ಮುಂಬೈ(ಮಹಾರಾಷ್ಟ್ರ): ದಿಲ್ಬರ್, ಗಾರ್ಮಿ, ಸನ್ನಿ ಸನ್ನಿ, ಆಂಖ್ ಮಾರೆ ಮತ್ತು ಬದ್ರಿ ಕಿ ದುಲ್ಹಾನಿಯಾ ಸೇರಿದಂತೆ ಒಂದರ ನಂತರ ಮತ್ತೊಂದು ಹಿಟ್ ಹಾಡುಗಳನ್ನು ನೀಡುವ ಮೂಲಕ ನೇಹಾ ಕಕ್ಕರ್ ಬಹು ಬೇಡಿಕೆಯ ಗಾಯಕಿಯಾಗಿದ್ದಾರೆ. ಉದ್ಯಮ ಅತ್ಯಂತ ಯಶಸ್ವಿ ಗಾಯಕರಲ್ಲಿ ಒಬ್ಬರಾದ ನೇಹಾ ಕಕ್ಕರ್, ತಾನು ಇಂದು ಇಷ್ಟು ಎತ್ತರಕ್ಕೆ ತಲುಪುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
- " class="align-text-top noRightClick twitterSection" data="
">
2012 ರಲ್ಲಿ ತೆರೆಕಂಡ 'ಕಾಕ್ಟೇಲ್' ಚಿತ್ರದ 'ಸೆಕೆಂಡ್ ಹ್ಯಾಂಡ್ ಜವಾನಿ' ಹಾಡಿನ ಮೂಲಕ ಪ್ರಾಮುಖ್ಯತೆ ಪಡೆದ ನೇಹಾ ತನ್ನ ಯಶಸ್ವಿ ಜರ್ನಿಯ ಬಗ್ಗೆ ಮನದಾಳ ಹಂಚಿಕೊಂಡಿದ್ದಾರೆ. ಉತ್ತರಾಖಂಡದ ರಿಷಿಕೇಶದಲ್ಲಿ ಜನಿಸಿದ ನೇಹಾ ತನ್ನ ಪ್ರಯಾಣ ಇಷ್ಟಕ್ಕೆ ನಿಲ್ಲಿಸಲು ಇಷ್ಟವಿಲ್ಲ. ಇನ್ನೂ ಎತ್ತರಕ್ಕೆ ಬೆಳೆಯುವ ಮಹದಾಸೆಯಿದೆ ಎಂದು ಐಎಎನ್‌ಎಸ್‌ಯೊಂದಿಗೆ ಹಂಚಿಕೊಂಡಿದ್ದಾರೆ.
- " class="align-text-top noRightClick twitterSection" data="
">
ನಾಲ್ಕನೇ ವಯಸ್ಸಿನಲ್ಲಿ ಹಾಡಲು ಪ್ರಾರಂಭಿಸಿದ ನೇಹಾ ತನ್ನ 16ನೇ ವಯಸ್ಸಿನವರೆಗೆ ಹಾಡಿದ್ದು ಭಜನಾ ಗೀತೆಗಳನ್ನು ಮಾತ್ರ. ಅಲ್ಲಿಂದ ಉದ್ಯಮದಲ್ಲಿ ರೀಮಿಕ್ಸ್ ರಾಣಿಯಾಗಿ ಬೆಳೆದಿದ್ದು ನಿಜಕ್ಕೂ ಮ್ಯಾಜಿಕ್.
- View this post on Instagram
@spotifyindia 🥰🙏🏼 #NehaKakkar #Gratitude #TopFemaleArtist #NehuDiaries #PuchdaHiNahin
">
ನೇಹಾ ಇತ್ತೀಚೆಗೆ ರಾಪರ್ ಯೋ ಯೋ ಹನಿ ಸಿಂಗ್ ಅವರೊಂದಿಗೆ 'ಮಾಸ್ಕೋ ಸುಕಾ' ಶೀರ್ಷಿಕೆಯ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಾಡು ಪಂಜಾಬಿ ಮತ್ತು ರಷ್ಯಾದ ಭಾಷೆಗಳ ಮಿಶ್ರಣವಾಗಿದೆ. ಈ ಟ್ರ್ಯಾಕ್ ಪ್ರಸ್ತುತ ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದು, 26,304,948 ವೀಕ್ಷಣೆಗಳನ್ನು ಗಳಿಸಿದೆ.