ETV Bharat / bharat

ರೈತರ ಆದಾಯ ಹೆಚ್ಚಿಸುತ್ತೆ ಈ 'ತೇಜಸ್'.. ಎನ್​ಡಿಆರ್​ಐನಿಂದ ಸಂಶೋಧನೆ..

ಈ ಹೊಸ ತೇಜಸ್ ತಳಿಯನ್ನು ಕ್ಲೋನ್ ಮಾಡಲಾದ 16 ಎಮ್ಮೆಗಳ ಹಾಲು, ಕಿವಿ, ರಕ್ತ, ವೀರ್ಯಗಳಿಂದ ಪಡೆದ ಜೀವಕೋಶಗಳನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ ಎಂದು ಚೌಹಾಣ್ ಹೇಳಿದ್ದಾರೆ..

Tejas buffalo calf
ತೇಜಸ್ ಎಮ್ಮೆಯ ತಳಿ
author img

By

Published : Sep 20, 2020, 7:33 PM IST

Updated : Sep 20, 2020, 7:39 PM IST

ಕರ್ನಾಲ್ (ಹರಿಯಾಣ): ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ (ಎನ್​ಡಿಆರ್​ಐ) ಹೆಚ್ಚಿನ ಹಾಲು ಉತ್ಪಾದನೆ ಮಾಡುವ ಎಮ್ಮೆಯ ತಳಿಯೊಂದನ್ನು ಅಭಿವೃದ್ಧಿ ಪಡಿಸಿದ್ದು, ಈ ತಳಿಯ ಗಂಡು ಕರುವಿಗೆ ತೇಜಸ್ ಎಂದು ಹೆಸರಿಟ್ಟಿದೆ.

ಕ್ಲೋನಿಂಗ್ ತಂತ್ರಜ್ಞಾನದ ಮೂಲಕ ಈ ಎಮ್ಮೆಯ ತಳಿ ಅಭಿವೃದ್ಧಿಪಡಿಸಿದ್ದು, ಎಮ್ಮೆಗಳಲ್ಲಿ ಹಾಲು ಉತ್ಪಾದನೆ ಮಾಡಲು ಇದು ಸಹಕಾರಿಯಾಗಿದೆ ಎಂದು ಎನ್‌ಡಿಆರ್‌ಐ ನಿರ್ದೇಶಕ ಮನಮೋಹನ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ರೈತರ ಆದಾಯ ಹೆಚ್ಚಿಸುವ ಭಾಗವಾಗಿ ಈ ಡೈರಿ ಸಂಶೋಧನಾ ಕೇಂದ್ರವು ದೇಶದಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು ಕೆಲಸ ಮಾಡುತ್ತಿದೆ ಎಂದು ಚೌಹಾಣ್ ಹೇಳಿದ್ದು ಈ ಹೊಸ ತಳಿಯ ಕೃತಕ ಗರ್ಭಧಾರಣೆಗೆ 2021-22ರ ವೇಳೆಗೆ 140 ಮಿಲಿಯನ್ ಡೋಸ್ ವೀರ್ಯದ ಅವಶ್ಯಕತೆ ಇದೆ. ಪ್ರಸ್ತುತ 85 ಮಿಲಿಯನ್ ಡೋಸ್​​ಗಳು ಲಭ್ಯವಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಹೊಸ ತೇಜಸ್ ತಳಿಯನ್ನು ಕ್ಲೋನ್ ಮಾಡಲಾದ 16 ಎಮ್ಮೆಗಳ ಹಾಲು, ಕಿವಿ, ರಕ್ತ, ವೀರ್ಯಗಳಿಂದ ಪಡೆದ ಜೀವಕೋಶಗಳನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ ಎಂದು ಚೌಹಾಣ್ ಹೇಳಿದ್ದಾರೆ.

2009ರಲ್ಲಿ ಎನ್‌ಡಿಆರ್‌ಐ ಈ ಸಂಸ್ಥೆಯಲ್ಲಿ ಗರಿಮಾ ಎಂಬ ಹೆಸರಿನ ಮೊದಲ ಹೆಣ್ಣು ಎಮ್ಮೆ ತದ್ರೂಪಿಯನ್ನು ಅಭಿವೃದ್ಧಿ ಪಡಿಸಿ ಪ್ರಚಲಿತಕ್ಕೆ ಬಂದಿತ್ತು. ಗರಿಮಾದ ನಂತರ ಸಾಮಾನ್ಯ ಜನನದ ಮೂಲಕ 2013 ಮತ್ತು 2014ರಲ್ಲಿ ಮಹಿಮಾ ಮತ್ತು ಕರಿಷ್ಮಾ ಎಂಬ ಎಮ್ಮೆಯ ತಳಿಗಳನ್ನು ಅಭಿವೃದ್ಧಿಪಡಿಸಿತ್ತು.

Last Updated : Sep 20, 2020, 7:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.