ETV Bharat / bharat

ಪ್ರೀತಿಯ ಹುಡುಗನನ್ನು ಪರಿಚಯ ಮಾಡಿಕೊಟ್ಟ ಬಾಲಿವುಡ್​ನ ಖ್ಯಾತ ಗಾಯಕಿ ನೇಹಾ ಕಕ್ಕರ್! ಯಾರೀತ? - ನೇಹಾ ಕಕ್ಕರ್ ಮದುವೆ

ಯುವ ಗಾಯಕನೋರ್ವನಿಗೆ ಮನಸು ಕೊಟ್ಟಿರುವ ಬಾಲಿವುಡ್​ನ ಖ್ಯಾತ ಗಾಯಕಿ ನೇಹಾ ಕಕ್ಕರ್ ಶೀಘ್ರದಲ್ಲೇ ಹೊಸ ಜೀವನ ಪ್ರಾರಂಭಿಸಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ತಮ್ಮಿಷ್ಟದ ಹುಡುಗನ ಫೋಟೋವನ್ನು ಶೇರ್​ ಮಾಡುವ ಮೂಲಕ ಇನ್ನು ಮುಂದೆ ತಾವು ಸಿಂಗಲ್​ ಅಲ್ಲ ಎಂದು ಸಾರಿ ಹೇಳಿದ್ದಾರೆ.

Neha Kakkar makes romance with Rohanpreet Instagram-official
ನೇಹಾ ಕಕ್ಕರ್ ಹಾಗೂ ರೋಹನ್‌ಪ್ರೀತ್ ಸಿಂಗ್
author img

By

Published : Oct 9, 2020, 9:40 PM IST

Updated : Oct 9, 2020, 10:51 PM IST

ಮುಂಬೈ: ಬಾಲಿವುಡ್​ ಖ್ಯಾತ ಹಿನ್ನೆಲೆ ಗಾಯಕಿ ನೇಹಾ ಕಕ್ಕರ್ ತಮ್ಮ ಪ್ರೀತಿಯ ವಿಷಯವನ್ನು ಬಹಿರಂಗಗೊಳಿಸಿದ್ದಾರೆ. ಬಿಟೌನ್​ ಅಂಗಳದಲ್ಲಿ ಇಷ್ಟು ದಿನಗಳ ಕಾಲ ಹರಿದಾಡುತ್ತಿದ್ದ ತಮ್ಮ ವಿವಾಹದ ವದಂತಿಗಳಿಗೆ ಈ ಮೂಲಕ ತೆರೆ ಎಳೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ತಮ್ಮಿಷ್ಟದ ಹುಡುಗನ ಫೋಟೋವನ್ನು ಶೇರ್​ ಮಾಡಿರುವ ನೇಹಾ ಕಕ್ಕರ್, ಇನ್ನು ಮೇಲೆ ತಾವು ಸಿಂಗಲ್​ ಅಲ್ಲ ಅಂತ ಸಾರಿ ಹೇಳಿದ್ದಾರೆ. ರೋಹನ್‌ಪ್ರೀತ್ ಸಿಂಗ್ ಎಂಬ ಗಾಯಕನ ಪ್ರೀತಿಯ ಬಲೆಗೆ ಬಿದ್ದಿರುವುದನ್ನು ಖಚಿಪಡಿಸಿರುವ ನೇಹಾ ಕಕ್ಕರ್, ಪ್ರೀತಿಯ ದ್ಯೋತಕವಾಗಿ ಮನದಾಳದ ಮಾತನ್ನು ಪೋಸ್ಟ್​ ಮಾಡುವ ಮೂಲಕ ಹೊರ ಹಾಕಿದ್ದಾರೆ. ​​ಈ ಪೋಸ್ಟ್​ಗೆ ಗಾಯಕ ರೋಹನ್‌ಪ್ರೀತ್ ಸಿಂಗ್ ಈಕೆಯೇ ನನ್ನ ಜೀವನ ಎಂದು ಬರೆದುಕೊಂಡಿದ್ದಾರೆ. ರೋಹನ್‌ಪ್ರೀತ್ ಸಿಂಗ್ ಅವರೊಂದಿಗಿನ ಸಂಬಂಧ ದೃಢಪಡಿಸುತ್ತಿದ್ದಂತೆ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಶುಭ ಹಾರೈಸಿದ್ದಾರೆ.

Neha Kakkar makes romance with Rohanpreet Instagram-official
ನೇಹಾ ಕಕ್ಕರ್ ಹಾಗೂ ರೋಹನ್‌ಪ್ರೀತ್ ಸಿಂಗ್

ಇಬ್ಬರೂ ಗಾಯಕರಾಗಿದ್ದು, ತಮ್ಮ ಮನದಲ್ಲಿ ಮೊಳಕೆ ಒಡೆದ ಪ್ರೀತಿಯ ವಿಷಯವನ್ನು ಬಹಿರಂಗ ಮಾಡುವ ಮೂಲಕ ಕೆಲವರಿಗೆ ಶಾಕ್​ ಕೊಟ್ಟಿದ್ದಾರೆ. ಅ. 24 ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಮಾತು ಜೋರಾಗಿದೆ. ಇದಕ್ಕೂ ಮುನ್ನ ನೇಹಾ ಕಕ್ಕರ್ ಹಾಗೂ ರೋಹನ್‌ಪ್ರೀತ್ ಸಿಂಗ್ ಇಬ್ಬರೂ ಒಟ್ಟೊಟ್ಟಿಗೆ ಕಾಣಿಸಿಕೊಂಡಿದ್ದ ಹಲವು ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದವು. ಈಗ ತಮ್ಮೊಲವಿನ ಹುಡುಗನನ್ನು ಪರಿಚಯ ಮಾಡುತ್ತಿದ್ದಂತೆ ನೇಹಾ ಕಕ್ಕರ್ ರೆಕ್ಕೆ ಪುಕ್ಕ ಕಟ್ಟಿದ್ದ ವಿವಾಹದ ವದಂತಿಗಳಿಗೆ ಫುಲ್​ ಸ್ಟಾಪ್​ ಇಟ್ಟಿದ್ದಾರೆ.

Last Updated : Oct 9, 2020, 10:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.