾರಂಭವಾಗಲಿದೆ ಎಂದು ಮಂಡಳಿ ಹೇಳಿಕೊಂಡಿದೆ. ಇದನ್ನು ಸ್ಥಳೀಯ ಬಿಹಾರ ನಿವಾಸಿಗಳು ನೇಪಾಳದ ನಡೆಯನ್ನು ತೀವ್ರವಾಗಿ ವಿರೋಧಿಸಿದರು. ನಂತರ, ಎಸ್‌ಎಸ್‌ಬಿ ಜವಾನರು ಸ್ಥಳಕ್ಕೆ ತಲುಪಿ ನೇಪಾಳ ಪೊಲೀಸರೊಂದಿಗೆ ಮಾತುಕತೆ ನಡೆಸಿದರು. ಎಸ್‌ಎಸ್‌ಬಿ ಮತ್ತು ನೇಪಾಳಿ ಪಡೆಗಳ ನಡುವೆ ಮಿಲಿಟರಿ ಮಾತುಕತೆಯ ನಂತರ, ಕಠಿಣ ನಿಲುವುಗಳನ್ನು ತೆಗೆದುಕೊಳ್ಳಲಾಗಿದೆ. ಬಳಿಕವೇ ನಂತರವೇ ಆಕ್ರಮಿತ ಫಲಕವನ್ನು ತೆಗೆದುಹಾಕಲಾಯಿತು ಎನ್ನಲಾಗಿದೆ.
ಭಾರತದ ಗಡಿಯಲ್ಲಿ ನೇಪಾಳವು ಉದ್ವಿಗ್ನತೆಯನ್ನು ಸೃಷ್ಟಿಸಿರುವುದು ಇದೇ ಮೊದಲಲ್ಲ. ಈ ಭೂಮಿಯಲ್ಲಿ ಕೋವಿಡ್-19 ವೈರಸ್ಗೆ ಬಲಿಯಾದ ವ್ಯಕ್ತಿಯ ಅಂತಿಮ-ವಿಧಿವಿಧಾನಗಳನ್ನು ನೆರವೇರಿಸಲಾಗಿದೆ. ಈ ಹಿಂದೆ ಜೂನ್‌ನಲ್ಲಿ ನೇಪಾಳವು ಭಾರತದ ಗಡಿಯಲ್ಲಿರುವ ಪಂಥೋಲಾ ಗ್ರಾಮದಲ್ಲಿ ತಾತ್ಕಾಲಿಕ ಶಿಬಿರ ಮತ್ತು ಗಡಿಯಾರ ಗೋಪುರವನ್ನು ನಿರ್ಮಿಸಿತ್ತು. ಇದು ವಿವಾದಕ್ಕೆ ನಾಂದಿ ಹಾಡಿತ್ತು.