ಹೈದರಾಬಾದ್: ಕಳ್ಳತನ ಮಾಡುವುದಕ್ಕೆ ಮನೆಯೊಂದನ್ನು ಆರಿಸಿಕೊಂಡಿದ್ದರು ಈ ಇಬ್ಬರು. ಅಲ್ಲಿ ಮೊದಲು ವ್ಯಕ್ತಿಯೊಬ್ಬ ಠಿಕಾಣಿ ಹೂಡಿದ್ದಾನೆ. ಬಳಿಕ ಮನೆಗೆಲಸದ ಅವಸರವಿದೆ ಎಂದು ತನ್ನ ಪ್ರಿಯತಮೆಯನ್ನು ಕರೆಸಿ, ದೊಡ್ಡ ಮಟ್ಟದ ಕಳ್ಳತನ ನಡೆಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಹೌದು, 15 ದಿನಗಳ ಹಿಂದೆ ನಾಚಾರಂ ಹೆಚ್ಎಂಟಿ ನಗರದಲ್ಲಿ ವೃದ್ಧ ದಂಪತಿ ಮನೆಯಲ್ಲಿ ಅರ್ಜುನ್ ಎಂಬ ವ್ಯಕ್ತಿ ಕೆಲಸಕ್ಕೆ ಸೇರಿದ್ದಾನೆ. ಬಳಿಕ ಈ ಮನೆಗೆ ಕೆಲಸದಾಳು ಅವಶ್ಯಕತೆ ಇದೆ ಎಂದು ತಿಳಿದಿದ್ದಾನೆ. ನೇಪಾಳದಲ್ಲಿರುವ ಹೆಂಡ್ತಿಯನ್ನು ಕರೆದುಕೊಂಡು ಬರಲು ಸಾಧ್ಯವಾಗದ ಹಿನ್ನೆಲೆ ಬೆಂಗಳೂರಿನಲ್ಲಿರುವ ತನ್ನ ಲವರ್ ಮಾಯಾಳನ್ನು ಮನೆಗೆಲಸಕ್ಕೆ ಕರೆಸಿಕೊಂಡಿದ್ದಾನೆ.
ಇನ್ನು ಈ ಕಳ್ಳತನದ ಪ್ರಮುಖ ಸೂತ್ರದಾರಿ ಗೋವಿಂದ್, ಈ ತಿಂಗಳ 13ರರಂದು ಹೈದರಾಬಾದ್ಗೆ ಬಂದಿದ್ದಾನೆ. ಕಳ್ಳತನ ಯಾವ ರೀತಿ ಮಾಡ್ಬೇಕು, ಮತ್ತೆ ನೇಪಾಳಗೆ ಯಾವ ರೀತಿ ಹಿಂದುರಗಬೇಕು ಎಂಬುದರ ಬಗ್ಗೆ ಅರ್ಜುನ್ ಮತ್ತು ಮಾಯಾಗೆ ಹೇಳಿ ಹೋಗಿದ್ದಾನೆ.
ಹೆಚ್ಚಿನ ಓದಿಗಾಗಿ: ಚಪಾತಿಯಲ್ಲಿ ಮತ್ತಿನ ಔಷಧ ಇರಿಸಿ 15 ಲಕ್ಷ, ಬಂಗಾರ ದೋಚಿದ ಕಳ್ಳರು: ಮುತ್ತಿನ ನಗರಿಯಲ್ಲಿ ನೇಪಾಳಿ ಗ್ಯಾಂಗ್!
ಸೂತ್ರದಾರಿ ಹೇಳಿದ ರೀತಿ ಸೋಮವಾರ ರಾತ್ರಿ ವೃದ್ಧ ದಂಪತಿಗೆ ಊಟದಲ್ಲಿ ಮತ್ತು ಭರಿಸುವ ಔಷಧ ಕಲಿಸಿ ಕೊಟ್ಟಿದ್ದಾನೆ. ಊಟ ಮಾಡಿದ ವೃದ್ಧ ದಂಪತಿ ಮೂರ್ಛೆ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿದ್ದ 10 ಲಕ್ಷ ರೂ. ನಗದು, 180 ಗ್ರಾಂ ಚಿನ್ನ ಮತ್ತು 400 ಗ್ರಾಂ ಬೆಳ್ಳಿ ದೋಚಿ ಪರಾರಿಯಾಗಿದ್ದಾರೆ. ಈ ಬಗ್ಗೆ ವೃದ್ಧ ದಂಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಪ್ರಕರಣದ ಬಗ್ಗೆ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡು ಅವರ ವಿವರಗಳನ್ನು ಕಲೆ ಹಾಕಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ ಅರ್ಜುನ್ ಮತ್ತು ಮಾಯಾ ದೋಚಿದ ವಸ್ತುಗಳ ಜೊತೆ ನೇಪಾಳ ಗಡಿ ಭಾಗವನ್ನು ತಲುಪಿರುವ ಬಗ್ಗೆ ಗುರುತಿಸಿದ್ದಾರೆ. ಒಂದೆರಡು ದಿನದಲ್ಲಿ ಅವರಿಬ್ಬರನ್ನು ಬಂಧಿಸಿ ನಗರಕ್ಕೆ ಕರೆತರುವ ಸಾಧ್ಯತೆಗಳಿವೆ. ಕಳ್ಳತನದ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ತಿಂಗಳ ಮೊದಲ ವಾರದಲ್ಲಿ ನೇಪಾಳಿ ಗ್ಯಾಂಗ್ವೊಂದು ಮನೆಗಳ್ಳತನ ನಡೆಸಿ ಎಸ್ಕೇಪ್ ಆಗಿದ್ದು ಇನ್ನೂ ಹಸಿರಾಗೇ ಇದೆ. ಇದೀಗ ಅಂತಹುದ್ದೇ ಇನ್ನೊಂದು ಪ್ರಕರಣ ವರದಿಯಾಗಿದ್ದು, ನಗರ ವಾಸಿಗಳ ನಿದ್ದೆ ಕೆಡಿಸಿದೆ.